ಹೆಂಡ್ತಿ ಮುಂದೆ Bigg Boss ಫೈನಲಿಸ್ಟ್​ ಯಾವ್​ ಲೆಕ್ಕ? ಅಜ್ಜನ ಉತ್ತರಕ್ಕೆ ಕಿಚ್ಚನ ಚಪ್ಪಾಳೆ ಕೊಟ್ಟ ನೆಟ್ಟಿಗರು!

Published : Jan 17, 2026, 04:11 PM IST

ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಬಗ್ಗೆ ಅಜ್ಜನಿಗೆ ಕೇಳಿದ ಪ್ರಶ್ನೆಗೆ, ಅವರು ನೀಡಿದ ಉತ್ತರ ವೈರಲ್ ಆಗಿದೆ. ಬಿಗ್ ಬಾಸ್ ಗಿಗ್ ಬಾಸ್ ಗೊತ್ತಿಲ್ಲ, ನನಗೆ ನನ್ನ ಹೆಂಡತಿಯೇ ಇಷ್ಟ ಎಂದು ಅಜ್ಜ ಹೇಳಿದ್ದು, ನೆಟ್ಟಿಗರ ಮನಗೆದ್ದಿದೆ.

PREV
15
ಬಿಗ್​ಬಾಸ್​ ಕ್ರೇಜ್​

ಇದೀಗ ಬಿಗ್​ಬಾಸ್​ ಕ್ರೇಜ್​ ಹೆಚ್ಚಾಗತೊಡಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್​ಬಾಸ್​ ಕನ್ನಡ 2ರ ವಿಜೇತರು ಯಾರೆಂದು ತಿಳಿಯುವ ಹೊತ್ತು. ಇದಾಗಲೇ ತಮ್ಮ ತಮ್ಮ ಅಭಿಮಾನಿಗಳು ಗೆಲ್ಲಲಿ ಎಂದು ಭಾರಿ ಪ್ರಚಾರವನ್ನೂ ನಡೆಸಲಾಗುತ್ತಿದೆ.

25
ಕಂಡಕಂಡವರ ಬಳಿ...

ಇದೇ ಕಾರಣಕ್ಕೆ ಇದೀಗ ಕಂಡಕಂಡವರ ಬಳಿ ಹೋಗಿ ಬಿಗ್​ಬಾಸ್​ನಲ್ಲಿ ನಿಮಗೆ ಯಾರು ಇಷ್ಟ? ಯಾರು ಗೆಲ್ಲಬೇಕು ಎಂದು ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಅಷ್ಟಕ್ಕೂ ಬಿಗ್​ಬಾಸ್​ ಅನ್ನು ಎಲ್ಲರೂ ನೋಡುತ್ತಾರೆ ಎಂದೇ ಅಂದುಕೊಂಡವರು ಬಹಳ ಜನ. ಆದರೆ ಈ ಷೋ ಅಂದರೇನು ಎಂದು ಗೊತ್ತಿಲ್ಲದವರೂ ಇದ್ದರೆ, ಮೈತುಂಬಾ ಕೆಲಸ ಇದ್ದವರು, ಒಳ್ಳೆಯ ಪುಸ್ತಕ ಓದುವುದು ಸೇರಿದಂತೆ ಉತ್ತಮ ಹವ್ಯಾಸ ಇರುವವರು, ಕ್ರಿಯೇಟಿವ್​ ಆಗಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಅಧ್ಯಯನಶೀಲರಾಗಿರುವವರು... ಹೀಗೆ ಇಂಥ ಷೋ ನೋಡದ ದೊಡ್ಡ ವರ್ಗವೂ ಇದೆ.

35
ಬಿಗ್​ಬಾಸ್​ನಲ್ಲಿ ಯಾರಿಷ್ಟ?

ಇದೀಗ ಸೋಷಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ ಒಬ್ಬರು ಅಜ್ಜನ ಬಳಿ ಹೋಗಿ ನಿಮಗೆ ಬಿಗ್​ಬಾಸ್​ನಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದ್ದಾರೆ.

45
ಸಕತ್​ ವೈರಲ್​

ಪಾಪ ಅವರಿಗೆ ಬಿಗ್​ಬಾಸ್​ ಎಂದರೆ ಏನು ಎಂದೇ ಗೊತ್ತಿಲ್ಲ ಎನ್ನಿಸುತ್ತದೆ. ಅದಕ್ಕಾಗಿ ಅವರು ಕೊಟ್ಟ ಉತ್ತರ ಮಾತ್ರ ಅಷ್ಟೇ ಚೆನ್ನಾಗಿದ್ದು, ಇದೀಗ ಸಕತ್​ ವೈರಲ್​ ಆಗುತ್ತಿದೆ.

55
ಹೆಂಡ್ತಿ ಇಷ್ಟ

ಚಿತ್ರದುರ್ಗ ಮೀಮ್ಸ್​ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ನಿಮಗೆ ಬಿಗ್​ಬಾಸ್​ನಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದಾಗ, ಆ ಅಜ್ಜ. ಬಿಗ್​ಬಾಸ್​ ಗಿಗ್​ಬಾಸ್​ ನನಗೆ ಗೊತ್ತಿಲ್ಲಪ್ಪ. ನನಗೆ ಏನಿದ್ರೂ ನನ್ನ ಹೆಂಡ್ತಿನೇ ಇಷ್ಟ ಎನ್ನುವ ಮೂಲಕ ಹೆಂಡ್ತಿ ಮುಂದೆ ಯಾರೂ ಮೇಲಲ್ಲ ಎಂದು ಸಾರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories