Bigg Boss Kannada: ಮೊದಲ ಬಾರಿ ಗಿಲ್ಲಿ ಬಾಯಲ್ಲಿ ರಕ್ಷಿತಾ ಹೆಸರು, ಭಾವುಕಳಾದ ವಂಶದ ಕುಡಿ

Published : Jan 13, 2026, 12:13 PM IST

Bigg Boss Kannada : ಕೊನೆಗೂ ರಕ್ಷಿತಾ ಶೆಟ್ಟಿ ಆಸೆ ಈಡೇರಿದೆ. ಸದಾ ಕಾವು ಕಾವು ಎನ್ನುತ್ತಿದ್ದ ಗಿಲ್ಲಿ, ಇದೇ ಮೊದಲ ಬಾರಿ ರಕ್ಷಿತಾ ಹೆಸರನ್ನು ಹೇಳಿದ್ದಾರೆ. ರಕ್ಷಿತಾ ಕೆಲಸವನ್ನು ಶ್ಲಾಘಿಸಿದ್ದಾರೆ.

PREV
16
ರಕ್ಷಿತಾ ಬೆಸ್ಟ್ ಫ್ರೆಂಡ್ ಗಿಲ್ಲಿ

ರಕ್ಷಿತಾ ಶೆಟ್ಟಿಗೆ ಗಿಲ್ಲಿ ಅಂದ್ರೆ ವಿಶೇಷ ಅಕ್ಕರೆ. ಗಿಲ್ಲಿಯಂತ ಗಂಡ ಸಿಗ್ಬೇಕು ಆದ್ರೆ ಗಿಲ್ಲಿ ಅಲ್ಲ ಅಂತ ರಕ್ಷಿತಾ ಅನೇಕ ಬಾರಿ ಹೇಳಿದ್ದಾರೆ. ಗಿಲ್ಲಿಯನ್ನು ರಕ್ಷಿತಾ ಸಿಕ್ಕಾಪಟ್ಟೆ ಕೇರ್ ಮಾಡ್ತಾರೆ. ಯಾವುದೇ ಟಾಸ್ಕ್ ಬರಲಿ ಗಿಲ್ಲಿಯನ್ನು ರಕ್ಷಿತಾ ಎಲ್ಲೂ ಬಿಟ್ಟುಕೊಟ್ಟಿಲ್ಲ. ಆದ್ರೆ ಯಾವುದೇ ಟಾಸ್ಕ್ ಬರಲಿ ಗಿಲ್ಲಿ ಬಾಯಲ್ಲಿ ಬರೋದು ಮಾತ್ರ ಕಾವ್ಯಾ ಹೆಸರು. ಕಾವ್ಯಾ ಸೇಫ್ ಮಾಡಲು ಅನೇಕ ಬಾರಿ ಗಿಲ್ಲಿ ಪ್ರಯತ್ನ ಮಾಡಿದ್ದಾರೆ. ಎಲ್ಲೂ ಕಾವ್ಯಾ ಅವರನ್ನು ಬಿಟ್ಟುಕೊಟ್ಟಿಲ್ಲ. ಆದ್ರೆ ಇದೇ ಮೊದಲ ಬಾರಿ ಗಿಲ್ಲಿ, ಕಾವ್ಯಾ ಬದಲು ರಕ್ಷಿತಾ ಹೆಸರನ್ನು ಹೇಳಿದ್ದಾರೆ.

26
ರಕ್ಷಿತಾ ಭಾವುಕ

ಊಟ – ತಿಂಡಿ ವಿಷ್ಯದಲ್ಲಿ ಗಿಲ್ಲಿ ನಿರ್ಲಕ್ಷ್ಯ ಜಾಸ್ತಿ. ತಟ್ಟೆ ಕೂಡ ಕ್ಲೀನ್ ಮಾಡೋದಿಲ್ಲ. ಹಾಗಿರುವಾಗ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ತುಂಬಾ ಕೇರ್ ಮಾಡಿದ್ದಾರೆ. ಅಮ್ಮನಂತೆ ನನ್ನ ಊಟ – ತಿಂಡಿಯ ಬಗ್ಗೆ ಸಂಪೂರ್ಣ ಕಾಳಜಿವಹಿಸಿದ್ದಾರೆ. ರಕ್ಷಿತಾ ನೋಡಿದ್ರೆ ನನಗೆ ನಮ್ಮ ಅಮ್ಮನ ನೆನಪಾಗುತ್ತದೆ ಎಂದು ಗಿಲ್ಲಿ ಹೇಳಿದ್ದಾರೆ. ಗಿಲ್ಲಿ ಈ ಮಾತನ್ನು ಕೇಳಿ ರಕ್ಷಿತಾ ಭಾವುಕಳಾಗಿದ್ದಾರೆ. ಕಣ್ಣಂಚಲ್ಲಿ ನೀರು ಬಂದಿದೆ.

36
ಗಿಲ್ಲಿಗೆ ಜ್ಞಾನೋದಯ ಆಯ್ತಾ?

ಬಿಗ್ ಬಾಸ್ ಮನೆಯ 16 ವಾರಗಳ ಜರ್ನಿಯಲ್ಲಿ ಗಿಲ್ಲಿ, ಸ್ನೇಹಿತೆ, ಪ್ರೀತಿ, ಗಿಫ್ಟ್ ಹೀಗೆ ಏನೇ ವಿಷ್ಯ ಬಂದ್ರೂ ಕಾವ್ಯಾ ಹೆಸರನ್ನು ಹೇಳ್ತಾ ಇದ್ರು. ಈ ಬಾರಿ ರಕ್ಷಿತಾ ಹೆಸರು ಹೇಳಿದ್ದು, ಫ್ಯಾನ್ಸ್ ಗೆ ಇಷ್ಟವಾಗಿದೆ. ಈಗಲಾದ್ರೂ ಗಿಲ್ಲಿಗೆ ರಕ್ಷಿತಾ ಮಹತ್ವ ಗೊತ್ತಾಯ್ತಲ್ಲ ಅಂತ ಕಮೆಂಟ್ ಮಾಡಿದ್ದಾರೆ.

46
ಎಲ್ಲರನ್ನು ಕೇರ್ ಮಾಡ್ತಾರೆ ರಕ್ಷಿತಾ

ರಕ್ಷಿತಾ, ಪೊಸೆಸಿವ್ ಹುಡುಗಿ ಅಂತಾನೇ ಬಿಗ್ ಬಾಸ್ ಮನೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ರಘು ಹಾಗೂ ಗಿಲ್ಲಿ ಕಂಡ್ರೆ ರಕ್ಷಿತಾಗೆ ವಿಶೇಷ ಅಕ್ಕರೆ. ಅವರಿಗೆ ಸ್ವಲ್ಪ ತೊಂದ್ರೆ ಆದ್ರೂ ರಕ್ಷಿತಾ ಸಹಿಸೋದಿಲ್ಲ. ಸದಾ ಅವರ ಸೇವೆಗೆ ರಕ್ಷಿತಾ ಸಿದ್ಧವಿರ್ತಾರೆ. ಟಾಸ್ಕ್ ನಲ್ಲಿ ಕೂಡ ಗಿಲ್ಲಿ ಗೆಲ್ಲಬೇಕು ಎಂಬ ಆಸೆ ರಕ್ಷಿತಾ ಕಣ್ಣಲ್ಲಿ ಕಾಣ್ತಿರುತ್ತದೆ. ಪ್ರತಿ ಬಾರಿ ಇಂಥ ಪ್ರಶ್ನೆ ಬಂದಾಗ, ಗಿಲ್ಲಿ ತನ್ನ ಹೆಸರು ಹೇಳ್ತಾರೆ ಎನ್ನುವ ಆಸೆಯೊಂದು ರಕ್ಷಿತಾ ಕಣ್ಣಲ್ಲಿ ಕಾಣಿಸ್ತಿತ್ತು. ಪ್ರತಿ ಬಾರಿ ನಿರಾಸೆ ಆಗ್ತಿತ್ತು. ಆದ್ರೀಗ ರಕ್ಷಿತಾ ಖುಷಿಯಾಗಿದ್ದಾರೆ.

56
ಗಿಲ್ಲಿಗೆ ಮೊಟ್ಟೆ ನೀಡಿ ಊಟ ಎಂಜಾಯ್ ಮಾಡಿದ ರಕ್ಷಿತಾ

ಗಿಲ್ಲಿ, ಕಿಚ್ಚ ಸುದೀಪ್ ನೀಡಿದ್ದ ಟಾಸ್ಕ್ ನಂತೆ ಪುಲಾವ್ ಮಾಡಿದ್ದರು. ಅದನ್ನು ಮನೆಯ ಎಲ್ಲ ಸ್ಪರ್ಧಿಗಳು ಟೀಕಿಸಿದ್ದರು. ಆದ್ರೆ ರಕ್ಷಿತಾ ಮಾತ್ರ ಮಾತನಾಡದೆ ಎಲ್ಲವನ್ನೂ ತಿಂದಿದ್ದರು. ಆ ನಂತ್ರ ಗಿಲ್ಲಿಗೆ ಏಳು ಮೊಟ್ಟೆಯನ್ನು ರಕ್ಷಿತಾ ನೀಡಿದ್ದಾರೆ. ಹೊಟ್ಟೆ ಹಾಳಾದ್ರೆ ಜೀರಿಗೆ ನೀರು ನಾನೇ ಮಾಡಿಕೊಡ್ತೇನೆ ಎಂದಿದ್ದಾರೆ.

66
ಕಾವ್ಯಾ ಮೇಲೆ ಫ್ಯಾನ್ಸ್ ಮುನಿಸು

ಗಿಲ್ಲಿ ಅಭಿಮಾನಿಗಳು ರಕ್ಷಿತಾ ಕಾಳಜಿಯನ್ನು ಮೆಚ್ಚಿಕೊಂಡಿದ್ದಾರೆ. ಕಾವ್ಯಾ ಸೇರಿದಂತೆ ಬಿಗ್ ಬಾಸ್ ಮನೆ ಹುಡುಗಿಯರು ಗಿಲ್ಲಿಗೆ ಸಾಕಷ್ಟು ಅವಮಾನ ಮಾಡಿದ್ದಾರೆ. ಆದ್ರೆ ರಕ್ಷಿತಾ ಎಂದೂ ಈ ಕೆಲ್ಸ ಮಾಡಿಲ್ಲ. ಗಿಲ್ಲಿ ಈ ಮಾತು ಸರಿಯಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories