ದೊಡ್ಮನೇಲಿ ನಾಗವಲ್ಲಿ ಥರ ಇದ್ದೋರು, ಈಗ.... ಅಭಿಮಾನಿಗಳ ನ್ಯಾಷನಲ್ ಕ್ರಶ್ ಆಗ್ಬಿಟ್ರ ಈ ಬಿಗ್ ಬಾಸ್ ಸ್ಪರ್ಧಿ!

Published : Mar 24, 2025, 11:08 AM ISTUpdated : Mar 24, 2025, 11:40 AM IST

ಬಿಗ್ ಬಾಸ್ ಮೂಲಕ ಸಂಚಲನವನ್ನೇ ಸೃಷ್ಟಿಸಿದ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಇತ್ತೀಚಿನ ದಿನಗಳಲ್ಲಿ ಸೀರೆಗಳಿಗೆ ಮಾಡೆಲ್ ಆಗಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಬಿಗ್ ಬಾಸ್’ನಲ್ಲಿ ನಾಗವಲ್ಲಿ ಆಗಿದ್ದೋಳು, ಈಗ ಕರ್ಪೂರದ ಗೊಂಬೆ ಥರ ಕಾಣಿಸ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.  

PREV
17
ದೊಡ್ಮನೇಲಿ ನಾಗವಲ್ಲಿ ಥರ ಇದ್ದೋರು, ಈಗ....  ಅಭಿಮಾನಿಗಳ ನ್ಯಾಷನಲ್ ಕ್ರಶ್ ಆಗ್ಬಿಟ್ರ ಈ ಬಿಗ್ ಬಾಸ್ ಸ್ಪರ್ಧಿ!

ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್ 11 (Bigg Boss Season 11) ಹಲವಾರು ಕಾರಣಗಳಿಂದ ಸದ್ದು ಮಾಡಿತ್ತು, ಜಗಳಗಳಿಂದಲೇ ತುಂಬಿದ್ದ ಸೀಸನ್ 11 ರಲ್ಲಿ, ಹಿಂದೂ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದ ಚೈತ್ರಾ ಕುಂದಾಪುರ ಸಹ ಸ್ಪರ್ಧಿಯಾಗಿ ಆಗಮಿಸಿ, ತಮ್ಮ ಮಾತು, ಆಟದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದರು. 
 

27

ಬಿಗ್ ಬಾಸ್ ಮನೆಯಲ್ಲಿ ಹಣೆ ತುಂಬಾ ಕುಂಕುಮ ಇಟ್ಟು, ಸಿಂಪಲ್ ಆಗಿರುವ ಸಲ್ವಾರ್ ಧರಿಸಿ, ವೀಕೆಂಡ್ ಗಳಲ್ಲಿ ಸಿಂಪಲ್ ಆಗಿರುವ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೈತ್ರಾ ಕುಂದಾಪುರ (Chaithra Kundapura), ದೊಡ್ಮನೆಯಿಂದ ಹೊರ ಬಂದ ಮೇಲೆ ತಮ್ಮ ಲುಕ್ ಬದಲಾಯಿಸಿಕೊಂಡರು. ಈಗಂತೂ ಕೆಲವು ಸೀರೆಗಳಿಗೆ ಮಾಡೆಲ್ ಆಗಿದ್ದಾರೆ ಚೈತ್ರಾ. 
 

37

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೈತ್ರಾ, ಹೆಚ್ಚಾಗಿ ವಿವಿಧ ರೇಷ್ಮೆ ಸೀರೆಗಳನ್ನುಟ್ಟು, ಫೋಟೋ ಶೂಟ್ ಮಾಡಿಸಿ, ಅದರ ವಿಡಿಯೋ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಮುಖ ತುಂಬಾ ಮೇಕಪ್ ಬಳಿದು, ಸುಂದರವಾದ ಸೀರೆಯುಟ್ಟು ಪೋಸ್ ಕೊಡುವ ಚೈತ್ರಾ ನೋಡಿ, ಅಭಿಮಾನಿಗಳೇ ಶಾಕ್ ಆಗಿದ್ದಾರೆ. 
 

47

ಇದೀಗ ಚೈತ್ರಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹೊಸದೊಂದು ಫೋಟೊ ಶೂಟ್ ಶೇರ್ ಮಾಡಿದ್ದು,  ನೀವು ಸೀರೆಯಲ್ಲಿ ನೀವಾಗಿರಲು ನಿರ್ಧರಿಸಿದ ಕ್ಷಣದಿಂದಲೇ ಸೌಂದರ್ಯ ಪ್ರಾರಂಭವಾಗುತ್ತದೆ. (Beauty begins the moment you decide to be yourself, in a saree) ಎಂದು ಬರೆದುಕೊಂಡಿದ್ದಾರೆ. ಪೀಚ್ ಮತ್ತು ಕೆಂಪು ಶೇಡ್ ಉಳ್ಳ ಸೀರೆಯಲ್ಲಿ ಚೈತ್ರ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. 
 

57

ಚೈತ್ರಾ ಫೋಟೊ ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅಬ್ಬಾ, ಕರ್ಪೂರದ ಗೊಂಬೆ ತರ ಕಾಣುಸ್ತಿದೀರಾ ಚೈತ್ರಕ್ಕಾ , ಹೆಮ್ಮೆಯ ಭಾರತಾಂಬೆಯ ಪುತ್ರಿ ನೀವು,  ನಮ್ಮ ಸಂಸ್ಕೃತಿ ಅಂದ್ರೆ ಇದೇ ಸೂಪರ್ ಅಕ್ಕ, ಹೃದಯ ಕದ್ದ ಕಳ್ಳಿ, ಮೈ ತೋರಿಸಿ ಫೇಮಸ್ ಆಗೋರೆ ಮುಂದೆ ನೀವು ಸಾಂಪ್ರದಾಯವನ್ನು ಬಿಡದೇ ಎದ್ದು ನಿಲ್ಲುತ್ತೀರಿ, ನ್ಯಾಷನಲ್ ಕ್ರಶ್ (national crush) ಅಂತಾನೂ ಕಾಮೆಂಟ್ ಮಾಡಿದ್ದಾರೆ. 
 

67

ಇನ್ನೂ ಕೆಲವರು ಕಾಮೆಂಟ್ ಮಾಡಿ ನಿಜವಾದ ಸೌಂದರ್ಯ ಬಿಟ್ಟು, ಮೇಕಪ್ ಅನ್ನೋ ಸೌಂದರ್ಯಕ್ಕೆ ಮರುಳಾಗದಿರಿ ಚೈತ್ರಕ್ಕ. ನೀವು ಬಂದ ದಾರಿಯನ್ನು ನೀವು ಮರಿತ್ತಿದ್ದೀರಿ ಅನಿಸ್ತಿದೆ. ಹುಲಿ ಯಾವತ್ತಿದ್ರೂ ಹುಲಿಯಾಗಿರಬೇಕು ಎಂದು ಸಹ ಕಾಮೆಂಟ್ ಮಾಡಿದ್ದಾರೆ.  
 

77

ಅಷ್ಟೇ ಅಲ್ಲ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಬಂದ ನಾಗವಲ್ಲಿ ತನ್ನ ಯೌವನದಲ್ಲಿದ್ದ ಸೌಂದರ್ಯವನ್ನು ಚೈತ್ರಕ್ಕನಿಗೆ ದಾನ ಮಾಡಿರ ಬಹುದೇ...?  ಮಾತಿನ ಮಲ್ಲಿ ಸೌಂದರ್ಯವತಿ ಚೈತ್ರಕ್ಕ ನೃತ್ಯ ತರಭೇತಿ ಪಡೆದು ದಯವಿಟ್ಟು ಒಂದು ನೃತ್ಯ ಮಾಡಿ. ಅದನ್ನು ನೋಡುವ ಕಾತರ ನಮಗಿದೆ . ಎಂದು ಒಬ್ಬರು ಹೇಳಿದ್ರೆ, ಇನ್ನೊಬ್ಬ ಅಭಿಮಾನಿ ಬಿಗ್ ಬಾಸ್ ಮನೆಯಲ್ಲಿ ನಾಗವಲ್ಲಿ ಥರ ಇರ್ತಿದ್ದೋಳು, ಈಗ ನೋಡು ಗುರು, ವಾವ ಸೂಪರ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 
 

Read more Photos on
click me!

Recommended Stories