'ದೃಷ್ಟಿಬೊಟ್ಟು' ಧಾರಾವಾಹಿ ದಿಢೀರ್ ಅಂತ್ಯಗೊಂಡಿದ್ದು, ನಟ ವಿಜಯ್ ಸೂರ್ಯ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಕುರಿತು ಅವರು ನೀಡಿದ್ದ ಹಳೆಯ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ.
ಇದೇ ಸೆಪ್ಟೆಂಬರ್ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಇದಕ್ಕಾಗಿ ಕೆಲವು ಸೀರಿಯಲ್ಗಳನ್ನೂ ಮುಗಿಸಲಾಗುತ್ತಿದೆ. ಬಿಗ್ಬಾಸ್ನಲ್ಲಿ ಪಾಲ್ಗೊಳ್ಳಲು ದೃಷ್ಟಿಬೊಟ್ಟು (Drishti Bottu) ಸೀರಿಯಲ್ ದತ್ತಾಬಾಯಿ ರೋಲ್ ಮಾಡ್ತಿರೋ ನಟ ವಿಜಯ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದೇ ಕಾರಣಕ್ಕೆ, ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿ ಮಾಡಿತ್ತು. ಅದಕ್ಕೆ ತಕ್ಕಂತೆ ಸೀರಿಯಲ್ ಅನ್ನು ಕೂಡ ವೀಕ್ಷಕರು ಬೇಸರ ಪಡುವ ರೀತಿಯಲ್ಲಿಯೇ ನಟನನ್ನು ತೋರಿಸದೇ ಎಂಡ್ ಮಾಡಲಾಯಿತು.
26
Bigg Bossಗೆ ಹೋಗುವುದು ಕನ್ಫರ್ಮ್
ಈ ಕಾರಣದಿಂದ ವಿಜಯ ಸೂರ್ಯ ಅವರು Bigg Bossಗೆ ಹೋಗುವುದು ಕನ್ಫರ್ಮ್ ಎನ್ನಲಾಗಿದೆ. ಈ ಬೆನ್ನಲ್ಲೇ ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ಗೆ ಅವರ ನೀಡಿರುವ ಸಂದರ್ಶನವೊಂದು ಈಗ ಮತ್ತೆ ಶೇರ್ ಮಾಡಲಾಗಿದೆ. ಅದರಲ್ಲಿ ಕೀರ್ತಿ ಅವರು ಒಂದೊಮ್ಮೆ ಬಿಗ್ಬಾಸ್ನಿಂದ ಆಫರ್ ಬಂದು, ನಿಮಗೆ ಹತ್ತು ಕನ್ನಡದ ನಟಿಯರನ್ನು ಆಯ್ಕೆ ಮಾಡಲು ಅವಕಾಶ ಕೊಟ್ಟರೆ ಯಾರನ್ನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
36
ಆಸೆ, ಫ್ಯಾಂಟಸಿ ಹೊರಟೋಗಿದೆ ಎಂದ ನಟ
ಅದಕ್ಕೆ ವಿಜಯ ಸೂರ್ಯ ಅವರು, ಅಂಥದ್ದೊಂದು ಆಸೆ, ಫ್ಯಾಂಟಸಿ ಎಲ್ಲಾ ತುಂಬಾ ಹಿಂದೆ ಹೊರಟು ಹೋಗಿದೆ ಎಂದರು. ಆದರೆ ಬಿಗ್ಬಾಸ್ ಟಾಸ್ಕ್ ಕೊಟ್ಟ ಮೇಲೆ ಮಾಡಲೇಬೇಕು ಎಂದಾಗ ನಗುತ್ತಲೇ, 9 ಜನ ಹೆಣ್ಣುಮಕ್ಕಳ ಮಧ್ಯೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೀರ್ತಿ ಮಾಡೋದೆಲ್ಲಾ ಅವರೇ ಮಾಡಿಸ್ತಾರೆ. ನೀವು ಹೆಸರು ಹೇಳಿ ಅಂದಿದ್ದಾರೆ.
ಆಗ ವಿಜಯ ಸೂರ್ಯ ಅವರು, ಒಂದು ಕ್ಷಣ ಯೋಚಿಸಿ, ನನಗೆ ಎಲ್ಲಾ ತುಂಬಾ ಹಳೆಯ ಹೀರೋಯಿನ್ಗಳನ್ನು ಕರೆಸುವ ಆಸೆ ತುಂಬಾ ಇದೆ. ಅವರಿಂದ ನಾಲೆಜ್ಡ್ ಪಡೆದುಕೊಳ್ಳಬಹುದು ಎಂದಿದ್ದಾರೆ! ಅದಕ್ಕೆ ಕೀರ್ತಿ ಅವರು, ನಿಮ್ಮ ಪತ್ನಿ ನಿಮ್ಮಂಥ ಗಂಡನನ್ನು ಪಡೆಯಲು ತುಂಬಾ ಪುಣ್ಯ ಮಾಡಿರಬೇಕು, ಯಾವ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ರು ಎಂದು ಕೇಳಿಬಿಡಿ ಎಂದು ತಮಾಷೆ ಮಾಡಿದ್ದಾರೆ.
56
ಇಬ್ಬರು ಮಕ್ಕಳ ಅಪ್ಪ
ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಆದರೆ ಇದೀಗ ಇವರು ಮತ್ತೊಂದು ಮದ್ವೆನೂ ಆಗಿದ್ದಾರೆ. ಅದು ದೃಷ್ಟಿಬೊಟ್ಟು ಸೀರಿಯಲ್ನಲ್ಲಿ! ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಡೇಟ್ ಮತ್ತು ಮಗ ಹುಟ್ಟಿದ ಡೇಟ್ ಎರಡನ್ನೂ ಕನ್ಫ್ಯೂಸ್ ಮಾಡಿಕೊಂಡು ಸಂದರ್ಶನವೊಂದರಲ್ಲಿ ಏನೇನೋ ಹೇಳಿ ಎಡವಟ್ಟಿಗೆ ಸಿಲುಕಿದ್ದರು. ಮದುವೆಗೂ ಮುನ್ನ ಮಗ ಹುಟ್ಟಿದ್ದ ಎನ್ನುವ ರೀತಿಯಲ್ಲಿ ಅವರು ಮಾತನಾಡಿದ್ದರು.
66
ಮದುವೆ ಡೇಟ್ನಲ್ಲಿ ಎಡವಟ್ಟು
ಪತ್ನಿ ಕಂಡ್ರೆ ಭಯ ಇದ್ಯಾ, ಭಕ್ತಿ ಇದ್ಯಾ ಕೇಳಿದಾಗ, ವಿಜಯಸೂರ್ಯ ಅವರು ಪ್ರೀತಿ ಇದೆ, ಕಾಳಜಿ ಇದೆ ಎಂದಿದ್ದರು. ಮದುವೆಯಾಗಿ ಎಷ್ಟು ವರ್ಷ ಆಯ್ತು ಎಂದು ಕೇಳಿದಾಗ ನಾಲ್ಕು ವರ್ಷ ಎಂದಿದ್ದರು. ಅಪ್ಪ ಆಗಿ ಎಷ್ಟು ವರ್ಷ ಆಯ್ತು ಕೇಳಿದಾಗ ತಲೆ ಕೆಡಿಸಿಕೊಂಡರು ವಿಜಯ್. ಕೊನೆಗೆ ಐದು ವರ್ಷ ಎಂದುಬಿಡೋದೆ? ಕೊನೆಗೆ ನಟ, ಮದ್ವೆಯಾಗಿ ಎಷ್ಟು ವರ್ಷ ಆಯ್ತೋ ಅಷ್ಟು ವರ್ಷ ಎಂದು ಅಲ್ಲಿಯೂ ಎಡವಟ್ಟು ಮಾಡಿದ್ದರು. ಕೊನೆಗೆ, ಮದುವೆಯಾದ ಡೇಟ್ ಹೇಳಿ ಎಂದಾಗ ಫೆಬ್ರುವರಿ 14 ಎಂದು ಹೇಳಿದ್ದರು. ಪ್ರೇಮಿಗಳ ದಿನ ಆಗಿದ್ದರಿಂದ ಚೆನ್ನಾಗಿ ನೆನಪಿದೆ ಎಂದೂ ಹೇಳಿದ್ದರು.