ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹೀಗೂ ಉಂಟು, ಹೇಗೇಗೋ ಉಂಟು!

Published : Sep 15, 2025, 07:22 PM IST

ಲಕ್ಷ್ಮೀ ನಿವಾಸದಲ್ಲಿ ಚಿನ್ನುಮರಿ ಮತ್ತೊಮ್ಮೆ ಜಯಂತ್‌ನಿಂದ ತಪ್ಪಿಸಿಕೊಂಡಿದ್ದಾಳೆ. ಸೂಪರ್ ಮಾರ್ಕೆಟ್‌ನಲ್ಲಿ ಜಯಂತ್‌ಗೆ ಸಿಕ್ಕಿಬಿದ್ದರೂ, ಕಣ್ಣಿಗೆ ಸ್ಪ್ರೇ ಹೊಡೆದು ಪರಾರಿಯಾಗಿದ್ದಾಳೆ. ವೀಕ್ಷಕರು ಈ ಟ್ವಿಸ್ಟ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

PREV
16
ಲಕ್ಷ್ಮೀ ನಿವಾಸ ಸೀರಿಯಲ್

ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಸನ್ನಿವೇಶ ಮತ್ತೆ ಮುಂದೂಡಿಕೆಯಾಗಿದೆ. ಈ ಬಾರಿಯೂ ಸೈಕೋ ಗಂಡ ಜಯಂತ್‌ನಿಂದ ಚಿನ್ನುಮರಿ ಎಸ್ಕೇಪ್ ಆಗಿದ್ದಾಳೆ. ಸೀರಿಯಲ್ ನೋಡುತ್ತಿರುವ ವೀಕ್ಷಕರು, ಹೀಗೂ ಉಂಟು, ಹೇಗೇಗೋ ಉಂಟು ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

26
ಜಯಂತ್‌ ನಿಂದ ತಪ್ಪಿಸಿಕೊಳ್ಳಲು ಪ್ರಯತ್ನ

ಸೂಪರ್ ಮಾರ್ಕೆಟ್‌ನಲ್ಲಿ ಜಯಂತ್ ಮತ್ತು ಜಾನು ಇನ್ನೇನು ಮುಖಾಮುಖಿಯಾಗುವ ದೃಶ್ಯದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಜಯಂತ್‌ ಕಣ್ಣುಗಳಿಂದ ತಪ್ಪಿಸಿಕೊಂಡು ಜಾನು ಒಂದೊಂದೆ ಹೆಜ್ಜೆಯನ್ನು ಹಿಂದೆ ಹಾಕುತ್ತಿರುತ್ತಾಳೆ. ಹಿಂದಿರುಗಿ ನೋಡಿದ್ರೆ ಅಲ್ಲಿಯೇ ಜಯಂತ್ ನಿಂತಿರುತ್ತಾನೆ. ಜಯಂತ್‌ನನ್ನು ನೋಡಿ ಜಾನು ಮತ್ತೆ ಬೆನ್ನು ಮಾಡಿ ನಿಲ್ಲುತ್ತಾಳೆ.

36
ಜಯಂತ್ ಕಣ್ಣುಗಳಿಗೆ ಸ್ಪ್ರೇ

ಅಲ್ಲಿಂದ ತಪ್ಪಿಸಿಕೊಳ್ಳುವ ಅವಸರದಲ್ಲಿ ಜಾನು, ಆಯಿಲ್ ಡಬ್ಬಗಳನ್ನು ಬೀಳಿಸುತ್ತಾಳೆ. ಜಯಂತ್ ಆಯಿಲ್ ಡಬ್ಬ ಎತ್ತಿಕೊಡುವಷ್ಟರಲ್ಲಿ ಆತನ ಕಣ್ಣಿಗೆ ಸ್ಪ್ರೇ ಎರಚಿ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾಳೆ. ಆದ್ರೆ ಜಯಂತ್ ತನ್ಮುಂದೆ ಹೋಗ್ತಿದ್ದ ಜಾನು ಕೈ ಹಿಡಿಯುತ್ತಾನೆ. ಸ್ಪರ್ಶದಿಂದಲೇ ಇದು ತನ್ನ ಚಿನ್ನುಮರಿ ಎಂಬ ಅನುಮಾನ ಮೂಡುತ್ತದೆ. ಕಣ್ಣು ಕ್ಲೀನ್ ಮಾಡಿಕೊಂಡು ನೋಡುವಷ್ಟರಲ್ಲಿ ಜಾನು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

