ಸಿನಿಮಾ ಆಫರ್ಸ್​ ರಿಜೆಕ್ಟ್​ ಮಾಡಿದ ರಕ್ಷಿತಾ ಶೆಟ್ಟಿ: ಎಂಥ ಗೊತ್ತುಂಟಾ ಎನ್ನುತ್ತಲೇ ಕೊಟ್ರು ಇಂಟರೆಸ್ಟಿಂಗ್​ ಕಾರಣ

Published : Jun 27, 2026, 12:12 PM IST

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ, ಪ್ರಸ್ತುತ 'ಕ್ವಾಟ್ಲೆ ಕಿಚನ್' ಶೋನಲ್ಲಿ ಮನರಂಜಿಸುತ್ತಿದ್ದಾರೆ. ತಮಗೆ ಬಂದ ಸಿನಿಮಾ ಅವಕಾಶಗಳನ್ನು ತಿರಸ್ಕರಿಸಿರುವ ಅವರು, ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗಲು ಇಷ್ಟವಿಲ್ಲದ ಕಾರಣ, ತಮಗೆ ಸರಿಹೊಂದುವ ಪಾತ್ರ ಸಿಕ್ಕರೆ  ನಟಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

PREV
16
ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ

ಬಿಗ್​ ಬಾಸ್​​ (Bigg Boss 12) ಮೂಲಕ ಸಕತ್​ ಫೇಮಸ್​ ಆಗಿರೋ ರಕ್ಷಿತಾ ಶೆಟ್ಟಿ ಅವರಿಗೆ ಈಗಲೂ ಸಕತ್​ ಡಿಮಾಂಡ್​ ಇದ್ದೇ ಇದೆ. ರಿಯಾಲಿಟಿ ಷೋಗಳಲ್ಲಿ, ವಿವಿಧ ಕಾರ್ಯಕ್ರಮಗಳಲ್ಲಿ ಅವರಿಗೆ ಆಫರ್ಸ್​ ಬರುತ್ತಿರುತ್ತವೆ. ರಕ್ಷಿತಾ ಬಾಯಿ ಬಿಟ್ಟರೆ ಅಲ್ಲಿ ಹಾಸ್ಯ ಇದ್ದದ್ದೇ. ಅದರಲ್ಲಿಯೂ ಅವರ ಅರೆಬರೆ ಕನ್ನಡ ಕೇಳಲು ಖುಷಿಕೊಡುವ ಜೊತೆಗೆ ಹಾಸ್ಯದ ಲೇಪನವೂ ಅಲ್ಲಿರುತ್ತದೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕನ್ನಡವನ್ನು ಮಾತನಾಡಲು ಅವರು ಪಡುವ ಪ್ರಯತ್ನದಿಂದಲೇ ಎಲ್ಲರ ಮನ ಗೆದ್ದಿದ್ದಾರೆ ರಕ್ಷಿತಾ.

26
ಅಡುಗೆ ಷೋನಲ್ಲಿ ಕಾಮಿಡಿ

ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕ್ವಾಟ್ಲೆ ಕಿಚನ್ ಅಡುಗೆ ಷೋನಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಿತಾ ಅಲ್ಲಿಯೂ ಹಾಸ್ಯದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಹೇಳಿ ಕೇಳಿ ರಕ್ಷಿತಾ ಅಡುಗೆಯಲ್ಲಿ ಎಕ್ಸ್​ಪರ್ಟ್​. ಅದರಂತೆ ಕ್ವಾಟ್ಲೆ ಕಿಚನ್‌ ಷೋನಲ್ಲಿಯೂ ತಮ್ಮ ಅಡುಗೆಯ ಮೂಲಕ ಹಾಗೂ ಕಾಮಿಡಿಯಿಂದಾಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ.

36
ಸಿನಿಮಾ ಒಪ್ಪಿಕೊಳ್ಳದ ರಕ್ಷಿತಾ

ಸಾಮಾನ್ಯವಾಗಿ ಬಿಗ್​ಬಾಸ್​ನಲ್ಲಿ ಪ್ರಸಿದ್ಧಿ ಹೊಂದಿದ ಮೇಲೆ ಅವರಿಗೆ ಚಿತ್ರದಲ್ಲಿ ಆಫರ್​ಬರುವುದು ಸಹಜವೇ. ಅದೇ ರೀತಿ ಬಿಗ್​ಬಾಸ್​ ರನ್ನರ್​ ಅಪ್​ ಆಗಿರುವ ರಕ್ಷಿತಾ ಶೆಟ್ಟಿ ಅವರಿಗೆ ಕೂಡ ಸಿನಿಮಾದಲ್ಲಿ ಆಫರ್​ ಬಂದಿತ್ತಂತೆ. ಇದಾಗಲೇ ಗಿಲ್ಲಿ ನಟ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ತಾವು ಸಿನಿಮಾ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದು, ಅದಕ್ಕೆ ಕಾರಣ ನೀಡಿದ್ದಾರೆ.

46
ನನಗೆ ಸೂಟ್​ ಆಗ್ಬೇಕು

ಈ ಕುರಿತು ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ರಕ್ಷಿತಾ ಶೆಟ್ಟಿ, ನನಗೆ ಸಿನಿಮಾ ಆಫರ್ಸ್​ ಬಂದಿದ್ದವು. ಆದರೆ, ಕೇವಲ ಗ್ಲಾಮರ್​ ಗೊಂಬೆಯಾಗಿ ತೆರೆಮೇಲೆ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಯಾವ ರೀತಿಯ ಪಾತ್ರ ಎನ್ನುವುದು ಮುಖ್ಯವಾಗುತ್ತದೆ. ಆ ಪಾತ್ರ ನನಗೆ ಸೂಟ್​ ಆಗಬೇಕು. ಅದಕ್ಕಾಗಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.

56
ಆಫರ್ಸ್​ ಬಂದಿದ್ವು

ಒಂದೆರಡು ಸಿನಿಮಾ ಆಫರ್ಸ್​ ಬಂದಿದ್ದವು. ಸದ್ಯ ಅವುಗಳನ್ನು ಬೇಡ ಎಂದಿದ್ದೇನೆ. ಮುಂದೊಂದು ದಿನ ನನ್ನ ಪಾತ್ರಕ್ಕೆ ಸರಿ ಹೊಂದುವಂಥ, ನನ್ನ ಕ್ಯಾರೆಕ್ಟರ್​ಗೆ ಸೂಟ್​ ಆಗುವಂಥ ಸಿನಿಮಾ ಬಂದರೆ ಯೋಚನೆ ಮಾಡುತ್ತೇನೆ. ನನಗೆ ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂಬ ಆತ್ಮವಿಶ್ವಾಸ ಬರಬೇಕು. ಅಂದರೆ ಮಾತ್ರ ಸಿನಿಮಾ ಮಾಡುತ್ತೇನೆ. ಸದ್ಯ ಅಂತೂ ಅದರ ಬಗ್ಗೆ ಇಷ್ಟವಿಲ್ಲ ಎಂದಿದ್ದಾರೆ.

66
ಜಾಲತಾಣದಲ್ಲಿಯೂ ಜಿಜಿ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ರಿಯಾಲಿಟಿ ಷೋ ಜೊತೆ ಜಾಲತಾಣದಲ್ಲಿಯೂ ಸಕತ್​ ಬಿಜಿ ಆಗಿದ್ದಾರೆ. ಬಿಗ್​ಬಾಸ್​​ನ ಮ್ಯೂಟಂಟ್​ ರಘು ಜೊತೆಗೆ ಕಿಚನ್​ ವಿಡಿಯೋ ಮಾಡುತ್ತಿರುತ್ತಾರೆ. ಜೊತೆಗೆ, 'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ ಅವರ ಜೊತೆ ಸಾಕಷ್ಟು ರೀಲ್ಸ್​ ಮಾಡಿದ್ದಾರೆ. ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿರುವ ರಾಘವೇಂದ್ರ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಹೊಸಹೊಸ ಹವಾ ಸೃಷ್ಟಿಸುತ್ತಲೇ ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories