Jagaddhatri Promo​: ಮೋಕ್ಷಿತಾ, ವಿಜಯ ಸೂರ್ಯ ಭರ್ಜರಿ ಎಂಟ್ರಿ- 1 ಮಿಲಿಯನ್​ ವ್ಯೂಸ್​; ಪುಟಾಣಿಯತ್ತ ಎಲ್ಲರ ಗಮನ

Published : Jun 27, 2026, 03:12 PM IST

ಜೀ ಕನ್ನಡದ ಹೊಸ ಧಾರಾವಾಹಿ 'ಜಗದ್ಧಾತ್ರಿ' ಪ್ರೊಮೋ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇದರಲ್ಲಿ ನಾಯಕಿ ಮೋಕ್ಷಿತಾ ಪೈ ಕಷ್ಟಪಡುವ ಹುಡುಗಿಯಾಗಿದ್ದು, ಹೊರಗೆ ಸೀಕ್ರೆಟ್ ಕ್ರೈಂ ಬ್ರ್ಯಾಂಚ್ ಆಫೀಸರ್ ಆಗಿ ದ್ವಿಪಾತ್ರ ನಿರ್ವಹಿಸುತ್ತಿದ್ದಾರೆ. ವಿಜಯ ಸೂರ್ಯ ಹಾಗೂ ಕವಿತಾ ಗೌಡ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

PREV
17
ಜಗದ್ಧಾತ್ರಿ ಸೀರಿಯಲ್​

ಜೀ ಕನ್ನಡದಲ್ಲಿ ಈಗ ಜಗದ್ಧಾತ್ರಿ ಸೀರಿಯಲ್​ ಪ್ರೊಮೋ ಬಿಡುಗಡೆಯಾಗಿದ್ದು, ಅತಿ ಕಡಿಮೆ ಟೈಮ್​ನಲ್ಲಿಯೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಈ ಬಗ್ಗೆ ಜೀ ವಾಹಿನಿ ಧನ್ಯವಾದ ಸಲ್ಲಿಸಿದೆ. ಇದಾಗಲೇ ಈ ಸೀರಿಯಲ್​ ರೋಚಕ ಪ್ರೊಮೋಗೆ ವೀಕ್ಷಕರು ಫಿದಾ ಆಗಿದ್ದು, ಯಾವಾಗ ಸೀರಿಯಲ್​ ಶುರು ಎಂದು ಕಾತರದಿಂದ ಕಾಯುತ್ತಿದ್ದಾರೆ.

27
ಮೋಕ್ಷಿತಾ, ಕವಿತಾ ಗೌಡ

ನಾಯಕಿ ಮೋಕ್ಷಿತಾ ಪೈ ಎನ್ನುವುದು ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋದಿಂದ ತಿಳಿದುಬಂದಿದೆ. ಇದರ ನಡುವೆಯೇ, ಕವಿತಾ ಗೌಡ ಕೂಡ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಟ ವಿಜಯ ಸೂರ್ಯ ನಾಯಕನಾಗಿದ್ದಾರೆ. ಇವರೆಲ್ಲರೂ ಇರುವ ಹೊಸ ಪ್ರೊಮೋ ಅನ್ನು ವಾಹಿನಿ ಶೇರ್​ ಮಾಡಿಕೊಂಡಿದೆ.

37
ನಾಯಕಿಗೆ ಟಾರ್ಚರ್​

ಈ ಪ್ರೊಮೋ ನೋಡಿದರೆ ನಾಯಕಿ ಮೋಕ್ಷಿತಾಗೆ ಅಮ್ಮನಿಲ್ಲ. ಇಲ್ಲಿಯೂ ಲೇಡಿ ವಿಲನ್​ ಚಿಕ್ಕಮ್ಮನ ಟಾರ್ಚರ್​ ಸಹಿಸಿಕೊಳ್ಳುತ್ತಿದ್ದಾಳೆ ನಾಯಕಿ. ಹೆಜ್ಜೆ ಹೆಜ್ಜೆಗೂ ಅಪಶುಕನ ಎನ್ನುವ ಬೈಗುಳ. ಜೊತೆಯಲ್ಲಿ ಮನೆಯ ಎಲ್ಲಾ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದಾಳೆ ನಾಯಕಿ ಜಗದ್ಧಾತ್ರಿ.

47
ಕ್ರೈಂ ಬ್ರ್ಯಾಂಚ್​ ಆಫೀಸರ್​

ಆದರೆ, ಅದೇ ವೇಳೆ Mokshita Pai ಅವರು ಕ್ರೈಂ ಬ್ರ್ಯಾಂಚ್​ ಆಫೀಸರ್​ ಕೂಡ ಆಗಿದ್ದಾರೆ. ಬಹುಶಃ ಇದು ಮನೆಯವರಿಗೆ ತಿಳಿದಿಲ್ಲ ಎನ್ನುವುದು ಸದ್ಯ ಬಿಡುಗಡೆಯಾಗಿರುವ ಪ್ರೊಮೋದಿಂದ ಅಂದಾಜಿಸಬಹುದಾಗಿದೆ. ನಾಯಕಿ ಸ್ಪೈ ಏಜೆಂಟ್ ಆಗಿದ್ದು, ಅದರ ಬಗ್ಗೆ ಮನೆಯವರಿಗೆ ಅರಿವಿದ್ದಂತಿಲ್ಲ.

57
ಪುಟಾಣಿಯ ಆಗಮನ

ಮೊದಲ ಪ್ರೊಮೋದಲ್ಲಿ ಪುಟಾಣಿಯೊಬ್ಬಳನ್ನು ಕಟ್ಟಡದ ಮೇಲಿನಿಂದ ತಳ್ಳಲು ರೌಡಿ ರೆಡಿಯಾಗುತ್ತಿರುತ್ತಾನೆ. ಆಗ ನಾಯಕಿ ಮೋಕ್ಷಿತಾ ಪೈ ಎಂಟ್ರಿ ಕೊಟ್ಟು ರೌಡಿಗಳ ಚಿಂದಿ ಉಡಾಯಿಸುತ್ತಾಳೆ. ನಾಯಕ ವಿಜಯಸೂರ್ಯನ ಎಂಟ್ರಿಯೂ ಆಗುತ್ತದೆ. ಅಲ್ಲಿ ಫೈಟಿಂಗ್​ ನಡೆಯುತ್ತದೆ.

67
ಯಾಕೀ ಬಾಲಕಿ

ಅಷ್ಟರಲ್ಲಿಯೇ ಪುಟಾಣಿಯನ್ನು ಮೇಲಿನಿಂದ ತಳ್ಳಿ ಬಿಡುತ್ತಾನೆ ರೌಡಿ. ಸಿನಿಮೀಯ ಶೈಲಿಯಲ್ಲಿ ಓಡಿ ಹೋಗಿ ಜಗದ್ಧಾತ್ರಿ ಆ ಮಗುವನ್ನು ಕಾಪಾಡುತ್ತಾಳೆ. ಆ ಬಾಲಕಿಯ ತಾಯಿಯೇ ಕವಿತಾ ಗೌಡ. ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸಿದವರು ಯಾರು ಎಂದು ಅಮ್ಮ ಕೇಳಿದಾಗ, ಬಾಲಕಿ ಅತ್ತ ಕೈ ತೋರಿಸುತ್ತಾಳೆ.

77
ಶೂಟಿಂಗ್​ನಲ್ಲಿ ಬಾಲಕಿ

ಸದ್ಯ ಇವಿಷ್ಟೇ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಈ ಸೀರಿಯಲ್​ ಶೂಟಿಂಗ್​ ಸ್ಪಾಟ್​ನಲ್ಲಿ ಆ ಪುಟಾಣಿ ಬಾಲಕಿ ಕಾಣಿಸಿಕೊಂಡಿದ್ದಾಳೆ. ವಿಜಯ ಸೂರ್ಯ ಮತ್ತು ಮೋಕ್ಷಿತಾ ಪೈ ಜೊತೆ ಆಕೆ ಕಾಣಿಸಿಕೊಂಡಿದ್ದು, ಯಾರೀಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪ್ರೊಮೋದಲ್ಲಿ ಬಾಲಕಿ ಹೈಲೈಟ್​ ಆಗಿದ್ದಾಳೆ. ಜೊತೆಗೆ ಕವಿತಾ ಗೌಡ ಮಗಳೂ ಆಗಿರುವ ಕಾರಣ, ಆಕೆಯ ರೋಲ್​ ಇನ್ನೂ ಇದ್ದಿರಲಿಕ್ಕೆ ಸಾಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories