Bigg Boss ವೀಕ್ಷಕರಿಗೆ ಶಾಕ್​: ಖ್ಯಾತ ನಟಿ ಮನೆಯಿಂದ ಹೊರಕ್ಕೆ- ಯಾರೂ ಊಹಿಸದ ಟ್ವಿಸ್ಟ್​!

Published : Oct 12, 2025, 02:10 PM IST

ಕನ್ನಡ ಬಿಗ್​ಬಾಸ್​ ಸೀಸನ್ 12 ರಲ್ಲಿ ಶೋ ಸ್ಥಗಿತಗೊಂಡಿದ್ದರಿಂದ ಎಲಿಮಿನೇಷನ್ ಕುತೂಹಲ ಹೆಚ್ಚಾಗಿದೆ. ಅದೇ ಇನ್ನೊಂದೆಡೆ ಖ್ಯಾತ ನಟಿಯನ್ನು ಈ ಬಾರಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹಾಕಲಾಗಿದೆ. ಯಾರೀಕೆ? ಆಗಿದ್ದೇನು?  

PREV
17
ಭರ್ಜರಿಯಾಗಿ ನಡೀತಿದೆ ಕನ್ನಡದ ಬಿಗ್​ಬಾಸ್​

ಕನ್ನಡದ ಬಿಗ್​ಬಾಸ್​ ಸೀಸನ್​ 12 ಭರ್ಜರಿಯಾಗಿ ನಡೆಯುತ್ತಿದೆ. ಇದಾಗಲೇ ಇಬ್ಬರು ಸ್ಪರ್ಧಿಗಳು ಮೊದಲ ವಾರದಲ್ಲಿಯೇ ಎಲಿಮಿನೇಟ್​ ಆಗಿದ್ದಾರೆ. ಆರ್​.ಜೆ.ಅಮಿತ್​ ಮತ್ತು ಬಾಡಿ ಬಿಲ್ಡರ್​ ಕರಿಬಸಪ್ಪ ಅವರು ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಸದ್ಯ ಮೂರನೇ ವಾರಕ್ಕೆ ದೊಡ್ಡ ಫಿನಾಲೆ ನಡೆಯಲಿದ್ದು, ಆಗ ಎಷ್ಟು ಜನರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ ಇದೆ. ಅದೇ ವೇಳೆ, ಹೋಲ್​ಸೇಲ್​ ಆಗಿ ಹಲವರನ್ನು ನಾಮಿನೇಟ್​ ಮಾಡಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

27
ಜಂಟಿ-ಒಂಟಿ ನಾಮಿನೇಷನ್​

ಜಂಟಿಗಳಲ್ಲಿ ನಾಮಿನೇಟ್ ಆದವರು, ಮಾಳು-ಸ್ಪಂದನಾ ಸೋಮಣ್ಣ, ಮಂಜು ಭಾಷಿಣಿ-ರಿಷಿಕಾ ಮತ್ತು ಅಭಿ-ಅಶ್ವಿನಿ ಇನ್ನು ಒಂಟಿಗಳಲ್ಲಿ ರಕ್ಷಿತಾ ಶೆಟ್ಟಿ, ಧನು, ಜಾನ್ವಿ, ಅಶ್ವಿನಿ ಗೌಡ ನಾಮಿನೇಟ್ ಆಗಿದ್ದಾರೆ. ಸ್ಟ್ರಾಂಗ್​ ಸ್ಪರ್ಧಿಗಳು ಎನ್ನಿಸಿಕೊಂಡಿರುವ ಇವರಲ್ಲಿ ಮನೆಯಿಂದ ಹೊರಕ್ಕೆ ಹೋಗುವವರು ಯಾರು ಎಂದು ಬಿಗ್​ಬಾಸ್​ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

37
ಶಾಕ್​ ಕೊಟ್ಟ ಬಿಗ್​ಬಾಸ್​

ಇದು ಬಿಗ್​ಬಾಸ್​​ ಕನ್ನಡದ ಕಥೆಯಾದ್ರೆ, ಅತ್ತ ತೆಲುಗು ಬಿಗ್​ಬಾಸ್​ ಅಭಿಮಾನಿಗಳಿಗೆ ಭಾರಿ ಶಾಕ್​ ಕೊಟ್ಟಿದೆ. ಯಾರೂ ಊಹಿಸದ ರೀತಿಯಲ್ಲಿ ಎಲಿಮಿನೇಷನ್​ ನಡೆದಿದ್ದು, ಖ್ಯಾತ ನಟಿಯೊಬ್ಬರನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ. ಸದ್ಯ ಸಿಕ್ಕಿರುವ ವರದಿಗಳ ಪ್ರಕಾರ, ಬಾಲಿವುಡ್​, ಕಾಲಿವುಡ್​ ಸೇರಿದಂತೆ ಬಹುಭಾಷಾ ನಟಿ ಫ್ಲೋರಾ ಸೈನಿ ಐದನೇ ವಾರದಲ್ಲಿ ಬಿಗ್ ಬಾಸ್ ತೆಲುಗು 9 ರಿಂದ ಹೊರಹಾಕಲ್ಪಟ್ಟಿದ್ದಾರೆ. ವೀಕ್ಷಕರಲ್ಲಿ ಜನಪ್ರಿಯ ಸ್ಪರ್ಧಿಯಾಗಿದ್ದ ಅವರ ನಿರ್ಗಮನವು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಸಾಕಷ್ಟು ಮತಗಳನ್ನು ಪಡೆದಿದ್ದರೂ, ಹೀಗೇಕೆ ಆಯಿತು ಎನ್ನುತ್ತಿದ್ದಾರೆ ವೀಕ್ಷಕರು.

47
9ನೇ ಸೀಸನ್​

ಇನ್ನು ಬಿಗ್ ಬಾಸ್ ತೆಲುಗು 9ನೇ ಸೀಸನ್​ ಇದು. ಐದನೇ ವಾರ ತಲುಪಿದೆ ಆಟ. ಈ ವಾರ ಹತ್ತು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮನಿರ್ದೇಶನಗೊಂಡಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸುಮನ್ ಶೆಟ್ಟಿ, ತನುಷಾ ಗೌಡ, ಭರಣಿ, ಫ್ಲೋರಾ ಸೈನಿ, ರಿತು ಚೌಧರಿ, ಡೆಮನ್ ಪವನ್, ಶ್ರೀಜಾ ದಮ್ಮು, ಕಲ್ಯಾಣ್ ಪಡಲ, ಸಂಜನಾ ಗಲ್ರಾನಿ ಮತ್ತು ದಿವ್ಯಾ ನಿಖಿತಾ ಮುಂತಾದ ಸ್ಪರ್ಧಿಗಳು ನಾಮನಿರ್ದೇಶನ ಪಟ್ಟಿಯನ್ನು ಎದುರಿಸಿದರು. ಕ್ಯಾಪ್ಟನ್ ರಾಮು ಮತ್ತು ಎಮ್ಯಾನುಯೆಲ್ ಮಾತ್ರ ಸುರಕ್ಷಿತವಾಗಿದ್ದರು.

57
ಬಿಗ್ ಬಾಸ್ 9 ತೆಲುಗು 5 ನೇ ವಾರ ಎಲಿಮಿನೇಷನ್​

ಕಳೆದ ಕೆಲವು ವಾರಗಳಲ್ಲಿ, ಫ್ಲೋರಾ ಹೆಚ್ಚಾಗಿ ಮೌನವಾಗಿದ್ದರು, ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಅವರು ಸಂಜನಾ ಅವರೊಂದಿಗೆ ಮಾತ್ರ ಸಮಯ ಕಳೆಯುತ್ತಿದ್ದರು. ವೀಕ್ಷಕರು ಮತ್ತು ನಿರೂಪಕ ನಾಗಾರ್ಜುನ ಅವರು ಈ ಹಿಂದೆ ಆಟದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದ್ದರಿಂದ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

67
ಕನ್ನಡದ ಸ್ಟೋರಿ ಏನು?

ಇನ್ನು ಕನ್ನಡದ ಬಿಗ್​ಬಾಸ್​​ ಬಗ್ಗೆ ಹೇಳುವುದಾದರೆ, ಈ ವಾರ 10 ಮಂದಿ ನಾಮಿನೇಟ್ ಆಗಿದ್ದರೂ ಈ ವಾರದ ಎಲಿಮಿನೇಷನ್‌ ಇರುತ್ತದೆಯೋ ಇಲ್ಲವೋ ಇದುವರೆಗೆ ತಿಳಿದಿಲ್ಲ. ಏಕೆಂದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್​ಬಾಸ್​​ ಮನೆಗೆ ಬೀಗ ಹಾಕಿದ್ದರಿಂದ ಮಂಗಳವಾರ ಷೋ ಸ್ಥಗಿತಗೊಂಡಿತ್ತು. ಬಳಿಕ ಗುರುವಾರ ಮತ್ತೆ ಷೋ ಸುರುವಾಗಿದೆ.

77
ಎಲಿಮಿನೇಷನ್​ ಇದ್ಯಾ?

ಆದ್ದರಿಂದ ಎಲಿಮಿನೇಷನ್‌ ಸಾಧ್ಯತೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಏನು ಟ್ವಿಸ್ಟ್‌ ಇರಲಿದೆ ಎಂಬುದು ನೋಡಬೇಕಿದೆ.

ಇದನ್ನೂ ಓದಿ: Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ

Read more Photos on
click me!

Recommended Stories