ಕ್ರಿಯೇಟಿವ್ ಬರಹಗಾರರಿಗೆ ಕಾಲ್ ಫಾರ್ ಮಾಡಿದ ಲೋಕೇಶ್ ಪ್ರೊಡಕ್ಷನ್ಸ್, ಗಿಲ್ಲಿಗೆ ಅವಕಾಶ ನೀಡಿ ಎಂದ ಫ್ಯಾನ್ಸ್

Published : Jan 17, 2026, 04:16 PM IST

Lokesh Productions  Bigg boss Gilli : ಬಿಗ್ ಬಾಸ್ ಫಿನಾಲೆಗೆ ಬಂದು ನಿಂತಿದೆ. ಒಂದ್ಕಡೆ ಕಪ್ ಯಾರಿಗೆ ಎನ್ನವು ಕುತೂಹಲವಿದ್ರೆ ಇನ್ನೊಂದು ಕಡೆ ಗಿಲ್ಲಿಗೆ ಜಾಬ್ ಕೊಡಿಸೋ ತಯಾರಿಯಲ್ಲಿ ಫ್ಯಾನ್ಸ್ ಇದ್ದಾರೆ.

PREV
17
ಬಿಗ್ ಬಾಸ್ ಫಿನಾಲೆ

ಈಗೇನಿದ್ರೂ ಬಿಗ್ ಬಾಸ್ ಸುದ್ದಿ.ಬಿಗ್ ಬಾಸ್ ಫಿನಾಲೆ ಯಾರ ಮುಡಿಗೆ ಎನ್ನುವ ಚರ್ಚೆ, ಗಿಲ್ಲಿ – ಅಶ್ವಿನಿ, ಕಾವ್ಯಾ, ರಕ್ಷಿತಾ, ರಘು ಅಂತ ಜನರು ಇವ್ರ ಬಗ್ಗೆಯೇ ಮಾತನಾಡ್ತಿದ್ದಾರೆ. ಅದೇನೇ ವಿಷ್ಯ ಇರಲಿ ಮಾತು ಕೊನೆಯಲ್ಲಿ ಬಂದು ನಿಲ್ಲೋದು ಬಿಗ್ ಬಾಸ್ ಮನೆ, ಗಿಲ್ಲಿಗೆ.

27
ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಕೆಲ್ಸ

ಲೋಕೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಅನೇಕ ರಿಯಾಲಿಟಿ ಶೋ ಪ್ರಸಿದ್ಧಿ ಪಡೆದಿದೆ. ಜಾ ಟಾಕೀಸ್ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಸೃಜನ್ ಲೋಕೇಶ್, ಲೋಕೇಶ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡ್ತಿದ್ದಾರೆ. ಈಗ ಬರಹಗಾರರಿಗೆ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತಿದೆ.

37
ಅರ್ಹತೆ

ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ಕ್ರಿಯೆಟಿವ್ ಬರಹಗಾರರ ಅಗತ್ಯವಿದೆ. ನೀವು ಬರವಣಿಗೆಯಲ್ಲಿ ಎತ್ತಿದ ಕೈ ಅಂದ್ರೆ ಇಲ್ಲಿಗೊಂದು ಅರ್ಜಿ ಸಲ್ಲಿಸಬಹುದು. ಅನುಭವಕ್ಕಿಂತ ಕ್ರಿಯೆಟಿವಿಟಿ ಇಲ್ಲಿ ಮುಖ್ಯ.

47
ಪೋಸ್ಟ್ ನಲ್ಲಿ ಏನಿದೆ?

ಲೋಕೇಶ್ ಪ್ರೊಡಕ್ಷನ್ಸ್ (Lokesh Production) ಗೆ ಸೃಜನಾತ್ಮಕ 2 ಕ್ರಿಯೇಟಿವ್ ಬರಹಗಾರರು (Creative Writers) ಬೇಕಾಗಿದ್ದಾರೆ. ಕಥೆ ಹೇಳುವ ಶಕ್ತಿ, ಹೊಸ ಐಡಿಯಾಗಳು, ಸ್ಕ್ರಿಪ್ಟ್ಗಳು ಮತ್ತು ಕ್ರಿಯೇಟಿವ್ ಕನ್ಸೆಪ್ಟ್ಗಳನ್ನು ರೂಪಿಸುವ ಆಸಕ್ತಿ ಇದ್ದರೆ ಇದು ನಿಮಗಾಗಿ. ಅನುಭವಕ್ಕಿಂತ ನಿಮ್ಮ ಸೃಜನಶೀಲತೆ ಮತ್ತು ಕ್ರಿಯೇಟಿವ್ ಮನಸ್ಸೇ ಮುಖ್ಯ. ಆಸಕ್ತರು ತಮ್ಮ ಕೆಲಸದ ಉದಾಹರಣೆಗಳೊಂದಿಗೆ ನಮಗೆ DM ಮಾಡಿ ಅಂತ ಇನ್ಸ್ಟಾದಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಮಾಹಿತಿ ನೀಡಿದೆ. @lokeshproductions ಗೆ ಡಿಎಂ ಮಾಡುವಂತೆ ತಿಳಿಸಿದೆ.

57
ಇಲ್ಲಿಗೂ ಬಂದ್ರು ಗಿಲ್ಲಿ

ಅದ್ಯಾವುದೇ ಪೋಸ್ಟ್ ನೋಡಿ ಎಲ್ಲ ಕಡೆ ಸದ್ಯ ಗಿಲ್ಲಿ ಹರಿದಾಡ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದು, ಸ್ಪರ್ಧಿಯೊಬ್ಬರು ಕಪ್ ಎತ್ತುವವರೆಗೂ ಗಿಲ್ಲಿ ಹೆಸರು ಎಲ್ಲ ಕಡೆ ಓಡಾಡೋದು ನಿಶ್ಚಿತ. ಕ್ರಿಯೆಟಿವಿಟಿ ಎಂದಾಗ ಗಿಲ್ಲಿ ನೆನಪಾಗೋದು ಸಹಜ. ತಮ್ಮ ಹಾಸ್ಯದಿಂದಲೇ ಬಿಗ್ ಬಾಸ್ ಫಿನಾಲೆ ತಲುಪಿರುವ ಗಿಲ್ಲಿ, ಎಲ್ಲರನ್ನು ನಗಿಸ್ತಾರೆ. ಸಂದರ್ಭಕ್ಕೆ ತಕ್ಕಂತೆ ಫಟಾ ಫಟ್ ಹಾಸ್ಯ ಮಾಡುವ ಗಿಲ್ಲಿಗೆ ಅವಕಾಶ ನೀಡುವಂತೆ ಲೋಕೇಶ್ ಪ್ರೊಡಕ್ಷನ್ಸ್ ಗೆ ಫ್ಯಾನ್ಸ್ ಕೇಳ್ತಿದ್ದಾರೆ.

67
ಕಮೆಂಟ್ ನಲ್ಲಿ ಏನಿದೆ?

ಲೋಕೇಶ್ ಪ್ರೊಡಕ್ಷನ್ಸ್ ಇನ್ಸ್ಟಾದಲ್ಲಿ ಹಾಕಿರುವ ಪೋಸ್ಟ್ ಗೆ ಜನರು ಕಮೆಂಟ್ ಮಾಡಿದ್ದಾರೆ. ಕೆಲವರು ತಮ್ಮ ಕಲೆ ಬಗ್ಗೆ ಮಾತನಾಡಿದ್ರೆ ಮತ್ತೆ ಕೆಲವರು ಗಿಲ್ಲಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಗಿಲ್ಲಿ ಅವರನ್ನು ನಿಮ್ಮ ಟೀಂಗೆ ತೆಗೆದುಕೊಳ್ಳಿ ಅಂತ ಗಿಲ್ಲಿ ಫ್ಯಾನ್ಸ್ ವಿನಂತಿ ಮಾಡಿದ್ದಾರೆ.

77
ಗಿಲ್ಲಿ ಕೆಲ್ಸ ಹುಡುಕ್ಬೇಕಾ?

ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಿದ್ದಂತೆ ಗಿಲ್ಲಿ ಅದೃಷ್ಟವೇ ಬದಲಾಗಿದೆ. ಎಲ್ಲ ಕಡೆ ಗಿಲ್ಲಿ ಹೆಸರೇ ಕೇಳಿ ಬರ್ತಿದೆ. ಈಗಾಗಲೇ ಗಿಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ದೊಡ್ಡ ದೊಡ್ಡ ಬ್ಯಾನರ್ ನಲ್ಲಿ ಗಿಲ್ಲಿ ಸಿನಿಮಾ ಮಾಡೋದು ಬಹುತೇಕ ಖಚಿತವಾಗಿದೆ. ಗಿಲ್ಲಿ ಹವಾ ಇರುವಾಗ್ಲೇ ಅದನ್ನು ಬಳಸಿಕೊಳ್ಳಲು ಅನೇಕ ನಿರ್ಮಾಪಕರು ತುದಿಗಾಲಿನಲ್ಲಿ ನಿಂತಂತಿದೆ. ಗಿಲ್ಲಿ ಮನೆಯಿಂದ ಹೊರಗೆ ಬಂದ್ಮೇಲೆ ಏನು ಮಾಡ್ತಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories