ಗಿಲ್ಲಿ ನಟನ ಹೆಸರಲ್ಲಿ ಮತ್ತೊಂದು ದಾಖಲೆ: Bigg Boss ಇನ್​ಸ್ಟಾಗ್ರಾಮ್​ನಲ್ಲಿಯೂ ಗೆದ್ದು ಬೀಗಿದ ಗಿಲ್ಲಿ

Published : Jan 17, 2026, 04:39 PM IST

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ನಟ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ತಮ್ಮ ವೈಯಕ್ತಿಕ ಖಾತೆ ಮಾತ್ರವಲ್ಲದೆ, ಕಲರ್ಸ್ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇವರು ಕಾಣಿಸಿಕೊಂಡ ಮೂರು ಪ್ರೊಮೋಗಳು 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಪಡೆದು ಹೊಸ ಇತಿಹಾಸ ಸೃಷ್ಟಿಸಿವೆ.

PREV
16
ದಾಖಲೆ ಮೇಲೆ ದಾಖಲೆ

ಬಿಗ್​ಬಾಸ್​​ ಗಿಲ್ಲಿ ನಟ (Bigg Boss Gilli Nata) ಅಂತೂ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ನಾಳೆ ನಡೆಯಲಿರುವ ಫಿನಾಲೆಯಲ್ಲಿ ಇವರೇ ವಿನ್​ ಆಗುವುದು ಎಂದು ಬಹುತೇಕ ಮಂದಿ ನುಡಿಯುತ್ತಿದ್ದರೂ, ಯಾರು, ಏನು ಎತ್ತ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

26
ಕೋಟ್ಯಂತರ ಮಂದಿ ಹೃದಯ ಗೆದ್ದವರು

ಬಿಗ್​ಬಾಸ್​​ ಈ ಬಾರಿಯ ಸೀಸನ್​ ಅನ್ನು ಗಿಲ್ಲಿ ನಟ ಗೆಲ್ಲುತ್ತಾರೋ, ಬಿಡುತ್ತಾರೋ ಅದು ಬೇರೆಯ ಮಾತು. ಆದರೆ, ಅವರ ಕ್ರೇಜ್​ ಎಷ್ಟಿದೆ ಎಂದರೆ, ಇದಾಗಲೇ ಅಭಿಮಾನಿಗಳ ಹೃದಯವನ್ನು ಆಳಿಬಿಟ್ಟಿದ್ದಾರೆ. ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಅವರಿಗೆ ಸಾಲು ಸಾಲು ಆಫರ್​ಗಳು ಸಿಗುವುದರಲ್ಲಿಯೂ ಯಾವುದೇ ಸಂದೇಹವಿಲ್ಲ.

36
ವೈಯಕ್ತಿಕವಾಗಿಯೂ ದಅಖಲೆ

ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿರುವ ಗಿಲ್ಲಿ, ತಮ್ಮ ವೈಯಕ್ತಿಕ ಖಾತೆ ಮಾತ್ರವಲ್ಲದೇ, ಇದೀಗ ಬಿಗ್​ಬಾಸ್​​ನ ಇನ್​ಸ್ಟಾಗ್ರಾಮ್​ ಅರ್ಥಾತ್​ ಕಲರ್ಸ್​ ವಾಹಿನಿಯ ಇನ್​ಸ್ಟಾಗ್ರಾಮ್​ನಲ್ಲಿಯೂ ದಾಖಲೆ ಬರೆದುಬಿಟ್ಟಿದ್ದಾರೆ.

46
ಗಿಲ್ಲಿ ನಟನ ಪ್ರೊಮೋಗಳು

ಇವರು, ಕಾಣಿಸಿಕೊಂಡಿರುವ ಕಾರಣಕ್ಕೆ, ಮೂರು ಪ್ರೊಮೋಗಳಿಗೆ ಹತ್ತು ಲಕ್ಷ ಅರ್ಥಾತ್​ ಒಂದು ಮಿಲಿಯನ್​ಗೂ ಅಧಿಕ ಲೈಕ್ಸ್​ ಬಂದಿರೋದು ದಾಖಲೆಯೇ ಆಗಿದೆ ಎನ್ನಲಾಗುತ್ತಿದೆ.

56
ಪ್ರೊಮೋದಲ್ಲಿ ದಾಖಲೆ

ಕಲರ್ಸ್​ ವಾಹಿನಿ ಮತ್ತು ಜಿಯೋಸ್ಟಾರ್​ನಲ್ಲಿ ಬಿಗ್​ಬಾಸ್​​ಗೆ ಸಂಬಂಧಿಸಿದ ಪ್ರೊಮೋಗಳು ಬರುತ್ತಿರುತ್ತವೆ. ಅವುಗಳಲ್ಲಿ ಗಿಲ್ಲಿ ಇರುವ ಹಲವು ಪ್ರೊಮೋಗಳೂ ಬಂದು ಹೋಗಿವೆ. ಆದರೆ ಮೂರು ಪ್ರೊಮೋಗಳಲ್ಲಿ ಒಂದು ಮಿಲಿಯನ್​ಗೂ ಅಧಿಕ ಲೈಕ್ಸ್​ ಬಂದಿರುವುದು ದಾಖಲೆ ಎನ್ನಲಾಗುತ್ತಿದೆ.

66
10 ಲಕ್ಷಕ್ಕೂ ಅಧಿಕ ಲೈಕ್ಸ್​

ಈ ಹಿಂದೆ ಸುದೀಪ್ ಅವರನ್ನು ಗಿಲ್ಲಿ ಇಮಿಟೇಟ್ ಮಾಡಿದ್ದ ಪ್ರೋಮೊ ಮೊದಲ ಬಾರಿಗೆ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿತ್ತು. ಅದಾದ ಬಳಿಕ, ಫ್ಯಾಮಿಲಿ ರೌಂಡ್‌ನಲ್ಲಿ ಗಿಲ್ಲಿ ತಂದೆ, ತಾಯಿ ಮನೆ ಒಳಗೆ ಹೋಗಿದ್ದರು. ಆಗಲೂ ಇಷ್ಟೇ ಲೈಕ್ಸ್​ ಅದಕ್ಕೆ ಸಂಬಂಧಿಸಿದ ಪ್ರೋಮೊ ಸಹ 1 ಮಿಲಿಯನ್ ಲೈಕ್ಸ್ ಸಾಧಿಸಿತ್ತು. 3ನೆಯದ್ದು ಎಂದರೆ ಈಚೆಗೆ, ಕೆಲ ದಿನಗಳ ಹಿಂದೆ ಸ್ಪರ್ಧಿಗಳಿಗೆ ಅಭಿಮಾನಿಗಳನ್ನು ಭೇಟಿಯಾಗುವ ಅವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಗಿಲ್ಲಿ ಭೇಟಿ ಮಾಡಿ ಅಭಿಮಾನಿಗಳ ಜೊತೆ ಮಾತನಾಡಿದ ಒಂದು ಪ್ರೊಮೋಗೆ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories