ಬಿಗ್‌ಬಾಸ್ 13 ಸ್ಪರ್ಧಿಗಳಿಗೆ ಕಾದಿದೆ ತ್ರಿಬಲ್ ಚಾಲೆಂಜ್? ಗಿಲ್ಲಿ, ವಿನಯ್, ಸಂಗೀತಾ ಎಂಟ್ರಿ!

Published : Aug 03, 2026, 12:01 PM IST

ಕನ್ನಡ ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭವಾಗಲಿದ್ದು, ಹೊಸ ಸ್ಪರ್ಧಿಗಳ ಆಯ್ಕೆಗೆ ಈ ಬಾರಿ ವಿಶೇಷ ಟ್ವಿಸ್ಟ್ ನೀಡಲಾಗಿದೆ ಎನ್ನಲಾಗುತ್ತಿದೆ. ಮಾಜಿ ಸ್ಪರ್ಧಿಗಳಾದ ಸಂಗೀತಾ, ವಿನಯ್ ಮತ್ತು ಗಿಲ್ಲಿ ನಟ ಕಾಣಿಸಿಕೊಂಡು, ಸ್ಪರ್ಧಿಗಳಿಗೆ ಮೂರು ಸವಾಲುಗಳನ್ನು ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

PREV
15
ಕನ್ನಡದ ಬಿಗ್‌ಬಾಸ್ ಸೀಸನ್ 13

ಕನ್ನಡದ ಬಿಗ್‌ಬಾಸ್ ಸೀಸನ್ 13ರ ರಿಯಾಲಿಟಿ ಶೋಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರವಷ್ಟೇ ಸುದೀಪ್ ಇರೋ ಪ್ರೋಮೋ ಬಿಡುಗಡೆಯಾಗಿದ್ದು, ಶೋ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಳವಾಗಿದೆ. ಈ ನಡುವೆ ಸೀಸನ್ 13ರ ಸ್ಪರ್ಧಿಗಳಾಗಬೇಕಾದ್ರೆ ಮೊದಲು ಮೂರು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಯಾಗಿದೆ.

25
ಅಂತಿಮ ಕ್ಷಣದಲ್ಲಿ ಟ್ವಿಸ್ಟ್ ಸಾಧ್ಯತೆ

ಈ ಹಿಂದಿನ ಪ್ರತಿ ಸೀಸನ್‌ನಲ್ಲಿಯೂ ಸ್ಪರ್ಧಿಗಳ ಆಯ್ಕೆ ಬಗ್ಗೆ ಅಂತಿಮ ಕ್ಷಣದಲ್ಲಿ ಟ್ವಿಸ್ಟ್ ನೀಡಲಾಗುತ್ತಿತ್ತು. ಸೀಸನ್ 12ರಲ್ಲಿ ಸ್ಪರ್ಧಿಗಳು ಒಂಟಿ ಅಥವಾ ಜಂಟಿಯಾಗಿ ಹೋಗಬೇಕಾ ಎಂಬದನ್ನು ವೀಕ್ಷಕರು ನಿರ್ಧರಿಸಿದ್ದರು. ಸೀಸನ್ 11ರಲ್ಲಿ ಸ್ವರ್ಗ ಮತ್ತು ನರಕ ಎಂಬ ಕಲ್ಪನೆಯಲ್ಲಿ ಸೀಸನ್ ಶುರುವಾಗಿತ್ತು. ಸೀಸನ್ 10ರಲ್ಲಿಯೂ ವೋಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು.

35
ಜಡ್ಜ್ ಆಗ್ತಾರಾ ಈ ಮೂವರು?

ಇದೀಗ ಸೀಸನ್ 13ರ ಓಪನಿಂಗ್ ಎಪಿಸೋಡ್‌ನಲ್ಲಿ ಮಾಜಿ ಸ್ಪರ್ಧಿಗಳಾದ ನಟಿ ಸಂಗೀತಾ ಶೃಂಗೇರಿ, ನಟ ವಿನಯ್ ಗೌಡ ಮತ್ತು ಹಾಸ್ಯ ಕಲಾವಿದ ಗಿಲ್ಲಿ ನಟ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂವರು ಸಮ್ಮತಿ ಸೂಚಿಸಿದ ನಂತರವಷ್ಟೇ ಹೊಸ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಪ್ರವೇಶ ಸಿಗಲಿದೆಯಂತೆ.

45
ಮೊದಲ ದಿನವೇ ಕುತೂಹಲ

ತೀರ್ಪುಗಾರರಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ ಮತ್ತು ಗಿಲ್ಲಿ ನಟ ಬರಲಿದ್ದಾರೆ ಎಂಬುದರ ಬಗ್ಗೆ ವಾಹಿನಿ ಅಥವಾ ಬಿಗ್‌ಬಾಸ್ ತಂಡ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಒಂದು ವೇಳೆ ಈ ಮೂವರು ತೀರ್ಪುಗಾರರಾಗಿ ಬಂದ್ರೆ ಮೊದಲ ದಿನವೇ ಶೋ ಹೆಚ್ಚು ಸದ್ದು ಮಾಡುವ ನಿರೀಕ್ಷೆಗಳಿವೆ.

55
ಸೀಸನ್ 12ರ ಸ್ಪರ್ಧಿಗಳು

ಜೂನ್‌ನಲ್ಲಿಯೇ ಪ್ರೋಮೋ ಬಿಡುಗಡೆ ಮಾಡಿದ್ದ ವಾಹಿನಿ, ಸಾಮಾನ್ಯ ಜನರನ್ನು ಸಹ ಬಿಗ್‌ಬಾಸ್‌ಗೆ ಆಹ್ವಾನಿಸಿತ್ತು. ಸಾಮಾನ್ಯ ಜನರ ಪಟ್ಟಿಯಲ್ಲಿ ಯಾರೆಲ್ಲಾ ಬರಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ಸೀಸನ್ 12ರಲ್ಲಿ ಗಿಲ್ಲಿ ನಟ, ಜಾನ್ವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಹೆಚ್ಚು ಸದ್ದು ಮಾಡಿದ್ದರು. ಅಂತಿಮವಾಗಿ ಗಿಲ್ಲಿ ನಟ ಸೀಸನ್ 12ರ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories