Nandagokula Serial ಅದ್ಭುತವಾಗಿ ಮೂಡಿ ಬರುತ್ತಿದೆ. ತುಂಬು ಕುಟುಂಬದ ಕಥೆಯನ್ನು ಹೇಳುತ್ತಿರುವ ಈ ಧಾರಾವಾಹಿಯಲ್ಲಿ ಇದೀಗ ಮಾಧವನ ಮದುವೆಯ ಸಂಭ್ರಮ ನಡೆಯುತ್ತಿದ್ದು, ಪ್ರತಿಯೊಂದು ಮನೆಯಲ್ಲೂ ಮಾಧವನಂತ ಮಗ ಇರಬೇಕು ಎನ್ನುತ್ತಿದ್ದಾರೆ ಜನ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ನಂದಗೋಕುಲ’. ಗಿರಿಜಾ ಮತ್ತು ನಂದಕುಮಾರ್ ಅವರ ಸುಂದರವಾದ ‘ನಂದಗೋಕುಲ’ದಂತಹ ಮನೆಯ ಕಥೆಯೇ ನಂದಗೋಕುಲ. ಇದೀಗ ಹಿರಿಯ ಮಗ ಮಾಧವನನ್ನು ಜನರು ಆಡಿ ಕೊಂಡಾಡುತ್ತಿದ್ದಾರೆ. ಇಂತ ಮಗ ಪ್ರತಿ ಮನೆಯಲ್ಲೂ ಹುಟ್ಟಿ ಬಂದರೆ, ಅದೇ ಸ್ವರ್ಗ ಎನ್ನುತ್ತಿದ್ದಾರೆ.
26
ಮಾಧವನ ಮದುವೆ
ಸದ್ಯ ಧಾರಾವಾಹಿಯಲ್ಲಿ ಮಾಧವನ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಆದರೆ ಅದಕ್ಕೂ ಮುನ್ನ ಉಂಟಾದ ಜಗಳ, ಭಯ, ಅವಮಾನ ಎಲ್ಲವೂ ಕಥೆಯಲ್ಲಿ ಕುತೂಹಲವನ್ನು ಹೆಚ್ಚಿಸಿತ್ತು. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಕಿಚ್ಚು ಹಚ್ಚಲು, ಗಿರಿಜಾ ಅಣ್ಣನವರು ಜೊತೆ ಸೇರಿ, ಮಾಧವನಿಗೆ ಬೇರೆ ಹುಡುಗಿಯ ಸಂಬಂಧ ಇದೆ, ಹಾಗಾಗಿ ಆತ ಮನೆ ಬಿಟ್ಟು ಬೇರೆ ಹುಡುಗಿ ಜೊತೆ ಓಡಿ ಹೋಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು.
36
ಮರಳಿ ಬಂದು ಶಾಕ್ ಕೊಟ್ಟ ಮಾಧವ
ನಂದ ಕುಮಾರ್ ಗೆ ಅವಮಾನ ಮಾಡಲು ಚಂದ್ರಕಾಂತ, ಸೂರ್ಯಕಾಂತ ತಯಾರಾಗಿ ನಿಂತಿದ್ರೆ, ಮರಳಿ ಬರುವ ಮಾಧವ, ಇಬ್ಬರಿಗೂ ಬೈದು, ಮುಖಕ್ಕೆ ಮಂಗಳಾರತಿ ಮಾಡುತ್ತಾನೆ. ನಿಮ್ಮ ಷಡ್ಯಂತ್ರಕ್ಕೆ ನಾನು ಬಲಿಯಾಗುತ್ತೇನೆ ಅಂತ ನೀವು ಅಂದುಕೊಂಡಿದ್ರೆ ಅದು ನಿಮ್ಮ ತಪ್ಪು. ನಾನು ಯಾವತ್ತಿದ್ರೂ ಅಪ್ಪ ಹಾಕಿದ ಗೆರೆಯನ್ನು ದಾಟುವುದಿಲ್ಲ. ಅಪ್ಪ ತೋರಿಸಿದ ಹುಡುಗಿ ಜೊತೆಗೆ ಮದುವೆಯಾಗುವುದಾಗಿ ತಿಳಿಸಿದ್ದಾನೆ.
ಮಗ ಮಾಧವ ಹೇಳಿದ ಮಾತು ಕೇಳಿ ನಂದ ಕುಮಾರ್ ಕಣ್ಣೀರಿಟ್ಟಿದ್ದಾರೆ. ತನ್ನ ಮರ್ಯಾದೆ ಎಲ್ಲರ ಎದುರು ಹೋಯಿತು ಎಂದು ಅಂದುಕೊಂಡಿರುವಾಗಲೇ, ಮರಳಿ ಬಂದ ಮಾಧವ, ಅಪ್ಪನ ಮಾತನ್ನು ಮೀರಲ್ಲ ಎಂದು ಹೇಳಿರುವುದನ್ನು ಕೇಳಿ, ನೀನೆ ನನ್ನ ಪಾಲಿನ ಶ್ರೀರಾಮ ಚಂದ್ರ. ಅಂದು ಶ್ರೀರಾಮ ದಶರಥನ ಮಾತು ಪಾಲಿಸಿದಂತೆ, ಇಂದು ನೀನು ನನ್ನ ಮಾತು ಪಾಲಿಸಿದೆ ಎನ್ನುತ್ತಾ ಮಗನನ್ನು ತಬ್ಬಿ ಮುದ್ದಾಡಿದ್ದಾರೆ.
56
ಭಾವುಕರಾದ ವೀಕ್ಷಕರು
ಈ ಸುಂದರವಾದ ದೃಶ್ಯವನ್ನು ನೋಡಿ ವೀಕ್ಷಕರು ಕೂಡ ಭಾವುಕರಾಗಿದ್ದಾರೆ. ಯಪ್ಪಾ ಎಂಥ ಸೀರಿಯಲ್ ಇಡೀ ಕುಟುಂಬ ಸಮೇತ ಕೂತು ನೋಡುವ ಸೀರಿಯಲ್. ಈ ಸೀರಿಯಲ್ ಸಿಕ್ಕಾಪಟ್ಟೆ ಇಷ್ಟ, ಈ ವಾರದ ಚಪ್ಪಾಳೆ ನಂದಗೋಕುಲದ ಮಾಧವನಿಗೆ. ಅಂತು ಇಂತು ತಂದೆ ತಾಯಿಯ ಕನಸು ನನಸಾಯಿತು. ಪ್ರತಿ ಮನೆಯಲ್ಲೂ ಮಾಧವನಂತಹ ಮಗ ಇದ್ದರೆ ಆ ಮನೆ ಸ್ವರ್ಗ ಎನ್ನುತ್ತಿದ್ದಾರೆ.
66
ಕಥೆ ಏನು?
ನಂದ ಕುಮಾರ್ ಮತ್ತು ಗಿರಿಜಾ ದಂಪತಿಗಳು ಪ್ರೀತಿಸಿ ಮದುವೆಯಾಗಿದ್ದು, ಮನೆಯವರ ವಿರೋಧ ಕಟ್ಟಿಕೊಂಡಿದ್ದಾರೆ. ಆದರೆ ತನ್ನ ಮಕ್ಕಳು ಪ್ರೀತಿಯಲ್ಲಿ ಬೀಳಬಾರದು ಎಂದು ತುಂಬಾನೆ ಸ್ಟ್ರಿಕ್ಟ್ ಆಗಿ ಬೆಳೆಸುತ್ತಾನೆ. ಆದರೆ ಎರಡನೇ ಮಗ ಕೇಶವ ಪ್ರೀತಿಸಿ ಮದುವೆಯಾಗುತ್ತಾನೆ, ಮನೆಗೆ ಬಂದ ಸೊಸೆ ಮೀನಾಳನ್ನು ಆರಂಭದಲ್ಲಿ ದ್ವೇಷಿಸಿದ್ದ ನಂದಕುಮಾರ್, ಕೊನೆಗೆ ಆಕೆಯ ಗುಣಕ್ಕೆ ಸೋತು ಸೊಸೆ ಎಂದು ಒಪ್ಪಿಕೊಂಡಿದ್ದಾರೆ. ಕೊನೆಯ ಮಗ ವಲ್ಲಭನಿಗೆ ಶತ್ರು ಅಮೂಲ್ಯ ಜೊತೆ ಗಿರಿಜಾ ಮದುವೆ ಮಾಡಿಸಿದ್ರೆ, ಹಿರಿಯ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಕಿರಿಯ ಮಗಳು ಓದುತ್ತಿದ್ದಾಳೆ. ಇದೀಗ ಹಿರಿಯ ಮಗ ಮಾಧವನ ಮದುವೆ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.