ಅಮೃತಧಾರೆ ಧಾರಾವಾಹಿಯಲ್ಲಿ, ಜೈಲಿನಿಂದ ಬಿಡುಗಡೆಯಾಗಿ ಬಂದ ತನ್ನ ಸಹೋದರ ಶಕುನಿ ಮಾಮನನ್ನು ಆಸ್ತಿಯ ಮದದಲ್ಲಿರುವ ಶಕುಂತಲಾ ಮತ್ತು ಜೈದೇವ್ ಅವಮಾನಿಸುತ್ತಾರೆ. ಮಾಡಿದ ಪಾಪಕ್ಕೆ ಪ್ರತಿಫಲ ಎಂಬಂತೆ ಕಾಣುತ್ತಿರುವ ಈ ಘಟನೆಯು, ಮುಂದಿನ ದಿನಗಳಲ್ಲಿ ಗೌತಮ್ ಮತ್ತು ಭೂಮಿಕಾಗೆ ಸಹಾಯವಾಗಬಹುದೇ ಎಂಬ ಕುತೂಹಲವಿದೆ.
ಮಾಡಿದ ಪಾಪವನ್ನು ಈ ಜನ್ಮದಲ್ಲಿಯೇ ಅನುಭವಿಸಬೇಕು ಎನ್ನುವ ಮಾತಿದೆ. ಹಲವರ ಬಾಳಿನಲ್ಲಿ ಇದು ಆಗುವುದೂ ನಿಜ. ಐಶ್ವರ್ಯದ ಅಮಲು ತಲೆಗೆ ಏರಿದಾಗ ತಮ್ಮವರೂ ಹತ್ತಿರ ಬಂದರೆ ಕಿರಿಕಿರಿ ಆಗುತ್ತದೆ ಎನ್ನುವ ಮಾತೂ ಇದೆ. ಇವೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದೆ ಅಮೃತಧಾರೆ (Amruthadhaare) ಸೀರಿಯಲ್.
28
ಆಸ್ತಿ ಕೊಟ್ಟರೂ ನೆಮ್ಮದಿ ಇಲ್ಲ
ಗೌತಮ್ ಜೀವನಪೂರ್ತಿ ಮಾಡಿದ್ದ ಆಸ್ತಿಯನ್ನು ಚಿಕ್ಕಮ್ಮ ಶಕುಂತಲಾ ಮತ್ತು ಸಹೋದರ ಜೈದೇವ್ಗೆ ಬರೆದುಕೊಟ್ಟು ಹೋಗಿದ್ದಾನೆ. ಅಷ್ಟೂ ಆಸ್ತಿಯಿದ್ದರೂ ಇವರಿಗೆ ನೆಮ್ಮದಿ ಇಲ್ಲ ಅನ್ನಿ. ಆದರೂ ಅದನ್ನು ಎಂಜಾಯ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಆಸ್ತಿ ಪಡೆಯಲು ಹಾಗೂ ಶಕುಂತಲಾಳ ಕುತಂತ್ರ ಬುದ್ಧಿ ಮೊದಲೇ ಗೌತಮ್ಗೆ ತಿಳಿಯದಂತೆ ಕಾಪಾಡಿದ್ದು ಆಕೆಯ ಸಹೋದರ ಶಕುನಿ ಮಾಮಾ!
38
ಜೈಲುಪಾಲಾಗಿದ್ದ ಮಾಮಾ
ಶಕುಂತಲಾಳನ್ನು ಕಾಪಾಡುವುದಕ್ಕಾಗಿ ತಾನೇ ಮೋಸ ಮಾಡಿದ್ದು ಎಂದು ಗೌತಮ್ಗೆ ಹೇಳಿ ಜೈಲು ಪಾಲಾಗಿದ್ದ ಆತ. ಗೌತಮ್ ಮತ್ತು ಭೂಮಿಕಾರ ವಿರುದ್ಧ ಪಿತೂರಿ ಮಾಡಲು ಶಕುಂತಲಾ ಮತ್ತು ಜೈದೇವ್ಗೆ ಈ ಮಾಮಾ ಬೇಕಿತ್ತು. ಇವನದ್ದೇ ಎಲ್ಲಾ ಕಿತಾಪತಿ. ಆದರೆ ಜೈಲು ಪಾಲಾದ ಕಾರಣ, ಇಬ್ಬರಿಗೂ ಈತ ಅಂದರೆ ಅಷ್ಟಕಷ್ಟೇ.
ಆಗೀಗ ಜೈಲಿಗೆ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದಳು ಶಕುಂತಲಾ. ಏಕೆಂದರೆ ಮನೆಹಾಳು ಕೆಲಸ ಮಾಡಲು ಆತನ ಸಹಕಾರ ಬೇಕಿತ್ತು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ. ಶಕುಂತಲಾ ಮತ್ತು ಜೈದೇವನ ಕೈಗೆ ಆಸ್ತಿಯ ಮದ ಏರಿದೆ. ಅವರಿಗೆ ಈಗ ಯಾರೂ ಬೇಡವಾಗಿದೆ.
58
ಬೇಡವಾದ ಶಕುನಿ ಮಾಮಾ
ಶಕುನಿಮಾಮಾ ಎಂದೇ ಫೇಮಸ್ ಆಗಿರೋ ಶಕುಂತಲಾ ಸಹೋದರ ಜೈಲಿನಿಂದ ಬಂದಿದ್ದಾನೆ. ತನ್ನನ್ನು ನೋಡಿ ತನ್ನ ತಂಗಿ ಮತ್ತು ಅಳಿಮಯ್ಯ ಅಪ್ಪಿಕೊಂಡು ಖುಷಿಪಡ್ತಾರೆ ಎಂದುಕೊಂಡಿರೋ ಆತನ ಲೆಕ್ಕಾಚಾರ ಉಲ್ಟಾ ಆಗಿದೆ. ಇದಾಗಲೇ ಆಸ್ತಿ ಅನುಭವಿಸುತ್ತಿರುವ ಅವರಿಗೆ ಈತ ಬೇಡವಾಗಿದ್ದಾನೆ. ಅವನನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ.
68
ಕನ್ಫ್ಯೂಸ್ ಶಕುನಿಮಾಮಾ
ಶಕುಂತಲಾ ಮತ್ತು ಜೈದೇವ ಮುಖ ನೋಡಿ ಮಾಮಂಗೆ ಸಕತ್ ಬೇಜಾರು ಆಗಿದೆ. ಜೈದೇವ ನೇರವಾಗಿ ಭಿಕ್ಷುಕನ ಥರ ಕಾಣಿಸ್ತಿದ್ಯಾ ಎಂದಿದ್ದಾನೆ. ಸ್ನಾನ ಮಾಡಿ ಬಾ ಎಂದಿದ್ದಾರೆ. ಆದರೆ ಇಲ್ಲಿ ವಿಷಯ ಏನಾಗಿದೆ ಎನ್ನೋದು ತಿಳಿಯದ ಈ ಮಾಮಾ ಸ್ವಲ್ಪ ಕನ್ಫ್ಯೂಸ್ ಆಗಿದ್ದಾನೆ. ಆದರೆ ಇವನನ್ನು ನೋಡಿ ಶಕುಂತಲಾ ಮತ್ತು ಜೈದೇವ್ ಆಡ್ತಿರೋದನ್ನು ನೋಡಿ ನೆಟ್ಟಿಗರು ಕರ್ಮ್ ರಿಟರ್ನ್ಸ್ ಎನ್ನುತ್ತಿದ್ದಾರೆ.
78
ಆಸ್ತಿಗಾಗಿ ಜಗಳ
ಈಗ ಅಸಲಿ ವಿಷಯ ತಿಳಿದ ಮೇಲೆ ಈ ಶಕುನಿಮಾಮ ಆಸ್ತಿಯನ್ನು ಅನುಭವಿಸಬೇಕು ಎಂದು ಹವಣಿಸೋದು ನಿಜ. ಇದೇ ಎಲ್ಲರ ನಡುವೆಯೇ ಗಲಾಟೆಗೆ ಕಾರಣವಾಗಿ ಪರಿಸ್ಥಿತಿ ಬಿಡಲಾಯಿಸುವ ಸಾಧ್ಯತೆ ಇದೆ.
88
ಗೌತಮ್ ಪರ ಹೋಗ್ತಾನಾ?
ಕೊನೆಗೆ ಈತ ಬೇಸತ್ತು ಗೌತಮ್-ಭೂಮಿಕಾ ಪರ ಹೋದರೂ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಮುಂದೇನಾಗುತ್ತೆ ಎನ್ನುವ ಕುತೂಹಲ ವೀಕ್ಷಕರದ್ದು