ನಮ್ರತಾ ಗೌಡ:
ಕನ್ನಡ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾಗಿರುವ ನಮ್ರತಾ ಗೌಡ, ಬಿಗ್‌ಬಾಸ್ ಸೀಸನ್-10ರಲ್ಲಿ ಭಾರೀ ಜನಪ್ರಿಯತೆ ಗಳಿಸಿದರು. ಬಿಗ್‌ಬಾಸ್ ಮನೆಯಲ್ಲಿರುವಾಗ ತಾವು ಪ್ರೀತಿಯಲ್ಲಿ ಬಿದ್ದು, ಬ್ರೇಕಪ್ ಆಗಿದ್ದ ಬಗ್ಗೆ ಮಾತನಾಡಿದ್ದರು. ನಾನು ಕಾಲೇಜಿನಲ್ಲಿ ಓದುವಾಗ ಒಬ್ಬ ಹುಡುಗನನ್ನು ಲವ್ ಮಾಡಿದ್ದು, ಈ ವಿಚಾರ ತುಂಬಾ ಫೇಮಸ್ ಆಗೋಗಿತ್ತು. ನಾನು ಈ ವಿಚಾರವನ್ನು ಅಮ್ಮ-ಅಪ್ಪನಿಗೂ ಹೇಳಿದ್ದೆ. ಆದರೆ, ಆಗ ನನಗೆ ಮೈಂಡ್ ಮೆಚ್ಯೂರಿಟಿ ಇಲ್ಲದ ಕಾರಣ ಕಮಿಟ್ಮೆಂಟ್ ಇರಲಿಲ್ಲ. ಜೊತೆಗೆ, ರಿಲೇಶನ್‌ಶಿಪ್ ಏನು ಅಂತ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಲವ್ ಮಾಡುವುದು ಸರಿಯಾದುದಲ್ಲ ಎಂದು ನಮ್ರತಾ ಹೇಳಿದ್ದರು.
ಪಿಯು ಆದ್ಮೇಲೆ ಕಲಾವಿದೆಯಾಗಿ ವೃತ್ತಿ ಆರಂಭಿಸಿದೆ. ಆಗ ನನಗೆ ಬಾಯ್‌ಫ್ರೆಂಡ್‌ಗೆ ಸಮಯ ಕೊಡೋಕೆ ಆಗಲಿಲ್ಲ. ಇದರಿಂದ ಇಬ್ಬರ ನಡುವೆ ವೈಮನಸ್ಸು ಬಂದು, ಹೇಗೆ ಸಂಬಂಧ ಉಳಿಸಿಕೊಳ್ಳಬೇಕು ಎಂಬುದು ಇಬ್ಬರಿಗೂ ಗೊತ್ತಾಗದೇ ಬ್ರೇಕಪ್ ಮಾಡಿಕೊಂಡೆವು. ನಾನು ಪ್ರೀತಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರೀತಿ ಉಳಿಸಿಕೊಳ್ಳಲು ಎಷ್ಟೆಲ್ಲಾ ಪ್ರಯತ್ನ ಮಾಡಿದರೂ, ಆ ಕಡೆಯಿಂದ ಸರಿಯಾಗಿ ಸ್ಪಂದನೆ ಸಿಗದ ಕಾರಣ ನಾನೂ ಒಂದು ದಿನ ಆ.., ಸಂಬಂಧ ಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.