Annayya: ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!

Published : Jan 31, 2026, 02:17 PM IST

ಅಣ್ಣಯ್ಯ ಸೀರಿಯಲ್‌ನಲ್ಲಿ ಮಾಕಾಳವ್ವನ ಪವಾಡದಿಂದಾಗಿ ಶಿವು, ತಾನು ದ್ವೇಷಿಸುವ ತಾಯಿ ಶಾರದಮ್ಮಳನ್ನು ಮನೆಗೆ ಕರೆತಂದಿದ್ದಾನೆ. ರತ್ನಾ ನಿಶ್ಚಿತಾರ್ಥದ ಸಂಭ್ರಮದ ನಡುವೆ, ತಂಗಿ ರಮ್ಯಾ ಕಾಣದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದು, ತಾಯಿ-ಮಕ್ಕಳ ನಡುವಿನ ಸಂಘರ್ಷ ಕಥೆಗೆ ಹೊಸ ತಿರುವು ನೀಡಿದೆ.

PREV
15
ಅಣ್ಣಯ್ಯ ಸೀರಿಯಲ್ ಹೊಸ ತಿರುವು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ಹೊಸ ತಿರುವು ಪಡೆದುಕೊಂಡಿದೆ. ಮಾಕಾಳವ್ವನ ಪವಾಡದಿಂದಾಗಿ ತನಗೆ ಗೊತ್ತಿಲ್ಲದೇ ತಾನು ದ್ವೇಷಿಸುವ ತಾಯಿ ಶಾರದಮ್ಮಳನ್ನು ತನ್ನ ಮನೆಗೆ ಶಿವು ಕರೆದುಕೊಂಡು ಬಂದಿದ್ದಾನೆ. ಮಾವ ಶಂಕರಣ್ಣನ ಜೊತೆ ಸೇರಿಕೊಂಡ ಪಾರು, ತನ್ನ ಅತ್ತೆ ಮನೆಯಲ್ಲಿಯೇ ಉಳಿಯುವಂತೆ ಮಾಡಿಕೊಂಡಿದ್ದಾಳೆ.

25
ಶಾರದಮ್ಮಾ ಆಗಮನ

ಶಾರದಮ್ಮಾ ಬಂದ ಮರುದಿನವೇ ಶಿವು ಮನೆಯಲ್ಲಿ ರತ್ನ ಮತ್ತು ಪರಶು ನಿಶ್ಚಿತಾರ್ಥದ ಶಾಸ್ತ್ರ ನಡೆಯುತ್ತಿದೆ. ನಿಶ್ಚಿತಾರ್ಥಕ್ಕೆ ಗುಂಡಮ್ಮ ಕುಟುಂಬ ಬಂದಿದೆ. ಜಿಮ್ ಸೀನ್, ಲೀಲಾ, ಮಾದಪ್ಪ ಬಂದದ್ದಾರೆ. ಮಾಸ್ತಿಕೊಪ್ಪಲಿನಿಂದ ಅಜ್ಜಿ ಮತ್ತು ಗಂಡನೊಂದಿಗೆ ರಾಣಿಯೂ ಬಂದಿದ್ದಾಳೆ.

35
ಪ್ರೇಕ್ಷಕರ ಬೇಸರ

ವೀರಭದ್ರ ತನ್ನಿಬ್ಬರು ಪತ್ನಿ, ಬಲಗೈ ಬಂಟ ಛತ್ರಿ ಜೊತೆಗೆ ಬಂದಿದ್ದಾನೆ. ನಿಶ್ಚಿತಾರ್ಥ ಸಂಭ್ರಮಕ್ಕೆ ದೂರ ದೂರದವರೆಲ್ಲಾ ಬಂದಿದ್ದಾರೆ. ಆದ್ರೆ ಶಿವು ಮನೆಯ ಪುಟ್ಟ ತಂಗಿ ರಮ್ಯಾ ಮಾತ್ರ ಕಾಣಿಸಿಲ್ಲ. ನಿಶ್ಚಿತಾರ್ಥದಲ್ಲಿ ರಮ್ಯಾ ಕಾಣದಿರೋದನ್ನು ಕಂಡು ಪ್ರೇಕ್ಷಕರು ಬೇಸರಗೊಂಡಿದ್ದಾರೆ.

45
ರಮ್ಯಾ

ರಮ್ಯಾ ಪರೀಕ್ಷೆ ಬರೆಯಲು ತೆರಳಿರೋ ಮಾಹಿತಿಯನ್ನು ಸಂಚಿಕೆಯ ಆರಂಭದಲ್ಲಿಯೇ ನೀಡಲಾಗಿತ್ತು. ಆದರೂ ಮನೆಯ ಮಗಳು ಕುಟುಂಬದ ಸಮಾರಂಭದಲ್ಲಿ ಕಾಣಿಸಿಕೊಳ್ಳದಿರೋದನ್ನು ಪ್ರೇಕ್ಷಕರು ಕಂಡು ಹಿಡಿದಿದ್ದಾರೆ.

55
ಅಮ್ಮನ ಮೇಲೆ ಕೋಪ

ಇನ್ನು ಮನೆಗೆ ಶಾರದಮ್ಮಾ ಬಂದಿರೋದನ್ನು ಶಿವು ಮಾತ್ರ ಒಪ್ಪಿಕೊಂಡಿಲ್ಲ. ತಂಗಿ ರತ್ನಾ ಸಹ ಶಿವು ಪರವಾಗಿಯೇ ನಿಂತಿದ್ದಾಳೆ. ಇನ್ನು ರಾಣಿ ಅಂತೂ ತಾಯಿ ಇಲ್ಲದ ಕಾರಣ ನನ್ನ ಬಾಲ್ಯ ಕಳೆದುಕೊಂಡೆ. ಶಾಲೆಗೆ ಹೋಗದೇ ಮನೆಗೆಲಸ ಮಾಡಿಕೊಂಡು ಕುಳಿತೆ ಎಂದು ಅಮ್ಮನ ಮೇಲೆ ಕೋಪಗೊಂಡಿದ್ದಾರೆ. ಇತ್ತ ಗುಂಡಮ್ಮ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories