ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಶಬರಿಮಲೆ ಯಾತ್ರೆಯ ವೇಳೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಮಾಲೆ ಧರಿಸಿದ್ದ ಇನ್ನೊಬ್ಬ ಸ್ವಾಮಿಯ ದೊಡ್ಡ ಘಂಟೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಲೆ ಧರಿಸಿಕೊಂಡು ಶಬರಿಮಲೆಗೆ ತೆರಳುವ ಮಾರ್ಗ ಮಧ್ಯೆ ಧನರಾಜ್ ಆಚಾರ್ ವಿಡಿಯೋ ಮಾಡಿದ್ದರು. ಇದೀಗ ಈ ವಿಡಿಯೋಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
25
ವೈರಲ್ ವಿಡಿಯೋದಲ್ಲಿ ಏನಿದೆ?
ಸಾಮಾನ್ಯವಾಗಿ ಮೂರು ವರ್ಷದ ನಂತರ ಸ್ವಾಮಿಗಳಿಗೆ ಘಂಟೆಯನ್ನು ಕಟ್ಟುತ್ತಾರೆ. ನಾನು ಚಿಕ್ಕ ಘಂಟೆ ಕಟ್ಟೋದನ್ನು ನೋಡಿದ್ದೇನೆ. ಆದ್ರೆ ಈ ಸ್ವಾಮಿ ಅವರಿಗೆ ಇಷ್ಟು ದೊಡ್ಡ ಘಂಟೆಯನ್ನು ಕಟ್ಟಿದ್ದಾರೆ ಎಂದು ಧನರಾಜ್ ತೋರಿಸುತ್ತಾರೆ. ಘಂಟೆ ಕಟ್ಟಿಸಿಕೊಂಡಿರುವ ಸ್ವಾಮಿ ಸಹ ವಿಡಿಯೋದಲ್ಲಿ ಮಾತನಾಡಿದ್ದಾರೆ.
35
ದೊಡ್ಡ ಘಂಟೆ
ನಾನು ಗುರುಸ್ವಾಮಿ ಅವರಿಗೆ ಹೆಚ್ಚು ಉಪದ್ರ ಮಾಡುತ್ತೇನೆ ಎಂದು ದೊಡ್ಡ ಘಂಟೆಯನ್ನು ಕಟ್ಟಿದ್ದಾರೆ. ಈ ಘಂಟೆ ಸುಮಾರು 1 ಕೆಜಿ ತೂಕವಿದೆ. ತಾವು ಬಾಗಲಕೋಟೆ ಜಿಲ್ಲೆಯವರು ಎಂದು ಹೇಳಿದ್ದಾರೆ. ಧನರಾಜ್ ಆಚಾರ್ ಈ ವಿಡಿಯೋವನ್ನು ಜನವರಿ 11ರಂದು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದು, ಈವರೆಗೆ 10 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.
ಧನರಾಜ್ ಆಚಾರ್ ಅವರ ವಿಡಿಯೋಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಬಂದಿರುವ ಕೆಲವು ಕಮೆಂಟ್‌ಗಳನ್ನು ಇಲ್ಲಿ ನೀಡಲಾಗಿದೆ. ಅಯ್ಯಪ್ಪಗೆ ಹೋಗಿದ್ದೆ ಇಲ್ಲ ಶೋಕಿ ಮಡೋಕೆ ಹೋಗಿದ್ಯಾ ಮಾಲೆ ಹಾಕೊಂಡು ಇದೆಲ್ಲ ಬೇಡ ಎಂದು ಸಲಹೆ ನೀಡಿದ್ದಾರೆ. ಮಾಲೆ ಹಾಕಿಕೊಂಡು ಬೇರೆಯೊಬ್ಬ ಸ್ವಾಮಿಯನ್ನು ತಮಾಷೆ ಮಾಡೋದು ತಪ್ಪು ಎಂಬ ಕಮೆಂಟ್‌ಗಳು ಬಂದಿವೆ.
ನಿಮಗೂ ಹಾಗೂ ಶಬರಿಮಲೆಗೆ ಮಹಿಳೆಯರು ಹೋಗ್ತೀವಿ ಅಂತ ಹೇಳುವವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಮಾಲೆ ಹಾಕಿದಾಗ ಇವೆಲ್ಲಾ ಬೇಕಿತ್ತಾ? ಯಾವುದಕ್ಕೂ ಒಂದು ಮಿತಿ ಬೇಕು? ರೀ ಸ್ವಾಮಿ ಕಮೆಂಟ್, ಲೈಕ್‌ಗೋಸ್ಕರ ಏನೆಲ್ಲಾ ಮಾಡ್ತೀರಿ? ಮನೆಯಲ್ಲಿ ಯಾರಾದ್ರು ಸತ್ತರೆ, ಅಲ್ಲಿ ಹೋಗಿ ಯಾಕೆ ಇಷ್ಟೊಂದು ಅಳ್ತಾ ಇದ್ದೀರಿ ಎಂದು ವಿಡಿಯೋ ಮಾಡಿದ್ರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.