Bigg Boss 12 ಮನೆಯ ತ್ರಿಕೋನ ಲವ್​ಸ್ಟೋರಿ ಈಗ ಸಿನಿಮಾ! ನಾಯಕ- ನಾಯಕಿ, ನಿರ್ದೇಶಕ ಇವರೇ ನೋಡಿ

Published : Jan 13, 2026, 01:04 PM IST

ಬಿಗ್ ಬಾಸ್ 12ರ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಪ್ರೇಮಕಥೆಯು ರಕ್ಷಿತಾ ಶೆಟ್ಟಿಯ ಆಗಮನದಿಂದ ತ್ರಿಕೋನ ಪ್ರೇಮದ ತಿರುವು ಪಡೆದಿದೆ. ಇದೀಗ ಗಿಲ್ಲಿ ನಟನೇ ತಮ್ಮ ಈ ಲವ್ ಸ್ಟೋರಿಯನ್ನು ಸಿನಿಮಾ ಕಥೆಯಾಗಿ ಹೇಳುತ್ತಿರುವುದು ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

PREV
17
ಸೋಲು-ಗೆಲುವಿನ ಲೆಕ್ಕಾಚಾರ

ಬಿಗ್​ಬಾಸ್​ 12 (Bigg Boss 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಅದರಲ್ಲಯೂ ಗಿಲ್ಲಿ ನಟನ ಹೆಸರು ಜೋರಾಗಿ ಕೇಳಿಬರುತ್ತಿದೆ. ಹೊರಗಡೆಯಲ್ಲಿ ಗಿಲ್ಲಿ ನಟನ ಹವಾನೇ ಜೋರಾಗಿದೆ.

27
ಕೊನೆ ಕ್ಷಣದವರೆಗೂ..

ಅದರ ಹೊರತಾಗಿಯೂ ಕೊನೆಯ ಕ್ಷಣಗಳವರೆಗೂ ಏನೂ ಹೇಳಲು ಆಗುವುದಿಲ್ಲ. ಇದಾಗಲೇ ಜ್ಯೋತಿಷಿ ಒಬ್ಬರು ಈ ಬಾರಿ ಮಹಿಳೆ ಗೆಲ್ಲುವುದು ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲವೂ ಕುತೂಹಲದಂತಿದೆ.

37
ಬಿಗ್​ಬಾಸ್​ನಲ್ಲಿ ಲವ್​ಸ್ಟೋರಿ

ಅದರ ನಡುವೆಯೇ, ಬಿಗ್​ಬಾಸ್​​ ಮನೆಯಲ್ಲಿನ ಈ ಬಾರಿ ಕುತೂಹಲದ ಲವ್​ಸ್ಟೋರಿಯೂ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಸುಮಾರು 90 ದಿನಗಳವರೆಗೂ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಲವ್​ಸ್ಟೋರಿ (Gilli Nata and Kavya Shaiva Love Story) ಫೇಮಸ್​​ ಆಗಿತ್ತು. ಕಾವು ಕಾವು ಎಂದು ಗಿಲ್ಲಿನಟ ಕಾವ್ಯಾ ಅವರನ್ನು ರೇಗಿಸುತ್ತಲೇ ಬಂದಿದ್ದಾರೆ.

47
ಕಾವ್ಯಾ ಉಳಿದುಕೊಂಡಿರೋದೆ...

ಒಂದು ಹಂತದಲ್ಲಿ ಗಿಲ್ಲಿ ಅವರಿಂದಲೇ ಕಾವ್ಯಾ ಉಳಿದುಕೊಂಡಿರುವುದು ಎನ್ನುವ ಮಾತು ಕೂಡ ಇದೆ. ಅದೇ ಕುತೂಹಲ ಎನ್ನುವಂತೆ ಬಿಗ್​ಬಾಸ್​​ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿಯ ಎಂಟ್ರಿ ಈ ಲವ್​ಸ್ಟೋರಿಗೆ ಸೇರಿಕೊಂಡಿದೆ.

57
ರಕ್ಷಿತಾ ಒಲವು

ನನಗೆ ಗಿಲ್ಲಿನಟನಂಥ ಹುಡುಗ ಬೇಕು. ಇವರಂತೆ ಹಾಸ್ಯ ಮಾಡಬೇಕು ಎಂದು ರಕ್ಷಿತಾ ಹೇಳಿದ್ದರು. ಇದಾದ ಬಳಿಕ ಹಲವಾರು ಬಾರಿ ಅವರು ಗಿಲ್ಲಿಯನ್ನೇ ಸಪೋರ್ಟ್​ ಮಾಡುವ ಮಾತನಾಡಿದ್ದರು. ಇದರಿಂದ ಸದ್ಯ ಬಿಗ್​ಬಾಸ್​​ ಮನೆಯಲ್ಲಿ ಟ್ರಿಯಾಂಗಲ್ ಲವ್​ಸ್ಟೋರಿ (Bigg Boss Kannada Triangle Love Story) ಎಂದೇ ಚರ್ಚೆಯಾಗುತ್ತಿದೆ.

67
ಲವ್​ಸ್ಟೋರಿ ಈಗ ಸಿನಿಮಾ!

ಇದೀಗ ಇದೇ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ಗಿಲ್ಲಿ ನಟ! ಅಷ್ಟಕ್ಕೂ ಅದೇನು ರಿಯಲ್​ ಸಿನಿಮಾ ಅಲ್ಲ. ಬದಲಿಗೆ ಒಂದು ಸಿನಿಮಾ ಸ್ಟೋರಿ ಹೇಳುತ್ತೇನೆ ಎಂದು ಹೇಳಿರೋ ಗಿಲ್ಲಿ. ಒಬ್ಬ ನಾಯಕ, ಹುಡುಗಿಯನ್ನು ಇಷ್ಟಪಡ್ತಾನೆ, ಅವಳ ಹಿಂದೆಯೇ ಹೋಗ್ತಾನೆ. ಆದರೆ ನಡುವೆ ಇನ್ನೊಬ್ಬಳ ಎಂಟ್ರಿ ಆಗುತ್ತದೆ. ಆಕೆ ನಾಯಕನನ್ನು ಲವ್​ ಮಾಡ್ತಾಳೆ ಎನ್ನೋದು ಸಿನಿಮಾ ಸ್ಟೋರಿ ಎಂದಿದ್ದಾರೆ.

77
ರಕ್ಷಿತಾ ಕೋಪ

ಆಗ ಕಾವ್ಯಾ ಶೈವ ಥೋ ಇದು ನಿನ್ನದೇ ಸ್ಟೋರಿ, ಯಾವುದೇ ಸಿನಿಮಾದ್ದು ಅಲ್ಲ ಎನ್ನುತ್ತಾರೆ. ಆಗ ಗಿಲ್ಲಿ, ಅಲ್ಲಪ್ಪ ಇದು ಸಿನಿಮಾ ಸ್ಟೋರಿ ಎಂದಾಗ ಕಾವ್ಯಾ, ಕೇಳಿಸಿಕೊಂಡ್ರಾ ರಕ್ಷಿತಾ, ನಿಮ್ಮದೇ ವಿಷ್ಯ ಹೇಳ್ತಿರೋದು ಎಂದಾಗ ಸಿಟ್ಟಿನಿಂದ ರಕ್ಷಿತಾ, ನಾನೇನೂ ಕೇಳಿಸಿಕೊಂಡಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಇದೊಂದು ಸಿನಿಮಾ ಆದ್ರೂ ಅಚ್ಚರಿಯಿಲ್ಲ, ಗಿಲ್ಲಿ ನಟನೇ ನಿರ್ದೇಶಕ ಕಮ್​ ನಾಯಕ ಎನ್ನುತ್ತಿದ್ದಾರೆ ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories