ಮಾಡೆಲ್​ ಆಗಹೋಗಿ ಬೀದಿಪಾಲಾದ Brahmagantu ರೂಪಾಗೆ ಹುಟ್ಟುಹಬ್ಬ: ನಟಿಯ ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ

Published : Oct 12, 2025, 02:31 PM IST

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ರೂಪಾ ಎಂಬ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಕಾವ್ಯಾ ರಮೇಶ್ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಈ ಲೇಖನವು ದಾವಣಗೆರೆಯಿಂದ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ವರೆಗಿನ ಅವರ ನಟನಾ ಪಯಣವನ್ನು ವಿವರಿಸುತ್ತದೆ.  

PREV
17
ಮಾಡೆಲ್​ ಆಗಲು ಬೀದಿ ಪಾಲಾದಳು

ಸದ್ಯ ಬ್ರಹ್ಮಗಂಟು ಸೀರಿಯಲ್​ನಲ್ಲಿ (Brahmagantu Serial) ದೀಪಾ ಮಾಡೆಲ್​ ದಿಶಾ ಆಗಿ ಎಲ್ಲರ ನಿದ್ದೆಗೆಡಿಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಮಾಡೆಲ್​ ಆಗಲು ಯಾವನದ್ದೋ ಒಬ್ಬನ ವಂಚಕನ ಪ್ರೀತಿಯ ಸುಳಿಗೆ ಸಿಕ್ಕ ದೀಪಾಳ ಅಕ್ಕ ರೂಪಾ ಬೀದಿಪಾಲಾಗಿ ಕೊನೆಗೂ ಮನೆ ಸೇರಿಕೊಂಡಿದ್ದಾಳೆ. ಸೌಂದರ್ಯವತಿಯಾಗಿರೋ ರೂಪಾ, ಚಿರುವನ್ನೇ ಮದುವೆಯಾಗಬೇಕಿತ್ತು. ಆದರೆ ಇನ್ನೂ ಹೆಚ್ಚು ಶ್ರೀಮಂತಳಾಗಲು ಹೋಗಿ ಎಲ್ಲವನ್ನೂ ಕಳೆದುಕೊಂಡಿದ್ದಾಳೆ.

27
ಹೊಟ್ಟೆ ಉರಿದುಕೊಳ್ಳೋ ಕ್ಯಾರೆಕ್ಟರ್​

ಆದರೆ ದೀಪಾಳಿಗೆ ಹೊಟ್ಟೆ ಉರಿಸಲು, ಮತ್ತೊಮ್ಮೆ ಚಿರುವಿನ ಬಾಳಲ್ಲಿ ಆಕೆ ಎಂಟ್ರಿ ಕೊಡುವ ಹಾಗೆ ಮಾಡುವುದಕ್ಕಾಗಿಯೇ ತನ್ನದೇ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾಳೆ ಸೌಂದರ್ಯ. ಆದ್ರೆ ಸದ್ಯ ದಿಶಾಳ ಎಂಟ್ರಿ ಆಗಿರುವುದರಿಂದ ಸೌಂದರ್ಯಳ ದೃಷ್ಟಿಯೆಲ್ಲಾ ದಿಶಾಳ ಮೇಲಿದೆ. ಹೇಗಾದರೂ ಮಾಡಿ ದಿಶಾ ಮತ್ತು ಚಿರುನ್ನ ಒಂದು ಮಾಡಿ ದೀಪಾಗೆ ಹೊಟ್ಟೆ ಉರಿಸಬೇಕು ಎಂದುಕೊಂಡಿದ್ದಾಳೆ. ದಿಶಾನೇ ದೀಪಾ ಎಂದು ಅರಿಯದೇ ತಂತ್ರ ರೂಪಿಸುತ್ತಿದ್ದಾಳೆ.

37
ಚಿರು ಒಲಿಸಲು ಯತ್ನ

ಇದೀಗ ರೂಪಾ ಮತ್ತೆ ಕಚೇರಿಗೆ ಬಂದು ಚಿರುವನ್ನು ಒಲಿಸಿಕೊಳ್ಳಲು ನೋಡುತ್ತಿದ್ದಾಳೆ. ಮಾಡೆಲ್​ ದಿಶಾಳನ್ನು ನೋಡಿ ಅವಳಿಗೆ ಹೊಟ್ಟೆ ಉರಿ ಆಗಿದೆ. ಅವಳು ತನ್ನ ತಂಗಿ ದೀಪಾ ಎನ್ನುವುದು ಅವಳಿಗೆ ಗೊತ್ತಿಲ್ಲ. ಹೀಗೆ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿರೋ ರೂಪಾಳ ನಿಜವಾದ ಹೆಸರು ಕಾವ್ಯಾ ರಮೇಶ್ (Kavya Ramesh). ಇಂದು ಕಾವ್ಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

47
ಇಂದು ಹುಟ್ಟುಹಬ್ಬದ ಸಂಭ್ರಮ

ಅಂದಹಾಗೆ ದಾವಣಗೆರೆಯಲ್ಲಿ ಜನಿಸಿದ ಕಾವ್ಯಾ ಇಂದು ಅಂದರೆ ಅಕ್ಟೋಬರ್​ 12ರಂದು 27ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚಿಕ್ಕಂದಿನಿಂದಲೂ ನಟಿಯಾಗುವ ಕನಸು ಕಂಡಿದ್ದ ಕಾವ್ಯಾ ಅವರಿಗೆ ನಟನೆ ಒಲಿದಿದೆ. ಬಿಎಸ್‌ಸಿ ವ್ಯಾಸಂಗ ಮಾಡಿರುವ ಕಾವ್ಯಾ, ಡಿಗ್ರಿಯ ಬಳಿಕ ನಟಿಯಾಗಲು ಆಡಿಷನ್ ಕೊಡಲು ಆರಂಭಿಸಿದವರು.

57
ಮೊದಲ ಆಡಿಷನ್‌ನಲ್ಲೇ ಪಾಸ್​

ಅವರಿಗೆ ಅದೃಷ್ಟ ಒಲಿದಿತ್ತು. ಮೊದಲ ಆಡಿಷನ್‌ನಲ್ಲೇ ಪಾಸಾದರು. 'ಸೀತಾ ವಲ್ಲಭ'ದಲ್ಲಿ ಅದಿತಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಮೊದಲ ಸೀರಿಯಲ್​ನಲ್ಲಿಯೇ ಸೈ ಎನ್ನಿಸಿಕೊಂಡರು. ಬಳಿಕ ಇವರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರಾವಾಹಿಯಲ್ಲಿ ಫೋಷಕ ಪಾತ್ರ ಸಿಕ್ಕಿತು.

67
ಸ್ಯಾಂಡಲ್​ವುಡ್​ಗೆ ಎಂಟ್ರಿ

ಇಲ್ಲಿಂದಲೇ ಅವರು ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟರು. ಚೌಕಬಾರ ಸಿನಿಮಾದಲ್ಲಿ ಎರಡನೇ ನಾಯಕಿದರು. ಬಳಿಕ 2023ರಲ್ಲಿ ನೋಡದ ಪುಟಗಳು ಎಂಬ ಸಿನಿಮಾದಲ್ಲಿ ಹೀರೋಯಿನ್​ ಆಗಿ ಮಿಂಚಿದರು. ಬಳಿಕ 'ಮೂಲತಃ ನಮ್ಮವರೆ' ಸಿನಿಮಾದಲ್ಲಿಯೂ ಅಭಿನಯಿಸಿದರು.

77
ತೆಲುಗುನತ್ತ ಮುಖ

ಇದಾದ ಬಳಿಕ ತೆಲುಗು ಸಿನಿಮಾದತ್ತ ಮುಖ ಮಾಡಿದರು. 'ನಚ್ಚಿನಾವುಡು' ತೆಲುಗು ಸಿನಿಮಾದಲ್ಲಿ ನಟಿಸಿದರು. ಅಲ್ಲಿಯೇ 'ಆರ್.ಸಿ.ಎಂ ಪುರಂ' ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿ, ಈಗ ಮತ್ತೆ ಕನ್ನಡದ ಕಿರುತೆರೆಗೆ ಎಂಟ್ರಿ ಕೊಟ್ಟು ಬ್ರಹ್ಮಗಂಟುವಿನಲ್ಲಿ ನೆಗೆಟಿವ್​ ರೋಲ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories