ತಮ್ಮ ಡಯೆಟ್ ಬಗ್ಗೆ ಮಾತನಾಡಿರುವ ಐಶ್ವರ್ಯಾ, ಹಿಂದೆ ಚಪಾತಿ, ಅನ್ನ ಮತ್ತು ಸಾಂಬಾರ್‌ನಂತಹ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದೆ. ಆದರೆ, ಈಗ ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಆಹಾರದಲ್ಲಿ ತರಕಾರಿ, ಹಣ್ಣು, ಮೊಟ್ಟೆ, ಪನೀರ್, ಸೊಪ್ಪು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇರಿಸಿಕೊಂಡಿದ್ದಾರೆ. ಅವರ ದಿನನಿತ್ಯದ ಆಹಾರದಲ್ಲಿ ಮೊಳಕೆ ಕಾಳಿನ ಪಲ್ಯ, ರಾಗಿ ಮುದ್ದೆ, ಪನೀರ್, ಮಶ್ರೂಮ್, ಸೂಪ್, ಇಡ್ಲಿ, ಮೊಟ್ಟೆ, ಬಾದಾಮಿ, ಚಪಾತಿ, ಸವತೆಕಾಯಿ, ಕ್ಯಾರೆಟ್, ಸೊಪ್ಪು, ದೋಸೆ ಮತ್ತು ಬ್ರೊಕೊಲಿ ಮುಂತಾದವುಗಳು ಸೇರಿವೆ. ಇದರ ಜೊತೆಗೆ ಪ್ರತಿದಿನ ವಾಕಿಂಗ್ ಮಾಡುವುದಕ್ಕೂ ಆದ್ಯತೆ ನೀಡುತ್ತಿದ್ದಾರೆ.
ಜಾಸ್ತಿ ನೀರು
ತೂಕ ಇಳಿಸುವ ಸಂದರ್ಭದಲ್ಲಿ ನೀರು ಕುಡಿಯುವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇನೆ ಎಂದು ಐಶ್ವರ್ಯಾ ಹೇಳಿದ್ದಾರೆ. ಈಗ ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ ಪ್ರೋಟೀನ್ ಮತ್ತು ಫೈಬರ್‌ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ತರಕಾರಿ, ಹಣ್ಣು, ಮೊಟ್ಟೆ, ಪನೀರ್ ಮತ್ತು ಸೊಪ್ಪನ್ನು ಹೆಚ್ಚಾಗಿ ತಿನ್ನುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಜಾಸ್ತಿ ನೀರು ಕುಡಿಯುತ್ತೇನೆ. ಮನೆಯ ಊಟವನ್ನೇ ತಿಂದು ಸಣ್ಣಗಾಗುತ್ತಿದ್ದೇನೆ ಎಂದು ನಟಿ ಈ ಹಿಂದೆ ಹೇಳಿದ್ದರು. ಅಂದರೆ, ಯಾವುದೇ ಕ್ರ್ಯಾಶ್ ಡಯೆಟ್‌ಗಿಂತ ಆರೋಗ್ಯಕರ ಮನೆಯ ಆಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.