ಬಿಗ್ ಬಾಸ್ ನಂತರವೂ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿಯ ಬಗ್ಗೆ ಚರ್ಚೆ ಮುಂದುವರೆದಿದೆ. ತಾವು ಸ್ನೇಹಿತರೆಂದು ಹೇಳಿಕೊಂಡರೂ, ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಯೊಂದು ಅಭಿಮಾನಿಗಳ ಮದುವೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ
ಬಿಗ್ಬಾಸ್ ಮುಗಿದು ಕೆಲವು ತಿಂಗಳು ಆಗಿದ್ದರೂ ಗಿಲ್ಲಿ ನಟನ ಹವಾ ಮುಗಿದಿಲ್ಲ. ಗಿಲ್ಲಿ ಹೆಸರು ಕೇಳಿಬರುತ್ತಿದ್ದಂತೆಯೇ ಅವರ ಹೆಸರಿನ ಜೊತೆ ಕಾವ್ಯಾ ಶೈವ ಹೆಸರು ಕೂಡ ಕೇಳಿಬರುತ್ತಿದೆ. ಅಷ್ಟಕ್ಕೂ ಇವರೇನು ಬಿಗ್ಬಾಸ್ ಮನೆಯಲ್ಲಿ ಲವರ್ಸ್ ರೀತಿಯೇನೂ ವರ್ತಿಸಿರಲಿಲ್ಲ. ಆದರೆ ಗಿಲ್ಲಿ ನಟ ಮಾತ್ರ ಕಾವು ಕಾವು ಎಂದು ತಮಾಷೆ ಮಾಡುತ್ತಿದ್ದರು ಅಷ್ಟೇ.
26
ಪ್ರೀತಿಯಲ್ಲಿ ಜೋಡಿ
ಆದರೆ ಬಿಗ್ಬಾಸ್ ಮನೆಯಲ್ಲಿ ಇವರ ಜೋಡಿ ನೋಡಿ ಇಷ್ಟಪಟ್ಟವರು ಹಲವರು. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಅಂದುಕೊಂಡವರೂ ಹಲವರು. ಆದ್ದರಿಂದ ಇವರಿಬ್ಬರ ಮದುವೆ ಮಾಡಿಸಲು ಮುಂದಾದವರೂ ಹಲವರು.
36
ಇಬ್ಬರೂ ಸ್ನೇಹಿತರಷ್ಟೇ
ಗಿಲ್ಲಿ ನಟ (Bigg Boss Gilli Nata) ಹೊರಕ್ಕೆ ಬಂದಾಗ ಕಾವ್ಯಾ ಶೈವ ಬಗ್ಗೆ ಕೇಳಿದ ಮಾತಿಗೆ, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅಂಥದ್ದೇನೂ ಇಲ್ಲ ಎಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಮಾತ್ರ ಬಿಡುತ್ತಿಲ್ಲ. ಕಾವ್ಯಾ ಶೈವ ನಮಗೆ ಇಷ್ಟ ಆಗಿದ್ದಾಳೆ. ಇಬ್ಬರನ್ನೂ ಮದುವೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ.
ಇದರ ನಡುವೆಯೇ ಕಾರ್ಯಕ್ರಮವೊಂದರಲ್ಲಿ ಈ ಜೋಡಿಯನ್ನು ಕರೆಸಲಾಗಿತ್ತು. ಅಲ್ಲ ಗಿಲ್ಲಿ ನಟ ಅವರ ಕೂದಲು ಹರಡಿ ಹೋಗಿತ್ತು. ಕಾವ್ಯಾ ಸನ್ನೆ ಮಾಡಿ ಕೂದಲನ್ನು ಸರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆಗ ಗಿಲ್ಲಿ ನಟ ಕೂದಲನ್ನು ಸರಿ ಮಾಡಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಇಷ್ಟು ದಿನ ಸುಮ್ಮನಿದ್ದ ಫ್ಯಾನ್ಸ್ ಮತ್ತೆ ಶುರುವಿಟ್ಟುಕೊಂಡಿದ್ದಾರೆ. ಇವರಿಬ್ಬರೂ ಮದುವೆಯಾಗಬೇಕು, ಜೋಡಿ ಸೂಪರ್ ಆಗಿದೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
56
ಮದುವೆ ಬಗ್ಗೆ ಅಮ್ಮನ ಮಾತು
ಗಿಲ್ಲಿ ನಟನ ಮದುವೆಯ ಬಗ್ಗೆ ಕೇಳಿದ ಮಾತಿಗೆ ಅವರ ತಾಯಿ ಈ ಹಿಂದೆ, ಅವನು ನಮಗೆ ಇಷ್ಟು ಕೀರ್ತಿ ತಂದುಕೊಟ್ಟಿದ್ದಾನೆ. ಅವನು ಇಷ್ಟಪಟ್ಟ ಹುಡುಗಿಯ ಜೊತೆ ನಾವು ಮದುವೆ ಮಾಡಿಸುತ್ತೇವೆ. ಅವನು ಯಾರನ್ನೇ ಇಷ್ಟಪಟ್ಟರೂ, ಅವರ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದರು.
66
ಜೋಡಿ ಇಷ್ಟ
ಇಷ್ಟು ಹೇಳುತ್ತಿದ್ದಂತೆಯೇ ಗಿಲ್ಲಿ ನಟನ ಅಭಿಮಾನಿಗಳು ಕಾವ್ಯಾ ಅವರನ್ನು ಎತ್ತಾಕಿಕೊಂಡು ಬಂದು ಮದುವೆ ಮಾಡಿಸುವುದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ನಮಗೆ ಅವರಿಬ್ಬರ ಜೋಡಿ ಇಷ್ಟ ಆಗಿರುವ ಕಾರಣ ಅವರನ್ನು ಮದುವೆ ಮಾಡಿಸಿಯೇ ತೀರುತ್ತೇವೆ ಎಂದಿದ್ದರು. ಇದೀಗ ಮತ್ತದೇ ವರಾತೆ ಶುರುವಿಟ್ಟುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.