- Home
- Entertainment
- TV Talk
- Brahmagantu: ಮಾಡೆಲ್ ದಿಶಾ ಎಂಟ್ರಿ ಕೊಟ್ಟಾಗ ಶೂಟಿಂಗ್ ಸೆಟ್ನಲ್ಲಿ ನಡೆದಿದ್ದೇ ಬೇರೆ! ವಿಡಿಯೋ ವೈರಲ್
Brahmagantu: ಮಾಡೆಲ್ ದಿಶಾ ಎಂಟ್ರಿ ಕೊಟ್ಟಾಗ ಶೂಟಿಂಗ್ ಸೆಟ್ನಲ್ಲಿ ನಡೆದಿದ್ದೇ ಬೇರೆ! ವಿಡಿಯೋ ವೈರಲ್
ಬ್ರಹ್ಮಗಂಟು ಧಾರಾವಾಹಿಯಲ್ಲಿ, ಬಾಡಿ ಶೇಮಿಂಗ್ ಎದುರಿಸುತ್ತಿದ್ದ ನಾಯಕಿ ದೀಪಾ ಈಗ ದಿಶಾ ಆಗಿ ರೂಪಾಂತರಗೊಂಡಿದ್ದಾಳೆ. ತನ್ನ ಅತ್ತಿಗೆ ಸೌಂದರ್ಯಳ ಅಹಂಕಾರವನ್ನು ಮುರಿಯಲು ಮುಂದಾಗಿರುವ ದಿಶಾಳ ಮಾಸ್ ಎಂಟ್ರಿಯ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಈ ಪಾತ್ರವನ್ನು ನಟಿ ದಿಯಾ ಪಾಲಕ್ಕಲ್ ನಿರ್ವಹಿಸುತ್ತಿದ್ದಾರೆ.

ಗುಣನೋ, ರೂಪನೊ?
ಬ್ರಹ್ಮಗಂಟು ಸೀರಿಯಲ್ ( Brahmagantu Serial) ಈಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಸೌಂದರ್ಯಕ್ಕಿಂತ ಗುಣನೇ ಮೇಲು ಎಂದು ಹೇಳಹೊರಟಿರುವ ಈ ಸೀರಿಯಲ್ನಲ್ಲಿ ಗೆಲ್ಲುವುದು ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇಲ್ಲಿ ಸೋಡಾ ಗ್ಲಾಸ್, ಎಣ್ಣೆ ಕೂದಲು, ಹಲ್ಲಿಗೆ ಕ್ಲಿಪ್, ಜಡೆಗೆ ರಿಬ್ಬನ್, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರೋ ದೀಪಾಳೆ ಇದಕ್ಕೆ ನಾಯಕಿ. ಯಾವುದೋ ಒಂದು ಸನ್ನಿವೇಶದಲ್ಲಿ ಸುರಸುಂದರಾಂಗ ಚಿರುನ್ನ ಮದ್ವೆಯಾಗ್ತಾಳೆ.
ಬಾಡಿ ಶೇಮಿಂಗ್
ಅಲ್ಲಿಂದ ಇಲ್ಲಿಯವರೆಗೂ ಅವಳು ಎದುರಿಸಿದ್ದು ಬಾಡಿ ಶೇಮಿಂಗೇ. ಆದರೆ ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯ ಎಂದು ಸಾಧಿಸಲು ಹೊರಟಿದ್ದಾಳೆ ದೀಪಾ. ಆದರೆ ಸೌಂದರ್ಯ ಮುಖ್ಯ ಎನ್ನೋದು ವಿಲನ್ ಅತ್ತಿಗೆ ಸೌಂದರ್ಯಳ ಮಾತು. ಸದ್ಯ ಇದು ಸೌಂದರ್ಯ v/s ಗುಣ ಎಂದಾಗಿದೆ.
ಬದಲಾದ ದೀಪಾ
ದೀಪಾ ಈಗ ದಿಶಾ ಆಗಿ ಬದಲಾಗಿದ್ದಾಳೆ. ಪಟಪಟ ಎಂದು ಇಂಗ್ಲಿಷ್ ಹೇಳುತ್ತಾಳೆ. ದೀಪಾಳೆ ದಿಶಾ ಆಗಿ ಬಂದಿದ್ದರೂ ಅಲ್ಲಿದ್ದವರಿಗೆ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ಸೋಜಿಗ, ಹಾಸ್ಯಾಸ್ಪದ ಎನ್ನಿಸಿದರೂ ಇದನ್ನು ಸೀರಿಯಲ್ ಆಗಿ ನೋಡುವುದಾದರೆ ವೀಕ್ಷಕರಿಗೆ ಸಕತ್ ಖುಷಿ ಕೊಡುತ್ತಿದೆ. ಸೌಂದರ್ಯಳ ಅಹಂಕಾರವನ್ನು ಅಡಗಿಸುವ ದಿಶಾಳನ್ನು ಕಂಡು ಹಿರಿಹಿರಿ ಹಿಗ್ಗುತ್ತಿದ್ದಾರೆ ವೀಕ್ಷಕರು.
ಚಿರು ಕಚೇರಿಗೆ ಬಂದ ದಿಶಾ
ಸತಾಯಿಸಿ ಸತಾಯಿಸಿ ಕೊನೆಗೂ ದಿಶಾ, ಚಿರು ಕಚೇರಿಗೆ ಬಂದಿದ್ದಾಳೆ. ಅವಳು ಬಂದಾಗ ಅವಳ ಕೂದಲು ಹಾರುವುದನ್ನು ನೋಡಬಹುದು. ಸಾಮಾನ್ಯವಾಗಿ ಹೀರೋಯಿನ್, ಮಾಡೆಲ್ಸ್ ಎಂಟ್ರಿ ಕೊಡುವಾಗ ಅವರ ಮುಂಗುರುಳು ಹಾರುವುದನ್ನು ನೋಡಬಹುದು. ಇದು ಅವರ ಎಂಟ್ರಿಗೆ ಮಾಸ್ ಲುಕ್ ಕೊಡುತ್ತದೆ. ದಿಶಾ ಬರುವಾಗಲೂ ಅದೇ ರೀತಿ ಮಾಡಿದ್ದಾರೆ.
ಮೇಕಿಂಗ್ ವಿಡಿಯೋ ವೈರಲ್
ಅದನ್ನು ಹೇಗೆ ಮಾಡಲಾಗಿದೆ ಎನ್ನುವ ಮೇಕಿಂಗ್ ವಿಡಿಯೋ ಈಗ ವೈರಲ್ ಆಗಿದೆ. ಚಿರು ಕೈಯಲ್ಲಿ ಹೇರ್ ಡ್ರೈಯರ್ ಹಿಡಿದು ಕುಳಿತುಕೊಂಡಿರುವುದನ್ನು ನೋಡಬಹುದು. ದಿಶಾ ಎಂಟ್ರಿ ಆಗುತ್ತಿದ್ದಂತೆಯೇ ಹೇರ್ಡ್ರೈಯರ್ ಆನ್ ಮಾಡಿ ಕೂದಲು ಹಾರುವಂತೆ ಮಾಡುತ್ತಾರೆ. ಅಲ್ಲಿ ಬ್ಲೂಸ್ಕ್ರೀನ್ ಟೆಕ್ನಾಲಾಜಿ ಬಳಸುವುದರಿಂದ ದಿಶಾ ಎಂಟ್ರಿ ಮಾತ್ರ ಫೈನಲ್ ಆಗಿ ಕಾಣಿಸುತ್ತದೆ. ಅಲ್ಲಿ ಅಕ್ಕ ಪಕ್ಕ ಇರುವವರು ಕಾಣಿಸುವುದಿಲ್ಲ. ಇದನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಕೆಳಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ನಟಿಯ ಕುರಿತು...
ಅಂದಹಾಗೆ ದೀಪಾ ಮತ್ತು ದಿಶಾ ಪಾತ್ರ ಮಾಡ್ತಿರೋ ನಟಿಯ ಹೆಸರು ದಿಯಾ ಪಾಲಕ್ಕಲ್. ಇನ್ನು ದಿಯಾ ಕುರಿತು ಹೇಳುವುದಾದರೆ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು.
ತಮಿಳಿನಲ್ಲಿಯೂ ನಟನೆ
ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.