Bigg Boss Kannada 12 ಮನೆಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ; ಪ್ರಶ್ನೆ ಕೇಳಿ ಬೆಚ್ಚಿಬಿದ್ದ ರಕ್ಷಿತಾ ಶೆಟ್ಟಿ!

Published : Oct 17, 2025, 03:24 PM IST

ಬಿಗ್ ಬಾಸ್ ಸೀಸನ್ 12ರ ಮೊದಲ ಫಿನಾಲೆ ವಾರದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದೆ. ಈ ಪ್ರೆಸ್‌ಮೀಟ್ ಟಾಸ್ಕ್ ವೇಳೆ ಸ್ಪರ್ಧಿಗಳು ರಕ್ಷಿತಾ ಶೆಟ್ಟಿಯನ್ನು ಗುರಿಯಾಗಿಸಿಕೊಂಡು, ಆಕೆಯನ್ನು ಮನೆಯಿಂದ ಹೊರಹಾಕಲು ಪ್ರಶ್ನೆಗಳ ಸುರಿಮಳೆಗೈದರು.

PREV
18
ಬಿಗ್ ಬಾಸ್ ಮನೆಯಲ್ಲಿ ತುರ್ತು ಪತ್ರಿಕಾಗೋಷ್ಠಿ

ಬಿಗ್ ಬಾಸ್ ಮನೆಯಲ್ಲಿ ಸೀಸನ್ 12ರ ಮೊದಲ ಫಿನಾಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಫಿನಾಲೆ ತಲುಪಿರುವ ಫಿನಾಲೆ ಕಂಟೆಂಡರ್‌ಗಳು ಪತ್ರಿಕಾಗೋಷ್ಠಿ ಆಯೋಜನೆ ಮಾಡಿ, ಪತ್ರಕರ್ತರಂತೆ ಉಳಿದ ಸ್ಪರ್ಧಿಗಳನ್ನು ಬಾಯಿಗೆ ಬಂದಂತೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಎಲ್ಲರೂ ಹಳ್ಳಕ್ಕೆ ಬಿದ್ದ ಆಳಿಗೆ ನಂದೊಂದು ಏಟು ಎನ್ನುವಂತೆ ರಕ್ಷಿತಾ ಶೆಟ್ಟಿಗೆ ಮಾತಿನ ಪೆಟ್ಟು ನೀಡಲು ಮುಂದಾಗಿದ್ದಾರೆ. ಆದರೆ, ಎಲ್ಲರಿಗೂ ರಕ್ಷಿತಾ ಶೆಟ್ಟಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.

28
ಇನ್ನೋಸೆನ್ಸ್ ಫೇಸ್ ನಿಮ್ಮ ಸ್ಟ್ರಾಟರ್ಜಿನಾ

ರಕ್ಷಿತಾ ಶೆಟ್ಟಿಗೆ ಯಾಕೆ ನೀವು ಇನ್ನೋಸೆನ್ಸ್ ಫೇಸ್ ಮಾಡಿಕೊಂಡು ಕೂತಿದ್ದೀರಾ ಎಂದು ರಾಶಿಕಾ ಕೇಳುತ್ತಾರೆ. ಇದಕ್ಕೆ ಧ್ವನಿಗೂಡಿಸಿದ ಅಶ್ವಿನಿ ಗೌಡ ಇದು ನಿಮ್ಮ ಸ್ಟ್ರಾಟರ್ಜಿನಾ ಎಂದು ಪ್ರಶ್ನೆ ಮಾಡುತ್ತಾರೆ.

38
ನನ್ನ ಫೇಸ್ ಇರೋದೇ ಇನ್ನೋಸೆಂಟ್

ಆಗ ರಕ್ಷಿತಾ ಶೆಟ್ಟಿ ನನ್ನ ಫೇಸ್ ಇರುವುದೇ ಇನ್ನೋಸೆಂಟ್ ಏನು ಮಾಡೋದು ಹೇಳಿ ಎನ್ನುತ್ತಾರೆ. ಆಗ ನಾವು ಇದನ್ನು ಒಪ್ಪುವುದಿಲ್ಲ ಎಂದು ರಾಶಿಕಾ ಮತ್ತು ಅಶ್ವಿನಿ ಗೌಡ ಮಾತಿನ ಬಾಣ ಮುಂದುವರೆಸುತ್ತಾರೆ.

48
ನೈಟ್ ಶಿಫ್ಟ್ ಮಾಡಿದ್ದೇ ಹೆಚ್ಚು

ಕಾಕ್ರೋಚ್ ಸುಧಿ ಅವರು, ನೀವು ಈ ಮನೇಲಿ ಡೇ ಶಿಫ್ಟ್ ಮಾಡಿದ್ದಕ್ಕಿಂತ ನೈಟ್ ಶಿಫ್ಟ್ ಮಾಡಿದ್ದೇ ಹೆಚ್ಚು ಅಂತಾ ಮಾತು ಕೇಳಿ ಬರ್ತಿದೆ. ನೀವು ಇಲ್ಲಿ ಬಿಗ್ ಬಾಸ್‌ಗೆ ಬರುವುದನ್ನು ಬಿಟ್ಟು ಯಾವುದಾದರೂ ಒಂದು ಜೂ ಗಾರ್ಡನ್‌ನಲ್ಲಿ ಕೆಲಸಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಮುಂದುವರೆದು ಕಾಕ್ರೋಚ್ ಸುಧಿ ನಿಮ್ಮನ್ನ ಈ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಇಷ್ಟವಿಲ್ಲ ಎಂದು ನೇರವಾಗಿ ಹೇಳುತ್ತಾರೆ.

58
ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿಕ್ಕೆ ಏನು ಅರ್ಹತೆಗಳಿವೆ

ಇದಕ್ಕೆ ಮತ್ತೆ ಧ್ವನಿಗೂಡಿಸಿದ ಅಶ್ವಿನಿ ಗೌಡ ಇನ್ನೊಬ್ಬರಿಗೆ ಗೌರವ ಕೊಡಬೇಕು ಎನ್ನುವುದು ಇದ್ಯಾವುದೂ ನಿಮ್ಮ ಕ್ಯಾಟಗರಿಯಲ್ಲಿ ಬರುವುದಿಲ್ಲವೇ? ನೀವು ಒಂಥರಾ ಕಲ್ಪನಾ ಲೋಕದಲ್ಲಿ ಬದುಕುತ್ತಿದ್ದೀರಿ ಅನಿಸುತ್ತದೆ ಎಂದು ಪ್ರಶ್ನೆ ಮಾಡುತ್ತಾರೆ. ಜೊತೆಗೆ, ನಿಮಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿಕ್ಕೆ ಏನೆಲ್ಲಾ ಅರ್ಹತೆಗಳಿವೆ ಅನ್ಸುತ್ತೆ ಹೇಳಿ ಎಂದು ಕೇಳುತ್ತಾರೆ.

68
ರಕ್ಷಿತಾ ಶೆಟ್ಟಿ ಎಲ್ಲರಿಗೂ ಟಾರ್ಗೆಟ್

ಒಟ್ಟಾರೆಯಾಗಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕುವುದಕ್ಕೆ ರಕ್ಷಿತಾ ಶೆಟ್ಟಿಯನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದಾರೆ ಎಂಬ ಅಂಶವು ಕಲರ್ಸ್ ಕನ್ನಡ ವಾಹಿನಿಯಿಂದ ಬಿಡುಗಡೆ ಮಾಡಿದ ಪ್ರೋಮೋದಿಂದ ತಿಳಿದು ಬರುತ್ತದೆ.

78
ಅಶ್ವಿನಿ ಗೌಡ, ಜಾಹ್ನವಿಯಿಂದ ಭಾರೀ ಕಿರುಕುಳ:

ಬಿಗ್ ಬಾಸ್ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆ ರಣರಂಗವಾಗಿದೆ. ಅದರಲ್ಲೂ ಎಲ್ಲಾ ವಿಷಯದಲ್ಲೂ ಇತರ ಸ್ಪರ್ಧಿಗಳ ಆಟದಲ್ಲಿ ಕಾಲೆಳೆಯುವ ಅಶ್ವಿನಿ ಗೌಡ ಹಾಗೂ ನಿರೂಪಕಿ ಜಾಹ್ನವಿ, ರಕ್ಷಿತಾ ಶೆಟ್ಟಿಗೆ ಭಾರೀ ಕಿರುಕುಳ ನೀಡುತ್ತಿದ್ದನ್ನು ನೆಟ್ಟಿಗರು ನೋಡಿ ಗರಂ ಆಗಿದ್ದಾರೆ. 

ಮಧ್ಯ ರಾತ್ರಿ ವೇಳೆ ರಕ್ಷಿತಾ ಶೆಟ್ಟಿ (Rakshita Shetty) ಮತ್ತು ಜಾಹ್ನವಿ (Bigg Boss Jhanvi) ನಡುವೆ ಶುರುವಾದ ಜಗಳ ತಾರರಕ್ಕೇರಿದೆ. ರಕ್ಷಿತಾ ಶೆಟ್ಟಿ ಅವರು ಮೊದಲಿಗೆ, ಅವರು ನನ್ನ ಹೆಸರು ಹೇಳಿದರು, ಅದಕ್ಕೇ ನಾನು ಅವರ ಹೆಸರು ಹೇಳಿದೆ ಎಂದು ಹೇಳುತ್ತಾರೆ.

88
ನಿನ್ನ ಡ್ರಾಮಾ ಎಲ್ಲಾ ಬಾತ್‌ ರೂಮಿನಲ್ಲಿ ಮಾಡು

ಜಾಹ್ನವಿ ನಾನೇನು ಚಿಕ್ಕವಳಾ, ನನಗೇನು ಮೆಚುರಿಟಿ ಇಲ್ವಾ ಎಂದು ಕೇಳಿದಾಗ, ರಕ್ಷಿತಾ ಶೆಟ್ಟಿ ನಾಗವಲ್ಲಿ ನೀವೇ, ಮಧ್ಯರಾತ್ರಿ ಗೆಜ್ಜೆ ಸೌಂಡ್​ ಅಶ್ವಿನಿ ಗೌಡ ಅವರು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಿ ಅಶ್ವಿನಿ ಗೌಡ (Ashwini Gowda) ರಕ್ಷಿತಾ ಮೇಲೆ ಕಿಡಿಕಾರಿದ್ದಾರೆ. ಜಾಸ್ತಿ ಮಾತನಾಡಬೇಡ, ಮುಚ್ಕೊಂಡು ಮಲಗು. ಹೋಗಿ ನಿನ್ನ ಡ್ರಾಮಾ ಎಲ್ಲಾ ಬಾತ್‌ ರೂಮಿನಲ್ಲಿ ಮಾಡು ಎಂದಿದ್ದಾರೆ. 

ಅದಕ್ಕೆ ರಕ್ಷಿತಾ ನಾನು ಎಷ್ಟು ಸಲ ಬೇಕಾದರೂ ಬಾತ್ ರೂಮಿಗೆ ಹೋಗ್ತೇನೆ ನಿಮಗೇನು? ಎಂದು ಕೇಳುತ್ತಾರೆ. ಅಶ್ವಿನಿ ಗೌಡ ನೀನು ಎಲ್ಲಿಂದ ಬಂದವಳು ಎಂದು ಗೊತ್ತು, ನಿನ್ನನ್ನು ನೋಡಿದರೆ ಗೊತ್ತಾಗತ್ತೆ ಎನ್ನುವ ಮೂಲಕ ತೀರಾ ವೈಯಕ್ತಿಕವಾಗಿ ನಿಂದಿಸಿದ್ದಾರೆ. ಇದರಿಂದ ಅಶ್ವಿನಿ ಗೌಡ ಮೇಲೆ ಬಿಗ್ ಬಾಸ್ ವೀಕ್ಷಕರು ಕಿಡಿಕಾರುತ್ತಿದ್ದಾರೆ.

Read more Photos on
click me!

Recommended Stories