Tejaswini Virat Wedding: ಕನ್ನಡ ಕಿರುತೆರೆಯ ಜೋಡಿಗಳಾದ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದು, ಇದೀಗ ಪ್ರೀ ವೆಡ್ಡಿಂಗ್ ಫೋಟೊಶೂಟಲ್ಲಿ ಮಿಂಚಿದ್ದಾರೆ. ಮುಂದಿನ ತಿಂಗಳು ವಿವಾಹ ನಡೆಯಲಿದ್ದು, ಇಲ್ಲಿದೆ ನೋಡಿ ಕಿರುತೆರೆಯ ಜೋಡಿಯ ಫೋಟೊಗಳು.
ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ಮೈಸೂರಿನ ಬೆಡಗಿ ನಟಿ ತೇಜಸ್ವಿನಿ ಆಚಾರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಹಲವು ವರ್ಷಗಳಿಂದ ಸ್ನೇಹಿತರಾಗಿರುವ ಹುಡುಗನನ್ನೇ ಪ್ರೀತಿಸಿ ಮದುವೆಯಾಗಲಿದ್ದಾರೆ ತೇಜಸ್ವಿನಿ.
26
ವಿರಾಟ್ ಜೊತೆ ಸಪ್ತಪದಿ
ತೇಜಸ್ವಿನಿ ಜೊತೆಗೆ ಹಲವಾರು ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ನಟ ವಿರಾಟ್ ವತ್ಸಲ್ ಜೊತೆ ತೇಜಸ್ವಿನಿ ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ತಿಂಗಳು 8ನೇ ತಾರೀಕಿಗೆ ಆರತಕ್ಷತೆ ನಡೆಯಲಿದ್ದು, ಇದೀಗ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
36
ಮುದ್ದಾದ ಫೋಟೋಶೂಟಲ್ಲಿ ಮಿಂಚಿದ ಜೋಡಿ
ವಿರಾಟ್ ಮತ್ತು ತೇಜಸ್ವಿನಿ ಜೋಡಿಯ ಫೋಟೋ ಶೂಟ್ ಸುಂದರವಾಗಿದ್ದು, ರೊಮ್ಯಾಂಟಿ ಆಗಿದೆ. ತೇಜಸ್ವಿನಿ ಹಸಿರು ಮತ್ತು ನೀಲಿ ಬಣ್ಣದ ರೇಷ್ಮೆ ಸೀರೆಯುಟ್ಟಿದ್ದರೆ, ವಿರಾಟ್ ಐವರಿ ಬಣ್ಣದ ಕುರ್ತಾದಲ್ಲಿ ಮಿಂಚಿದ್ದಾರೆ. ಮುದ್ದಾದ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯಲ್ಲಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಜೊತೆಯಾಗಿ ನಟಿಸಿದ್ದರು. ಈ ಸೀರಿಯಲ್ ಶೂಟ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಇದೀಗ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ.
56
ತೇಜಸ್ವಿನಿ ಆಚಾರ್ ಕರಿಯರ್
ತೇಜಸ್ವಿನಿ ಮಹಾನದಿ, ಸಂಘರ್ಷ, ರಾಧಿಕಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಂಘರ್ಷ ಮತ್ತು ರಾಧಿಕಾ ಧಾರಾವಾಹಿಗಳಲ್ಲಿ ತೇಜಸ್ವಿನಿ ಮತ್ತು ವಿರಾಟ್ ಜೊತೆಯಾಗಿ ನಟಿಸಿದ್ದರು.
66
ವಿರಾಟ್ ಧಾರಾವಾಹಿಗಳು
ವಿರಾಟ್ ಕೂಡ ಸಂಘರ್ಷ, ರಾಧಿಕಾ, ನನ್ನ ದೇವರು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಊರಾದ ದಾವಣಗೆರೆಯಲ್ಲಿ ಮದುವೆ ಜರುಗಲಿದೆ. ಫೆಬ್ರವರಿ 8 ರಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. ಸದ್ಯ ಈ ಜೋಡಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.