ಬಿಗ್ ಬಾಸ್ ಕನ್ನಡ 13ರ ಅಧಿಕೃತ ಆಡಿಷನ್ ದಿನಾಂಕ ಮುಗಿದಿದ್ದರೂ, ನಟಿ ಅನುಪಮಾ ಗೌಡ ಅವರು ಜನಸಾಮಾನ್ಯರಿಗೆ ಮತ್ತೊಂದು ಅವಕಾಶ ಕಲ್ಪಿಸಿದ್ದಾರೆ. ವೈಟ್ ಗೋಲ್ಡ್ ಮನಿ ಮೂಲಕ ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಬಿಗ್ ಬಾಸ್ ಮನೆಗೆ ಹೋಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.
ಬಿಗ್ಬಾಸ್ 13 (Bigg Boss 13)ಗೆ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇದಾಗಲೇ ಕಲರ್ಸ್ ಕನ್ನಡ ವಾಹಿನಿ ಆಡಿಷನ್ಗೆ ಆಸಕ್ತರಿಗೆ ಆಹ್ವಾನ ನೀಡಿತ್ತು. ಆಡಿಷನ್ನಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿತ್ತು.
26
ಮುಗಿದ ಅಂತಿಮ ದಿನಾಂಕ
ಇದಾಗಲೇ ಅದರ ಅಂತಿಮ ದಿನಾಂಕ ಮುಗಿದು ಹೋಗಿದೆ. ಆದರೆ ಕೆಲವರಿಗೆ ಇದು ತಿಳಿಯದೇ ಛಾನ್ಸ್ ಮಿಸ್ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಅರಿವು ಇದ್ದರೂ ಯಾವುದೋ ಕಾರಣಕ್ಕೆ ಆಡಿಷನ್ ಕೊಡಲು ಸಾಧ್ಯವಾಗಲಿಲ್ಲ.
36
ಮತ್ತೊಂದು ಅವಕಾಶ
ಅವರಿಗೆ ಇದೀಗ ಆ್ಯಂಕರ್, ನಟಿ, ಅನುಪಮಾ ಗೌಡ ಅವರು ಬಿಗ್ ಗುಡ್ನ್ಯೂಸ್ ಕೊಟ್ಟಿದ್ದಾರೆ. ಅದೇನೆಂದರೆ, ಹೀಗೆ ಛಾನ್ಸ್ ಮಿಸ್ ಆದೋರಿಗೆ ಇನ್ನೊಂದು ಅವಕಾಶ ಇರುವುದಾಗಿ ಅವರು ಹೇಳಿದ್ದಾರೆ.
ವೈಟ್ಗೋಲ್ಡ್ಮನಿ ಕಡೆಯಿಂದ ಈ ಅವಕಾಶ ಕಲ್ಪಿಸುತ್ತಿರುವುದಾಗಿ ಅನುಪಮಾ ಗೌಡ (Anupama Gowda) ಅವರು ಹೇಳಿದ್ದಾರೆ. ಮೊದಲಿಗೆ ಛಾನ್ಸ್ ಮಿಸ್ ಆದವರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅವರು ವಿವರಿಸಿದ್ದಾರೆ.
56
ಏನು ಮಾಡಬೇಕು?
ಇದಕ್ಕಾಗಿ ನೀವು whitegold.money/bbkannada ಅಲ್ಲಿ ಭೇಟಿ ನೀಡಿ ಅಲ್ಲಿರುವ ಫಾರ್ಮ್ ಅನ್ನು ಭರ್ತಿ ಮಾಡಬೇಕು ಎಂದಿರುವ ನಟಿ, ಕೆಲವೊಂದು ನಿಯಮ ಮತ್ತು ಷರತ್ತುಗಳು ಇವೆ ಎಂದಿದ್ದಾರೆ. ಅದರ ಬಗ್ಗೆ ಡಿಟೇಲ್ಸ್ ಕೊಟ್ಟಿಲ್ಲ.
66
ತಡ ಏಕೆ?
ಹಾಗಿದ್ದರೆ ಇನ್ನೇಕೆ ತಡ. ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ. ಅದೃಷ್ಟ ಚೆನ್ನಾಗಿದ್ದರೆ ಬಿಗ್ಬಾಸ್ಗೆ ಹೋಗುವ ಅವಕಾಶ ಸಿಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.