ಕಲಿಯುಗ ಸಿನಿಮಾವೇ ಆಯ್ತು ಲಕ್ಷ್ಮೀನಿವಾಸ; ಶ್ರೀನಿವಾಸನ ಕೈ ಕಟ್, ಜಾನುಗೆ 2ನೇ ಮದುವೆ

Published : Aug 03, 2026, 10:30 AM IST

ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯು 'ಕಲಿಯುಗ' ಸಿನಿಮಾದಂತೆ ರೋಚಕ ತಿರುವು ಪಡೆದಿದೆ. ಮಗಳು ಜಾನುಳ ಎರಡನೇ ಮದುವೆಯ ಚಿಂತೆಯಲ್ಲಿದ್ದ ಶ್ರೀನಿವಾಸ್, ಕಾರ್ ರಿಪೇರಿ ಮಾಡುವಾಗ ಅಪಘಾತದಲ್ಲಿ ಕೈ ಕಳೆದುಕೊಂಡಿದ್ದಾರೆ.

PREV
15
ರೋಚಕ ತಿರುವು

ಜೀ ಕನ್ನಡದ ಲಕ್ಷ್ಮೀ ನಿವಾಸ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದೆ ವೀಕ್ಷಕರು ಊಹೆ ಮಾಡಿದಂತೆಯೇ ಸೀರಿಯಲ್ ಕಥೆ ಕಲಿಯುಗ ಸಿನಿಮಾದಂತೆಯೇ ಸಾಗುತ್ತಿದೆ. ಕಲಿಯುಗ ಸಿನಿಮಾ ನಾಯಕ ನಟ ಮೆಕ್ಯಾನಿಕ್ ಆಗಿದ್ದು, ಕಾರ್ ರಿಪೇರಿ ವೇಳೆ ಕೈ ಕಳೆದುಕೊಳ್ಳುತ್ತಾನೆ. ಇದೀಗ ಅದೇ ರೀತಿಯಲ್ಲಿ ಶ್ರೀನಿವಾಸ್ ಕೈ ತುಂಡಾಗಿದೆ.

25
ಮಗಳು ಜಾನು ಭವಿಷ್ಯ

ಗಂಡ ಜಯಂತ್‌ನಿಂದ ದೂರವಾಗಿರುವ ಜಾನು ತವರು ಸೇರಿದ್ದಾಳೆ. ಮನೆಯಲ್ಲಿರುವ ಮಗಳಿಗೆ ಎರಡನೇ ಮದುವೆ ಮಾಡುವ ಕುರಿತು ಲಕ್ಷ್ಮೀ ಮತ್ತು ಶ್ರೀನಿವಾಸ್ ಚಿಂತಿಸುತ್ತಿದ್ದಾರೆ. ಮಗಳು ಜಾನು ಭವಿಷ್ಯದ ಚಿಂತೆಯಲ್ಲಿಯೇ ಕಾರ್ ರಿಪೇರಿ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀನಿವಾಸ್ ಕೈ ಮಷೀನ್‌ನಲ್ಲಿ ಸಿಲುಕಿದೆ. ಇದರಿಂದ ಇಡೀ ಕುಟುಂಬಕ್ಕೆ ಆಘಾತಕ್ಕೊಳಗಾಗಿದೆ.

35
2ನೇ ಮದುವೆ

ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಮಗಳು ಮನೆಗೆ ಬಂದು ಎರಡು ದಿನ ಆಗಿಲ್ಲ. ಆಗಲೇ ಆಕೆಗೆ 2ನೇ ಮದುವೆ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ಮೊದಲು ಡಿವೋರ್ಸ್ ಕೊಡಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ವಿಶ್ವನ ಜೊತೆಯಲ್ಲಿಯೇ ಜಾನು ಮದುವೆ ಆಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

45
ಮತ್ಯಾವ ಸಿನಿಮಾದ ಕಥೆ?

ಈಗಾಗಲೇ ಸೀರಿಯಲ್‌ ಹಲವು ಸಿನಿಮಾಗಳ ಕಥೆಯ ಝಲಕ್ ಹೊಂದಿದೆ. ಈಗ ಕಲಿಯುಗ, ಮುಂದೆ ಮತ್ಯಾವ ಸಿನಿಮಾದ ಕಥೆಯನ್ನು ಸೇರಿಸಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಸೀರಿಯಲ್ ಭಾಗಶಃ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ತೆರೆ ಎಳೆಯಿರಿ ಎಂಬ ಸಲಹೆಯನ್ನು ವ್ಯಕ್ತಪಡಿಸಿದ್ದಾರೆ.

55
ಜಯಂತ್ ಪಾತ್ರ ಕೊನೆ ಆಯ್ತಾ?

ಇತ್ತ ಜಯಂತ್ ಮತ್ತೆ ತನ್ನ ಪತ್ನಿಯನ್ನು ಮನೆಗೆ ಕರೆಸಿಕೊಳ್ಳಲು ಸಂತೋಷ್‌ನ ಸಹಾಯ ಪಡೆದುಕೊಳ್ಳುತ್ತಿದ್ದಾನೆ. ಜಯಂತ್ ನೀಡಿದ ಹಣದಿಂದಾಗಿ ಆತನ ಮಾತುಗಳನ್ನು ಸಂತೋಷ್ ಕೇಳುತ್ತಿದ್ದಾನೆ. ಮುಂದೆ ಜಯಂತ್ ಏನೆಲ್ಲಾ ಪ್ಲಾನ್ ಮಾಡ್ತಾನೆ ಅಥವಾ ಇಲ್ಲಿಗೆ ಆತನ ಪಾತ್ರ ಕೊನೆಯಾಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories