ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025 ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. 'ಅಮೃತಧಾರೆ' ಗೌತಮ್ ಮತ್ತು 'ಅಣ್ಣಯ್ಯ' ಶಿವು ನೆಚ್ಚಿನ ನಾಯಕ ಪ್ರಶಸ್ತಿ ಪಡೆದರೆ, 'ಕರ್ಣ' ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ನೆಚ್ಚಿನ ನಾಯಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೀರಿಯಲ್ ಎಂದರೆ ಇಂದು ಬಹುತೇಕ ಮನೆ ಮಂದಿಗೆ ಆಪ್ತವಾಗಿದೆ. ಅದರಲ್ಲಿಯೂ ಹಲವು ಗೃಹಿಣಿಯರಿಗೆ ಧಾರಾವಾಹಿ ಬಿಟ್ಟು ಇರಲಾರದ ಸ್ಥಿತಿಯೂ ಇದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್ಗಳು ಕೂಡ ಸ್ತ್ರೀ ಪ್ರಧಾನವೇ. ಇವರೇ ನಾಯಕಿ, ಇವರೇ ವಿಲನ್. ಈ ಸೀರಿಯಲ್ ಜನರ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿ ಬಿಡುತ್ತದೆ ಎಂದರೆ, ಅಲ್ಲಿರುವ ಪಾತ್ರಗಳನ್ನೇ ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ನೋಡುವುದು ಇದೆ.
29
ಗಣ್ಯ ಅತಿಥಿಗಳ ಸಮಾಗಮ
ಅದೇ ಇನ್ನೊಂದೆಡೆ, ಸೀರಿಯಲ್ನಲ್ಲಿ ಬೆರಳೆಣಿಕೆಯಷ್ಟು ನಟ-ನಟಿಯರು ಬಿಟ್ಟರೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಈ ಮೂಲಕ ವೀಕ್ಷಕರಿಗೆ ತುಂಬಾ ಹತ್ತಿರವಾಗುತ್ತಾರೆ. ಆದರೆ ಇವರ ನಟನೆಗೆ ಇನ್ನೊಂದು ಗರಿ ಸಿಗುವುದು ಅವರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ. ಎಲ್ಲಾ ನಟ-ನಟಿಯರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರೂ, ಕೆಲವರಿಗೆ ಮಾತ್ರ ಕೆಲವು ಕಾರಣಕ್ಕೆ ಪ್ರಶಸ್ತಿ ಸಿಗುವುದು ಉಂಟು. ಇದೀಗ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೂ ಕೆಲವರು, ಕೆಲವು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
39
ಅವಾರ್ಡ್ಗಳ ಪಟ್ಟಿ
ಜೀ ಕನ್ನಡ ಕುಟುಂಬ ಅವಾರ್ಡ್ಸ್ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಸೀರಿಯಲ್, ಫೇವರಿಟ್ ಜೋಡಿ, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಎಂಬ ಆರು ಪ್ರಮುಖ ಕೆಟಗರಿ ಇರಲಿವೆ. ಇದರ ಜೊತೆಗೆ ಇನ್ನೂ ಹಲವು ವಿಭಾಗಗಳಲ್ಲಿ ಅವಾರ್ಡ್ ನೀಡಲಾಗಿದೆ. ಸದ್ಯ ಕೆಲವು ಪ್ರಶಸ್ತಿಗಳಷ್ಟೇ ತಿಳಿದುಬಂದಿದ್ದು, ಇನ್ನಷ್ಟು ಬಹಿರಂಗಗೊಳ್ಳಬೇಕಿದೆ.
ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ನೆಚ್ಚಿನ ನಾಯಕನ ಪ್ರಶಸ್ತಿ ನೀಡಿರುವುದನ್ನು ನೋಡಬಹುದು. ಹಲವು ಜನರು ಮೆಚ್ಚಿಕೊಂಡಿರೋ ಇಬ್ಬರು ನಾಯಕರಿಗೆ ಪ್ರಶಸ್ತಿ ಸಂದಿದೆ. ಜೀ ಕುಟುಂಬ ಅವಾರ್ಡ್ಸ್ 2025 ರಲ್ಲಿ 'ನೆಚ್ಚಿನ ನಾಯಕ' ಪ್ರಶಸ್ತಿಯನ್ನು ಅಮೃತಧಾರೆ ಗೌತಮ್ (Amruthadhaare Gowtham) ಮತ್ತು ಅಣ್ಣಯ್ಯ ಸೀರಿಯಲ್ ಶಿವು (Annayya Shivu) ಅವರಿಗೆ ನೀಡಲಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ನೀಡಿ ಗೌರವಿಸಿದರು.
59
ನೆಚ್ಚಿನ ಜೋಡಿ ಪ್ರಶಸ್ತಿ
ಈ ಬಾರಿಯ ನೆಚ್ಚಿನ ಜೋಡಿ ಪ್ರಶಸ್ತಿ ಅಮೃತಧಾರೆ ಗೌತಮ್ ಮತ್ತು ಭೂಮಿಕಾ ಹಾಗೂ ಅಣ್ಣಯ್ಯ ಸೀರಿಯಲ್ ಪಾರು-ಶಿವುಗೆ ಸಿಕ್ಕಿದೆ. ಈ ಜೋಡಿಗಳನ್ನು ವೀಕ್ಷಕರು ತುಂಬಾ ಇಷ್ಟಪಟ್ಟಿದ್ದರು.
69
ನೆಚ್ಚಿನ ನಾಯಕಿ ಪ್ರಶಸ್ತಿ
ಜೀ ಕುಟುಂಬ ಅವಾರ್ಡ್ಸ್ ನ ಈ ಬಾರಿಯ "ನೆಚ್ಚಿನ ನಾಯಕಿ" ಪ್ರಶಸ್ತಿಯನ್ನು Karna Serial ನಿಧಿಗೆ ಸಿಕ್ಕಿದೆ. ಅವರು ಈ ಪ್ರಶಸ್ತಿಯನ್ನು ನಟ ಶಿವರಾಜ್ ಕುಮಾರ್ ಅವರಿಂದ ಅವಾರ್ಡ್ ಪಡೆದುಕೊಂಡರು. ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಅವರ ಟ್ಯಾಟೂವನ್ನು ತೋರಿಸುವ ಮೂಲಕ ಸಂಭ್ರಮಿಸಿದರು.
79
ಹಾಸ್ಯ ನಟ- ನಟಿ ಪ್ರಶಸ್ತಿ
ಹಾಸ್ಯ ನಟಿ ಪ್ರಶಸ್ತಿ ಇವರಿಗೇ ಸಿಗಬೇಕು ಎಂದು ಹಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದುಂಟು. ಅದರಂತೆಯೇ, ಅವರಿಗೇ ಈ ಪ್ರಶಸ್ತಿ ಸಿಕ್ಕಿದೆ. ಅವರೇ one and only one ಕಾಂತಾರಮ್ಮ! ಜೀವನ ಎನ್ನುವುದೇ ಹಾಸ್ಯ. ಆದರೆ ಟೈಮಿಂಗ್ಸ್ ಮಹತ್ವದ್ದು ಎನ್ನುವ ಮೂಲಕ ಈ ಪ್ರಶಸ್ತಿಯನ್ನು ತಾರಾ ಅವರಿಂದ ಪಡೆದುಕೊಂಡಿದ್ದಾರೆ ನಟಿ. ಅದೇ ರೀತಿ ನೆಚ್ಚಿನ ಹಾಸ್ಯ ನಟ ಪ್ರಶಸ್ತಿ ಅಣ್ಣಯ್ಯ ಸೀರಿಯಲ್ ಸೋಮೇಗೌಡರಿಗೆ ಸಿಕ್ಕಿದೆ.
89
ನೆಚ್ಚಿನ ಅಮ್ಮ ಪ್ರಶಸ್ತಿ
ಅಮ್ಮ ಪ್ರಶಸ್ತಿಗೆ ಕೆಲವರು ಹೆಸರು ಓಡಾಡುತ್ತಿತ್ತು. ಗೌತಮ್ ಅಮ್ಮ ಭಾಗ್ಯಂಗೆ ಈ ಪ್ರಶಸ್ತಿ ಸಿಗಬೇಕು ಎಂದು ಹಲವರು ಹೇಳಿದ್ದರು. ಆದರೆ ಮತ್ತಷ್ಟು ಜನರ ಮನಸ್ಸಿನಲ್ಲಿದ್ದ ನಾ ನಿನ್ನ ಬಿಡಲಾರೆ (Na Ninna Bidalaare) ಅಂಬಿಕಾಗೆ ಅಂದರೆ ಆತ್ಮಕ್ಕೆ ಈ ಪ್ರಶಸ್ತಿ ಸಿಕ್ಕಿದೆ. ಇವರ ಮದುವೆ ಎರಡು ವರ್ಷಗಳ ಹಿಂದಷ್ಟೇ ನಡೆದಿದೆ. ನಾನಿನ್ನೂ ಅಮ್ಮ ಆಗಿಲ್ಲ, ಆದರೆ ಹಿತಾಳ ಅಮ್ಮ ಆಗಿ ಬಹಳಷ್ಟು ಕಲಿತಿದ್ದೇನೆ ಎಂದು ಭಾವುಕರಾಗಿ ಅವರ ಈ ಪ್ರಶಸ್ತಿ ಸ್ವೀಕರಿಸಿದರು.
99
ನೆಚ್ಚಿನ ನಿರೂಪಕ- ನಿರೂಪಕಿ ಪ್ರಶಸ್ತಿ
ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025ರಲ್ಲಿ, ನೆಚ್ಚಿನ ನಿರೂಪಕರ ಪ್ರಶಸ್ತಿಯನ್ನು ಅಕುಲ್ ಬಾಲಾಜಿ ಮತ್ತು ಅನುಶ್ರೀ ಹಂಚಿಕೊಂಡಿದ್ದಾರೆ. ಅವರು ಇಬ್ಬರೂ ಒಟ್ಟಿಗೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಬೆಸ್ಟ್ ಮಗ ಪ್ರಶಸ್ತಿಯನ್ನು ಲಕ್ಷ್ಮೀ ನಿವಾಸ ವೆಂಕಿ ಪಡೆದುಕೊಂಡಿದ್ದಾರೆ.