ಶುಭಾ ಪೂಂಜರಂತೆ ಪ್ರೀತಿಸಿ, ಮದುವೆಯಾದ್ರೂ, ಕಡಿಮೆ ಟೈಮ್‌ನಲ್ಲಿ ಡಿವೋರ್ಸ್‌ ಪಡೆದ ಕನ್ನಡ ನಟಿಯರಿವರು!

Published : Jun 04, 2026, 08:15 PM IST

Kannada Actress Photos: ನಟಿ ಶುಭಾ ಪೂಂಜ ಅವರು ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಕೋರ್ಟ್‌ ಮೆಟ್ಟಿಲೇರಿದೆ. ಹೀಗೆ ಬಹಳ ಕಡಿಮೆ ಟೈಮ್‌ಗೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿ ದೂರ ಆದ ಕನ್ನಡ ನಟಿಯರು ಇವರು! ಯಾರು? ಯಾರು? 

PREV
18
ಶುಭ ಪೂಂಜ

ನಟಿ ಶುಭಾ ಪೂಂಜಾ ಅವರು ಸುಮಂತ್‌ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆ ನಡೆದು ನಾಲ್ಕು ವರ್ಷ ಆಗಿತ್ತು. ಈಗ ಡಿವೋರ್ಸ್‌ ತಗೊಳ್ಳಲು ಮುಂದಾಗಿದ್ದಾರೆ. 

28
ಅನುಷಾ ಹೆಗಡೆ

ನಟಿ ಅನುಷಾ ಹೆಗಡೆ ಅವರು ಪ್ರತಾಪ್‌ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರತಾಪ್‌ ಅವರು ತೆಲುಗು ನಟ. ಹೈದರಾಬಾದ್‌ನಲ್ಲಿ ಮದುವೆ ಆಗಿತ್ತು. ಮದುವೆಯಾಗಿ ಮೂರು ವರ್ಷಕ್ಕೆ ಡಿವೋರ್ಸ್‌ ಪಡೆದಿದ್ದಾರೆ.

38
ಚೈತ್ರಾ ವಾಸುದೇವನ್‌

ನಟಿ ಚೈತ್ರಾ ವಾಸುದೇವನ್‌ ಅವರು ಕೂಡ ಸತ್ಯ ನಾಯ್ಡು ಅವರನ್ನು ಮದುವೆಯಾಗಿದ್ದರು. ಇದು ಅರೇಂಜ್‌ ಮ್ಯಾರೇಜ್‌ ಆಗಿತ್ತು. ಮದುವೆಯಾಗಿ ಆರು ವರ್ಷದ ಬಳಿಕ ಈ ಜೋಡಿ ಡಿವೋರ್ಸ್‌ಗೆ ಅಪ್ಲೈ ಮಾಡಿತ್ತು.

48
ನಟಿ ದಿವ್ಯಾ ಶ್ರೀಧರ್‌

ನಟಿ ದಿವ್ಯಾ ಶ್ರೀಧರ್‌ ಹಾಗೂ ತೆಲುಗು ನಟ ಅರ್ನವ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೂ ಮೊದಲು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ,ಆಮೇಲೆ ಮನಸ್ತಾಪದಿಂದ ದೂರ ಆದರು. ಮದುವೆಯಾಗಿ ಎರಡು ವರ್ಷದೊಳಗಡೆ ದಾಂಪತ್ಯ ಅಂತ್ಯವಾಗಿದೆ.

58
ನಟಿ ಮಯೂರಿ

ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಅವರು ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಅರುಣ್‌ ಹಾಗೂ ಮಯೂರಿ ಅವರು ಹನ್ನೊಂದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಇಲ್ಲಿಯವರೆಗೆ ಮಯೂರಿ ಅವರು ಡಿವೋರ್ಸ್‌ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

68
ನಟಿ ರಾನ್ಯಾ ರಾವ್

ನಟಿ ರಾನ್ಯಾ ಅವರು ಜತಿನ್‌ ಹುಕ್ಕೇರಿ ಅವರನ್ನು 2024ರಲ್ಲಿ ಮದುವೆಯಾಗಿದ್ದರು. 2025 ರಲ್ಲಿ ಗೋಲ್ಡ್‌ ಸ್ಮಗಲಿಂಗ್‌ ಕೇಸ್‌ ಆರೋಪದಲ್ಲಿ ರಾನ್ಯಾ ಅವರು ಜೈಲಿನಲ್ಲಿದ್ದಾರೆ. ಜತಿನ್‌ ಅವರು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.

78
ಶ್ರೀದೇವಿ ಬೈರಪ್ಪ

ನಟ ಯುವರಾಜ್‌ಕುಮಾರ್‌ ಹಾಗೂ ಶ್ರೀದೇವಿ ಬೈರಪ್ಪ ಅವರು ಪ್ರೀತಿಸಿ ಮದುವೆಯಾಗಿದ್ದರು. 2019ರಲ್ಲಿ ಈ ಜೋಡಿ ಮದುವೆಯಾಗಿದ್ದು, 2024ರಿಂದಲೇ ಇವರ ಡಿವೋರ್ಸ್‌ ಕೇಸ್‌ ಕೋರ್ಟ್‌ ಮೆಟ್ಟಿಲಿನಲ್ಲಿದೆ.

88
ಕೋಳಿ ರಮ್ಯಾ

ಸೊಸೆ ತಂದ ಸೌಭಾಗ್ಯ ಧಾರಾವಾಹಿ ನಟಿ ಕೋಳಿ ರಮ್ಯಾ ಹಾಗೂ ಶಿಶಿರ್‌ ಶಾಸ್ತ್ರೀ ಅವರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಇವರ ಮದುವೆ ಕೂಡ ಮುರಿದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories