ಅಮೃತಧಾರೆ ಸೀರಿಯಲ್‌ನಲ್ಲಿ ದಿಯಾ ಪಾತ್ರವನ್ನು ಕೊನೆಗೊಳಿಸಲಾಗಿದೆ. ದಿಯಾ ಪಾತ್ರಧಾರಿ ನಟಿ ಶ್ವೇತಾ ಗೌಡ ಅವರ ನಿಜ ಜೀವನದ ಮದುವೆಯೇ ಇದಕ್ಕೆ ಕಾರಣವಾಗಿದ್ದು, ಅವರು ಇತ್ತೀಚೆಗೆ ಸುನೀಲ್ ಎಂಬುವವರನ್ನು ವರಿಸಿದ್ದಾರೆ. ಇದೀಗ ಅವರ ಕ್ಯೂಟ್ ಫೋಟೋಶೂಟ್ ವೈರಲ್ ಆಗಿದೆ.
ಸದ್ಯ ಅಮೃತಧಾರೆಯಲ್ಲಿ ದಿಯಾ ಪಾತ್ರ ಮುಗಿದಿದೆ. ಸೀರಿಯಲ್ಗೆ ಅನ್ಯಾಯ ಮಾಡದೇ, ಮಧ್ಯೆ ಕೈಕೊಡದೇ ತಮ್ಮ ದಿಯಾ ಪಾತ್ರವನ್ನು ಮುಗಿಸಿ ಹೋದವರು ನಟಿ ಶ್ವೇತಾ ಗೌಡ (Shwetha Gowda).
26
ದಿಯಾಳ ಕೊಲೆ
ಸೀರಿಯಲ್‌ನಲ್ಲಿ ದಿಯಾ ಪಾತ್ರವನ್ನು ಜೈದೇವ್ ಕೊಲೆ ಮಾಡುವ ಮೂಲಕ ಮುಗಿಸಲಾಗಿದೆ. ಸೀರಿಯಲ್‌ನಲ್ಲಿ ಸುಟ್ಟು ಬೂದಿಯಾಗಿದ್ದಾಳೆ ದಿಯಾ ಬೇಬಿ.
36
ರಿಯಲ್ ಲೈಫ್ ಮದುವೆ
ಅಷ್ಟಕ್ಕೂ ದಿಯಾ ಪಾತ್ರ ಈ ರೀತಿ ಎಂಡ್ ಮಾಡಲು ಕಾರಣವೂ ಇದೆ. ಅದೇನೆಂದರೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ರಿಯಲ್ ಲೈಫ್ನಲ್ಲಿ ಮದುವೆಯಾಗಿದ್ದಾರೆ. ಇದೇ ಮೇ 14ರಂದು ಹಳೆಬೀಡಿನಲ್ಲಿ ಮದುವೆಯಾಗಿರುವ ನಟಿ ಸದ್ಯ ಹನಿಮೂನ್ ಮೂಡ್ನಲ್ಲಿ ಇದ್ದರೆ, ಇತ್ತ ಸೀರಿಯಲ್‌ನಲ್ಲಿ ಸಾಯಿಸಿದ್ದಾರೆ.
ಕಳೆದ ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ನಟಿ ಶ್ವೇತಾ ಗೌಡ, ಇದೀಗ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ವಿಡಿಯೋ ಅನ್ನು ಶೇರ್ ಮಾಡಿಕೊಂಡಿದ್ದಾರೆ.
56
ಅರೇಂಜ್ಡ್ ಮ್ಯಾರೇಜ್
ಅದೇ ರೀತಿ ಇದೀಗ ನಟಿ ಶ್ವೇತಾ ಗೌಡ ಪಾತ್ರವನ್ನು ಸಾಯಿಸುವ ಮೂಲಕ ಅಂತ್ಯ ಮಾಡಲಾಗಿದೆ. ಶ್ವೇತಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಪತಿಯ ಹೆಸರು ಸುನೀಲ್. ಇಬ್ಬರೂ ಒಂದೇ ಊರಿನವರು. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್ ರೆಸ್ಟ್ ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್ ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್ ಆಗಿದೆ ಎಂದು ಶ್ವೇತಾ ಹೇಳಿದ್ದಾರೆ.
66
ಓದುವ ಆಸೆ
ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್ ಅವರನ್ನು ನೋಡಿದ ಮೇಲೆ ರಿಜೆಕ್ಟ್ ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ ಎಂದು ದಿಯಾ ಹೇಳಿದ್ದರು. ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಪಾತ್ರ ಮುಗಿಸಿ ಹೋದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.