46
ಸಿಸಿಟಿವಿ ಫೂಟೇಜ್

ಉಸಿರಿನ ಮೇಲೆ ಜಾನು ಎಲ್ಲಿ ಎಂಬುದನ್ನು ಪತ್ತೆ ಮಾಡುತ್ತಿದ್ದ ಜಯಂತ್‌ಗೆ ಈಗ ಚಿನ್ನುಮರಿಯ ಸ್ಪರ್ಶ ಗೊತ್ತಾಗಿದೆ. ನೂರಕ್ಕೆ ನೂರರಷ್ಟು ಜಾನು ಬದುಕಿರೋದು ಜಯಂತ್‌ಗೆ ಖಾತ್ರಿಯಾಗಿದೆ. ಸೂಪರ್‌ ಮಾರ್ಕೆಟ್ ಮ್ಯಾನೇಜರ್ ಬಳಿ ಹೋಗಿ ಸಿಸಿಟಿವಿ ಫೂಟೇಜ್ ತೋರಿಸುವಂತೆ ಜಯಂತ್ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ. ಆದ್ರೆ ಮ್ಯಾನೇಜರ್ ಕಡ್ಡಿ ಎರಡು ತುಂಡು ಮಾಡಿದಂತೆ ಸಿಸಿಟಿವಿ ಫೂಟೇಜ್ ಕೊಡಲ್ಲ ಎಂದು ಹೇಳಿದ್ದಾಳೆ.

56
ಹೀಗೂ ಉಂಟು, ಹೇಗೇಗೋ ಉಂಟು

ಲಕ್ಷ್ಮೀ ನಿವಾಸ ಸೀರಿಯಲ್‌ನ ಈ ಪ್ರೋಮೋ ನೋಡಿದ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಲಲಿತಾ ಎಂಬವರು ಕಮೆಂಟ್ ಮಾಡಿ, ಬಹುಶಃ CCTV ಇವತ್ತು ಹಾಳಾಗಿರುತ್ತದೆ. ಜಯಂತನನ್ನು ಹಿಂದಿನಿಂದ ನೋಡಿದ ಕೂಡಲೇ ಜಾಹ್ನವಿಗೆ ಗುರುತು ಸಿಗುತ್ತದೆ. ಆದರೆ ಜಾಹ್ನವಿ ಬೆನ್ನು ಹಾಕಿ ನಿಂತಾಗ ಜಯಂತನಿಗೆ ಗುರುತು ಸಿಗುವುದಿಲ್ಲ. ಈ ಧಾರಾವಾಹಿಯಲ್ಲಿ ಹೀಗೂ ಉಂಟು, ಹೇಗೇಗೋ ಉಂಟು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Lakshmi Nivasa Serial ನಿರ್ಮಾಪಕ ಸರದಾರ್‌ ಸತ್ಯ, ನಿರ್ಮಲಾ ಚೆನ್ನಪ್ಪ ವಿರುದ್ಧ ಸೃಜನ್‌ ಲೋಕೇಶ್‌ ದೂರು!

66
ಜಾನುಗೆ ಮಾಸ್ಕ್ ನೀಡುವಂತೆ ಮನವಿ

ಜಾನುಗೆ ಮಾಸ್ಕ್ ಆದ್ರು ಕೊಟ್ಬಿಡಿ. ಇವರಿಗೆ ಸಮುದ್ರ ದಡದಿಂದ ಎದ್ದು ಬಂದಾಗಿನಿಂದ ಪಾಪ ಮುಖ ತೋರಿಸದೇ ಬರೀ ಸೆರಗು ಮುಚ್ಕೋಳೋದೇ ಆಯ್ತು. ಮನೆಯಿಂದ ಹೊರಗೆ ಬಂದ್ರೆ ಮಾಸ್ಕ್ ಹಾಕಿಕೊಂಡ್ರೆ ಆಯ್ತು ಎಂದು ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ. ಮತ್ತೊಬ್ಬರು, ದಯವಿಟ್ಟು ಇವೆರಡು ಪಾತ್ರ ಗಳನ್ನು,ಅಂತ್ಯ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾವನಾಳ ಬಿಟ್ಟು ವಿಲನ್​ ಜೊತೆ ಸಿದ್ದೇಗೌಡ್ರ ರೊಮಾನ್ಸ್​! ಛೇ... ಇದೇನಿದು Lakshmi Nivasa ಟ್ವಿಸ್ಟ್​?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories