Nandagokula Serial ಚಿತ್ರೀಕರಣದ ವೇಳೆ ಕಣ್ಣೀರಿಟ್ಟ ನಂದಗೋಕುಲದ ಸೊಸೆ ನಟಿ ಊರ್ಜಿತಾ

Published : Mar 15, 2026, 01:00 PM IST

ಕಲರ್ಸ್ ಕನ್ನಡದ ಜನಪ್ರಿಯ 'ನಂದಗೋಕುಲ' ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದು ವೈರಲ್ ಆಗಿದೆ. ಭಾವುಕ ದೃಶ್ಯವೊಂದರಲ್ಲಿ ನಟಿಸುವಾಗ ನಿರ್ದೇಶಕರ ಮಾತಿಗೆ ನಟಿ ಊರ್ಜಿತಾ ವಾಲ್ತಾಜೆ (ಅಮೂಲ್ಯ) ನಿಜವಾಗಿಯೂ ಕಣ್ಣೀರು ಹಾಕಿದ್ದಾರೆ. ಈ ಕ್ಷಣವನ್ನು ಸಹನಟ ಅಭಿಷೇಕ್ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

PREV
15
ನಟನೆ ಮತ್ತು ಕಲಾವಿದರು

ಕಲರ್ಸ್ ಕನ್ನಡ ವಾಹಿನಿ ನಂದಗೋಕುಲ ಸೀರಿಯಲ್ ವಿಭಿನ್ನ ಮತ್ತ ವಿಶೇಷ ಕಥೆಯಿಂದಾಗಿ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ತೆರೆ ಮೇಲೆ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಲು ತೆರೆ ಹಿಂದೆ ಎಷ್ಟೆಲ್ಲಾ ಕೆಲಸಗಳು ನಡೆಯುತ್ತಿರುತ್ತವೆ ಎಂಬುದನ್ನು ವಿಡಿಯೋಗಳಲ್ಲಿ ನೋಡಿರುತ್ತವೆ. ನಿರ್ದೇಶಕರಿಗೆ ಓಕೆ ಆಗೋವರೆಗೂ ಕಲಾವಿದರು ನಟಿಸುತ್ತಿರಬೇಕಾಗುತ್ತದೆ.

25
ಸೀನಿಯರ್ಸ್-ಜೂನಿಯರ್ಸ್

ನಂದಗೋಕುಲ ಸೀರಿಯಲ್‌ನಲ್ಲಿ ಹೊಸಬರಿಂದ ಹಿಡಿದು ಹಿರಿಯ ಕಲಾವಿದರನ್ನು ಒಳಗೊಂಡಿದೆ. ಸೀನಿಯರ್ಸ್ ಲೀಲಾಜಾಲವಾಗಿ ನಟಿಸಿ ಸೈ ಅನ್ನಿಸಿಕೊಳ್ಳುತ್ತಾರೆ. ಆದ್ರೆ ಜೂನಿಯರ್ಸ್‌ಗೆ ಅಷ್ಟು ಸುಲಭದ ಮಾತಲ್ಲ. ತೆರೆಯ ಮೇಲೆ ದೃಶ್ಯಗಳು ನೈಜವಾಗಿ ಕಾಣಿಸಬೇಕಾದ್ರೆ ಕಲಾವಿದರು ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ಪಾತ್ರವನ್ನು ಜೀವಿಸಿದಾಗಲೇ ನೈಜ ನಟನೆ ಹೊರ ಬರುತ್ತದೆ.

35
ನಂದಗೋಕುಲ ಸೀರಿಯಲ್

ನಂದಗೋಕುಲ ಸೀರಿಯುಲ್‌ಲ್ಲಿರುವ ಎಲ್ಲರೂ ಪಳಗಿದ ಕಲಾವಿದರು. ಆ ಕಾರಣಕ್ಕಾಗಿ ಸೀರಿಯಲ್ ಕನ್ನಡಿಗರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರೀಕರಣದ ವೇಳೆ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸಲು ಎಂಥಾ ಕಲಾವಿದರಾದರೂ ಪರಿತಪಿಸಬೇಕಾಗುತ್ತದೆ. ಇದೀಗ ಇಂತಹವುದೇ ಒಂದು ವಿಡಿಯೋ ನಂದಗೋಕುಲ ಸೀರಿಯಲ್‌ನಿಂದ ಹೊರಬಂದಿದೆ. ನಂದಗೋಕುಲದ ಕಿರಿ ಸೊಸೆ ಅಮೂಲ್ಯ ಭಾವುಕರಾಗಿ ಡೈಲಾಗ್ ಹೇಳಲು ಪರದಾಡಿದ್ದಾರೆ.

45
ವಿಡಿಯೋ ವೈರಲ್

ನಿರ್ದೇಶಕರು ಸ್ವಲ್ಪ ಗದರಿದ್ದರಿಂದ ಅಮೂಲ್ಯ ಕಣ್ಣೀರು ಹಾಕಿದ್ದಾರೆ. ನಂದಕುಮಾರ್ ಮುಂದೆ ನಿಂತು ಅಮೂಲ್ಯ, ಭಾವುಕಳಾಗಿ ಡೈಲಾಗ್ ಹೇಳುವ ಸನ್ನಿವೇಶ ನಡೆಯುತ್ತಿತ್ತು. ನಿರ್ದೇಶಕರು ಮನಸ್ಸು ಭಾರ ಮಾಡ್ಕೊ, ರಿಲ್ಯಾಕ್ಸ್ ಆಗಬೇಡ. ಭಾರವಾದ ಮನಸ್ಸಿನಿಂದ ಡೈಲಾಗ್ ಹೇಳು ಅಂತ ಹೇಳಿದಾಗ ಅಮೂಲ್ಯ ನಿಜವಾಗಿಯೂ ಕಣ್ಣೀರು ಹಾಕಿದ್ದಾರೆ. ನಂತರ ನಂದಕುಮಾರ್, ಅಮೂಲ್ಯಾಗೆ ಸಮಾಧಾನ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಲ್ಲಭ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದು, ವಿಡಿಯೋ ವೈರಲ್ ಆಗ್ತಿದೆ.

ಇದನ್ನೂ ಓದಿ: ನನ್ನ ಜಗತ್ತನ್ನ ನಾನೇ ಸೃಷ್ಟಿಸಿಕೊಳ್ಳುವೆ: ನಟಿ ಮೇಘನಾ ರಾಜ್ ಬದುಕಿನ ಹೊಸ ನಿರ್ಧಾರ

55
ಜನಪ್ರಿಯ ಡಿಜಿಟಲ್ ಜೋಡಿ

ನಟಿ ಉರ್ಜಿತಾ ವಾಲ್ತಾಜೆ ಅವರು ನಂದಗೋಕುಲದ ಅಮ್ಮು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಅಮೂಲ್ಯಗೆ ಜೋಡಿಯಾಗಿ ವಲ್ಲಭನ ಪಾತ್ರದಲ್ಲಿ ನಟ ಅಭಿಷೇಕ್ ರಾಮ್‌ದಾಸ್ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡ ನೀಡುವ ಅನುಬಂಧ ಅವಾರ್ಡ್‌ನಲ್ಲಿ ಅಮೂಲ್ಯ ಮತ್ತು ವಲ್ಲಭಗೆ ಜನಪ್ರಿಯ ಡಿಜಿಟಲ್ ಜೋಡಿ ಎಂಬ ಪ್ರಶಸ್ತಿ ಸಿಕ್ಕಿತ್ತು. ನಂದಗೋಕುಲ ಸೀರಿಯಲ್‌ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

ಇದನ್ನೂ ಓದಿ: ಕಂಕುಳಲ್ಲಿ ಮಗು, ಕೈಯಲ್ಲಿ ಕಲ್ಲಿನ ಚಿಪ್ಪು; ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಯಿ ಕಂಠಕ್ಕೆ ಮನಸೋತ ಜನ್ರು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories