ನವರಾತ್ರಿಯ ದುರ್ಗಾಷ್ಟಮಿಯಂದು 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಮಹಾ ರೋಚಕ ಸಂಚಿಕೆ ಪ್ರಸಾರವಾಗಲಿದೆ. ಮೊಮ್ಮಗಳು ಹಿತಾಳನ್ನು ಬಲಿ ಕೊಡಲು ಮಾಳವಿಕಾ ಸಿದ್ಧತೆ ನಡೆಸಿದ್ದು, ದುಷ್ಟರ ಸಂಹಾರಕ್ಕೆ ದುರ್ಗಾ ದೇವಿಯ ಅವತಾರ ಎತ್ತುತ್ತಾಳೆ. ಈ ಮೂಲಕ ದುರ್ಗಾ ಉಗ್ರರೂಪ ತಾಳಿ ಹಿತಾಳನ್ನು ಕಾಪಾಡುತ್ತಾಳೆ.
ಈಗ ನವರಾತ್ರಿಯ ಸಂಭ್ರಮ. ದುಷ್ಟರ ಸಂಹಾರಕ್ಕೆ ದುರ್ಗೆ ವಿವಿಧ ಅವತಾರಗಳನ್ನು ಎತ್ತಿ ಬರುತ್ತಾಳೆ. ನವರಾತ್ರಿಯ ಎಂಟನೆಯ ದಿನ ದುರ್ಗಾಷ್ಟಮಿ. ಅದು ಈ ವರ್ಷ ಸೆಪ್ಟೆಂಬರ್ 30ರಂದು ಬರಲಿದೆ. ಈ ದಿನ ದುರ್ಗಾ ದೇವಿಯ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಒಂದೊಂದು ದಿನವೂ ದುರ್ಗೆ ಒಂದೊಂದು ಅವತಾರ ಎತ್ತುತ್ತಾಳೆ. ಅದೇನೇ ಇದ್ದರೂ ಎಲ್ಲರ ಗುರಿ ಒಂದೇ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವುದು. ಇದೇ ಕಾರಣಕ್ಕೆ ನವರಾತ್ರಿಯಂದು ಟಿವಿ ವಾಹಿನಿಗಳಲ್ಲಿಯೂ ದುರ್ಗೆಯರ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
27
ದುರ್ಗೆಯ ಅವತಾರದಲ್ಲಿ ನಾ ನಿನ್ನ ಬಿಡಲಾರೆ ದುರ್ಗಾ
ಆದರೆ, ಎಲ್ಲಕ್ಕಿಂತಲೂ ಭಿನ್ನವಾಗಿ, ರೋಚಕಕ್ಕಿಂತಲೂ ರೋಚಕವಾಗಿರೋ ಎಪಿಸೋಡ್ ಜೀ ಕನ್ನಡದ ನಾ ನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare). ದುರ್ಗಾಷ್ಟಮಿಗೆ ದುರ್ಗೆಯ ಅವತಾರ ಎನ್ನುವ ಹೆಸರಿನಲ್ಲಿ ಇದರ ಪ್ರೊಮೋ ರಿಲೀಸ್ ಆಗಿದೆ. ಇದನ್ನು ನೋಡಿದರೆ ಮೈಯೆಲ್ಲಾ ಜುಂ ಎನ್ನುವುದಂತೂ ನಿಜ. ಈ ಎಪಿಸೋಡ್ ನೋಡಲು ಇದಾಗಲೇ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
37
ಹಿತಾಳ ಬ*ಲಿ ಸಿದ್ಧತೆ
ಅಷ್ಟಕ್ಕೂ ಈ ಸೀರಿಯಲ್ನಲ್ಲಿ ಆತ್ಮ, ಪ್ರೇತ, ಮಾಟ, ಮಂತ್ರ, ತಂತ್ರ, ಕುತಂತ್ರ, ದೇವಿಯ ಶಕ್ತಿ ಎಲ್ಲವೂ ಅಡಗಿದೆ. ಮನುಷ್ಯರನ್ನು ಬ*ಲಿ ಕೊಟ್ಟು ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದ ಸೀರಿಯಲ್ ಇದು. ಇದಾಗಲೇ ತನ್ನ ಸೊಸೆ ಅಂಬಿಕಾಳನ್ನೇ ಅತ್ತೆ ಮಾಳವಿಕಾ ಬ*ಲಿ ಕೊಟ್ಟಿದ್ದು ಆಗಿದೆ. ಆದರೆ ಇದೀಗ ಅವಳು ಮೊಮ್ಮಗಳು ಹಿತಾಳನ್ನು ಸಾಯಿಸಿ ಶಕ್ತಿಯನ್ನು ಪಡೆಯಲು ನೋಡುತ್ತಿದ್ದಾಳೆ.
ಹಿತಾಳಿಗೆ 7ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಇದರ ಏರ್ಪಾಟು ನಡೆದಿದೆ. ಆಕೆಯನ್ನು ಸಾಯಿಸುವ ಮೂಲಕ ಸರ್ವಶಕ್ತಿ ಪಡೆಯಲು ಮಾಳವಿಕಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ. ಅದರಂತೆ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಕ್ಷಸಲು ಹಿತಾಳ ಸಂಹಾರಕ್ಕೆ ಬಂದಿದ್ದಾರೆ.
57
ಕಂಗಾಲಾಗಿ ಹೋದವರೇ ಎಲ್ಲಾ
ಅದನ್ನು ತಡೆಯುವ ಶಕ್ತಿ ಅಂಬಿಕಾಳ ಆತ್ಮಕ್ಕೂ ಇಲ್ಲ, ಇನ್ನು ಮನುಷ್ಯರ ಮಾತೆಲ್ಲಿ? ಎಲ್ಲರೂ ಕಂಗಾಲಾಗಿ ಹೋಗಿದ್ದಾರೆ. ಅತ್ತ ಅಂಬಿಕಾ ಮತ್ತು ದುರ್ಗಾಳ ಅಪ್ಪ ಕೂಡ ಏನೋ ಕೆಟ್ಟ ಸೂಚನೆಯನ್ನೇ ಕೊಟ್ಟಿದ್ದಾನೆ. ಬಳಿಕ ದುರ್ಗಾಷ್ಟಮಿಯಂದೆ ದುರ್ಗಾವತಾರ ಎತ್ತುವ ಸಮಯ ಬಂದಿದೆ ಎಂದಿದ್ದಾನೆ.
67
ದುರ್ಗೆಯ ಮಡಿಲಿನಲ್ಲಿ ದುರ್ಗಾ
ಇಲ್ಲಿಂದ ನಡೆಯುವುದೇ ರೋಚಕ ತಿರುವು. ಹಿತಾಳನ್ನು ಕಾಪಾಡಲು ಬಂದ ದುರ್ಗಾಳನ್ನು ದುಷ್ಟರು ನೂಕಿದ್ದಾರೆ. ದೇವಿಯ ಮಡಿಲಿನಲ್ಲಿ ದುರ್ಗಾ ಬಿದ್ದಿದ್ದಾಳೆ. ಅಲ್ಲಿ ಆಕೆಗೆ ವಿಶೇಷ ಶಕ್ತಿ ಬಂದಿದೆ. ಅಷ್ಟಮಿ ದಿನದಂದೆ ದುರ್ಗಾ ಉಗ್ರರೂಪ ತಾಳಿದ್ದಾಳೆ. ಹಿತಾಳನ್ನು ಕಾಪಾಡಿದ್ದಾಳೆ. ದುಷ್ಟರ ಸಂಹಾರ ಮಾಡಿದ್ದಾಳೆ.
77
ದುರ್ಗಾವತಾರದಲ್ಲಿ ದುಷ್ಟರ ಸಂಹಾರ
ಈ ಮೈನವಿರೇಳುವ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಇದರ ಎಪಿಸೋಡ್ಗಾಗಿ ಕಾತರದಿಂದ ಕಾಯುತ್ತಿರುವುದಾಗಿ ನೆಟ್ಟಿಗರು ಕಮೆಂಟ್ನಲ್ಲಿ ಹಾಕಿದ್ದಾರೆ. ನಿಜ ಜೀವನದಲ್ಲಿಯೂ ದುಷ್ಟರ ಸಂಹಾರಕ್ಕೆ ದೇವಿ ಅವತರಿಸಿ ಬರಬಾರದೆ ಎಂದು ಕೆಲವರು ತಮ್ಮ ಅನಿಸಿಕೆಯನ್ನೂ ವ್ಯಕ್ತಪಡಿಸಿದ್ದಾರೆ.