ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!

Published : Dec 16, 2025, 09:59 PM IST

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಚೈತ್ರ ಕುಂದಾಪುರ, ಸ್ಪರ್ಧಿ ಅಶ್ವಿನಿ ಗೌಡ ಅವರಿಗೆ ಉಗುರಿನಿಂದ ಪರಚಿ ಗಾಯಗೊಳಿಸಿದ್ದಾರೆ. ಎಚ್ಚರಿಕೆ ನೀಡಿದರೂ ಕೇಳದೆ, ಅಸಭ್ಯವಾಗಿ ವರ್ತಿಸಿದ ಚೈತ್ರಾ, ನಂತರ ತನ್ನ ಮೇಲೆಯೇ ಹಲ್ಲೆಯಾಗಿದೆ ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದಾರೆ.

PREV
18
ಹಳೆ ಚಾಳಿ ಬಿಡದ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ಚೈತ್ರ ಕುಂದಾಪುರ ತನ್ನ ಹಳೆಯದೇ ವರಸೆ ತೆಗೆದಿದ್ದಾರೆ. ಫಿಸಿಕಲ್ ಟಾಸ್ಕ್ ಬಂದಾಕ್ಷಣ ಕೈಲಾಗದವಳು ಮೈ ಪರಚಿಕೊಂಡಳು ಎಂಬಂತೆ ಅಶ್ವಿನಿ ಗೌಡ ಅವರನ್ನು ಬಗ್ಗಿಸಲು ಕೈಯಿಂದ ಉಗುರಿನಿಂದ ಪರಚಿ ಗಾಯ ಮಾಡಿದ್ದಾಳೆ.

28
ಕ್ಯಾಪ್ಟನ್ ಟಾಸ್ಕ್‌ನಲ್ಲಿ ಅಶ್ವಿನಿಗೆ ಗಾಯ

12ನೇ ವಾರದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಟಾಸ್ಕ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ನೀಡಿದ ಟಾಸ್ಕ್ ನಲ್ಲಿ ತಟ್ಟೆಗಳನ್ನು ಜೋಡಿಸುವ ವೇಳೆ ಅದನ್ನು ತಡೆಯಲು ಮುಂದಾದ ಅಶ್ವಿನಿ ಗೌಡ ಅವರಿಗೆ ತುಂಬಾ ಗಾಯ ಮಾಡಿದ್ದಾರೆ.

38
ರಾಶಿಕಾ ಮಾತಿಗೂ ಬಗ್ಗದ ಚೈತ್ರಾ

ಈ ಟಾಸ್ಕ್ ನಲ್ಲಿ ಮನೆಯ ಕ್ಯಾಪ್ಟನ್ ಹಾಗೂ ಟಾಸ್ಕ್ ಉಸ್ತುವಾರಿ ಆಗಿದ್ದ ರಾಶಿಕಾ ಅವರು ಉಗುರಿನಿಂದ ಪರಚಬೇಡಿ ಎಂದು ಹೇಳಿದರೂ ಕೇಳದೆ ಅಶ್ವಿನಿ ಗೌಡ ಅವರಿಗೆ ಪರಚುವುದನ್ನು ಮುಂದುವರೆಸಿದ್ದು, ತಲೆಯಲ್ಲಿ ಬುದ್ಧಿ ಇಲ್ಲದವರಂತೆ ಆಟವಾಡಿದ್ದಾರೆ.

48
ಎಂಜಲು ಉಗಿದ ಚೈತ್ರಾ

ಇನ್ನು ಬಿಗ್ ಬಾಸ್ ಸಹ ಸ್ಪರ್ಧಿಗಳು ಎಷ್ಟೇ ಹೇಳಿದರೂ ಕೇಳದೆ ಅಶ್ವಿನಿ ಅವರಿಗೆ ಪರಚಿ ಗಾಯ ಮಾಡುವುದನ್ನು ಮುಂದುವರೆಸಿದ್ದಾರೆ. ಇನ್ನು ಬಟ್ಟೆ ಮೇಲೆ ಎತ್ತುವುದು, ಬಾಯಿಂದ ಮುಖಕ್ಕೆ ಎಂಜಲು ಉಗುಳುವುದು ಸೇರಿ ಹಲವು ಕುತಂತ್ರ ಮತ್ತು ನೀಚ ಕೆಲಸ ಮಾಡಿದ್ದಾರೆ.

58
ಕೆಟ್ಟದಾಗಿ ಆಡುವ ಮನಸ್ಥಿತಿಯೇ ಇರಲಿಲ್ಲ

ಈವರೆಗೆ ಬಿಗ್ ಬಾಸ್ ಮನೆಯಲ್ಲಿ ಇಂತಹ ಕೆಟ್ಟ ಆಟ ಆಡುವ ಯಾರೊಬ್ಬ ಸ್ಪರ್ಧೆಯೂ ಇರಲಿಲ್ಲ. ಟಾಸ್ಕ್ ನಲ್ಲಿ ಎಲ್ಲರೂ ನ್ಯಾಯಬದ್ಧವಾಗಿ ಆಟ ಆಡುತ್ತಿದ್ದರು. ಇದೀಗ ಚೈತ್ರ ಬಂದ ನಂತರ ಕ್ಯಾಪ್ಟನ್ ಟಾಸ್ಕ್ ಉಸ್ತುವಾರಿ ಹಾಳು ಮಾಡಿದರು.

68
ಪೆಟ್ಟುಕೊಟ್ಟ ಅಶ್ವಿನಿ ಗೌಡ

ಇಡೀ ಟಾಸ್ಕ್‌ನಲ್ಲಿ ಉಗುರುಗಳಿಂದ ಪರಚದೇ, ಚಿವುಟದೇ ಆಟವಾಡಿ ಎಂದರೂ ಕೇಳದಿದ್ದಾಗ ಅಶ್ವಿನಿ ಅವರು ಚೈತ್ರ ಪರಚುವುದನ್ನು ಬಿಡಿಸಲು ಒಂದು ಏಟು ಹೊಡೆಯುತ್ತಾರೆ.

78
ಹಲ್ಲೆ ಮಾಡಿದ್ದಾರೆಂದು ಕ್ಯಾತೆ

ಆಗ ಚೈತ್ರಾ ತಾನು ಪರಚಿ ಗಾಯ ಮಾಡಿದ್ದನ್ನು ಮುಚ್ಚಿಟ್ಟು ತನ್ನ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ (ಕೈಯಿಂದ ಹಲ್ಲೆ) ಮಾಡಲಾಗಿದೆ ಎಂದು ಬೊಬ್ಬೆ ಹಾಕುತ್ತಾಳೆ.

88
ಚೀಪ್ ಮೆಂಟಾಲಿಟಿ ಬಿಟ್ಟಿಲ್ಲ

ಇಂತಹ ಚೀಪ್ ಮೆಂಟಾಲಿಟಿಯ ಆಟವನ್ನು ಹಿಂದಿನ ಸೀಸನ್ ನಲ್ಲಿಯೂ ಮಾಡಿದ್ದ ಚೈತ್ರ ಕುಂದಾಪುರ ಅವರನ್ನು ಪುನಃ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಕಳಿಸುವ ಅಗತ್ಯವಾದರೂ ಏನಿತ್ತು ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ.

Read more Photos on
click me!

Recommended Stories