ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರಕ್ಕೆ ಜೀವ ತುಂಬಿದ್ದ ನಟಿ ರಶ್ಮಿ ಪ್ರಭಾಕರ್, ಇದೀಗ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ಈ ಹಿಂದೆ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದ ನಟಿ, ಇದೀಗ ಮುದ್ದಾದ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದು, ಫೋಟೊ ವೈರಲ್ ಆಗಿದೆ.
ಹಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ (Lakshmi Baramma). ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ಲಕ್ಷ್ಮಿ ಅಂದರೆ ಲಚ್ಚಿ ಪಾತ್ರಕ್ಕೆ ಕವಿತಾ ಗೌಡ ಬಳಿಕ ಜೀವ ತುಂಬಿದ್ದು ನಟಿ ರಶ್ಮಿ ಪ್ರಭಾಕರ್.
27
ರಶ್ಮಿ ಪ್ರಭಾಕರ್
ಲಚ್ಚಿ ಎನ್ನುವ ಮುಗ್ಧ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿ, ವೀಕ್ಷಕರ ಪಾಲಿನ ಲಚ್ಚಿಯೇ ಆಗಿದ್ದ ನಟಿ ರಶ್ಮಿ ಪ್ರಭಾಕರ್ (Rashmi Prabhakar) ಇದೀಗ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೊಗಳು ವೈರಲ್ ಆಗುತ್ತಿವೆ.
37
ಅದ್ದೂರಿ ಸೀಮಂತ
ಕೆಲವು ತಿಂಗಳ ಹಿಂದೆ ರಶ್ಮಿ ಪ್ರಭಾಕರ್ ಅವರ ಸೀಮಂತ ಅದ್ದೂರಿಯಾಗಿ ನಡೆದಿತ್ತು, ಗಂಡನ ಮನೆಯಲ್ಲಿ, ತವರು ಮನೆಯಲ್ಲಿ ಹಾಗೂ ಮತ್ತೊಂದು ಬಾರಿ ಬಂಧುಮಿತ್ರರೊಂದಿಗೆ ಅದ್ದೂರಿಯಾಗಿ ನಡೆದಿತ್ತು.
ಇದೀಗ ತುಂಬು ಗರ್ಭಿಣಿ ನಟಿಯ ಬೇಬಿ ಬಂಪ್ ಫೋಟೊ ಶೂಟ್ (baby bump photoshoot) ವೈರಲ್ ಆಗುತ್ತಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಕೈಯಲ್ಲಿ ವೀಣೆ ಹಿಡಿದು ಶಾರದೆಯಂತೆ ರಶ್ಮಿ ಪೋಸ್ ಕೊಟ್ಟಿದ್ದಾರೆ. ಫೋಟೊದಲ್ಲಿ ದೈವೀಕ ಕಳೆ ಎದ್ದು ಕಾಣುತ್ತಿದೆ.
57
ಕೆಂಪು ಸೀರೆಯಲ್ಲಿ ರಶ್ಮಿ
ರಶ್ಮಿ ಪ್ರಭಾಕರ್ ಕೆಂಪು ಬಣ್ಣದ ಸೀರೆಯುಟ್ಟು, ಕೈಯಲ್ಲಿ ವೀಣೆ ಹಿಡಿದು, ಮತ್ತೊಂದು ಕೈಯಲ್ಲಿ ಬೇಬಿ ಬಂಪ್ ಮೇಲೆ ಇರಿಸಿದರೆ, ಪತಿ ನಿಖಿಲ್ ಬಿಳಿ ಬಣ್ಣದ ಪಂಚೆ, ಶರ್ಟ್ ಧರಿಸಿ, ಹೆಂಡ್ತಿ ಜೊತೆ ಪೋಸ್ ಕೊಟ್ಟಿದ್ದಾರೆ.
67
ಅಭಿಮಾನಿಗಳಿಂದ ಶುಭಾಶಯ
ರಶ್ಮಿ ಪ್ರಭಾಕರ್ ಅವರಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದು, ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ. ಯಾರ ದೃಷ್ಟಿಯೂ ಬೀಳದಿರಲಿ, ಆರೋಗ್ಯಕರವಾದ ಡೆಲಿವರಿ ಆಗಲಿ ಎಂದು ಹಾರೈಸಿದ್ದಾರೆ.
77
ರಶ್ಮಿ ನಟಿಸಿರುವ ಸೀರಿಯಲ್ ಗಳು
ಜೀ ಕನ್ನಡ ವಾಹಿನಿಯ ‘ಶುಭ ವಿವಾಹ’, ಉದಯ ಟಿವಿಯ ‘ಮಹಾಭಾರತ’, ಸ್ಟಾರ್ ಸುವರ್ಣ ವಾಹಿನಿಯ ‘ಜೀವನ ಚೈತ್ರ’ , ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ’ ಸೀರಿಯಲ್ ಸೇರಿ, ತಮಿಳು ಕಿರುತೆರೆಯಲ್ಲೂ ರಶ್ಮಿ ಜನಪ್ರಿಯತೆ ಪಡೆದಿದ್ದರು.