ಮತ್ತೆ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ ‘ಕಮಲಿ’ ಸೀರಿಯಲ್ ನಾಯಕಿ ಅಮೂಲ್ಯ

Published : Dec 16, 2025, 03:40 PM IST

ಕನ್ನಡ ಕಿರುತೆರೆ ನಟಿ ಅಮೂಲ್ಯ ಗೌಡ, ಕಮಲಿ ಸೀರಿಯಲ್ ಮೂಲಕ ಹಳ್ಳಿ ಹುಡುಗಿಯಾಗಿ ಜನಪ್ರಿಯತೆ ಪಡೆದರು. ಬಳಿಕ ಶ್ರೀಗೌರಿ ಸೀರಿಯಲ್ ಮೂಲಕ ಸದ್ದು ಮಾಡಿದರು. ಇದೀಗ ಹೊಸ ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಅಮೂಲ್ಯ. 

PREV
16
ಅಮೂಲ್ಯ ಓಂಕಾರ್

ಕನ್ನಡ ಕಿರುತೆರೆಗೆ ಕಮಲಿಯಾಗಿ ಎಂಟ್ರಿ ಕೊಟ್ಟು, ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡ ನಟಿ ಅಮೂಲ್ಯಾ ಓಂಕಾರ್. ಹಳ್ಳಿ ಹುಡುಗಿ ಕಮಲಿ ಪಾತ್ರವನ್ನು ಜನ ತುಂಬಾನೆ ಇಷ್ಟಪಟ್ಟಿದ್ದರು. ಇಂದಿಗೂ ಜನ ಅಮೂಲ್ಯರನ್ನು ಕಮಲಿಯಾಗಿ ಗುರುತಿಸುತ್ತಾರೆ.

26
ಶ್ರೀ ಗೌರಿ

ಕಮಲಿ ಸೀರಿಯಲ್ ಬಳಿಕ ಅಮೂಲ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀಗೌರಿ ಧಾರಾವಾಹಿಯಲ್ಲಿ ನಾಯಕಿ ಗೌರಿಯಾಗಿ ನಟಿಸಿದ್ದರು. ಆರಂಭದಲ್ಲಿ ಇಂಟ್ರೆಸ್ಟಿಂಗ್ ಆಗಿ ಮೂಡಿ ಬಂದ ಧಾರಾವಾಹಿ, ಬಳಿಕ ನಿಧಾನವಾಗಿ ಸಾಗಿ ಬೇಗನೆ ಸೀರಿಯಲ್ ಕೊನೆಗೊಂಡಿತ್ತು.

36
ಸದ್ಯ ತೆಲುಗಿನಲ್ಲಿ ಬ್ಯುಸಿ

ಶ್ರೀಗೌರಿ ಬಳಿಕ ಕನ್ನಡ ಕಿರುತೆರೆಯಿಂದ ಅಮೂಲ್ಯ ಓಂಕಾರ್ ದೂರಾನೆ ಉಳಿದಿದ್ದರು. ಸದ್ಯ ತೆಲುಗು ಕಿರುತೆರೆಯಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇವರು ತೆಲುಗು ಕಿರುತೆರೆಯ ಸ್ಟಾರ್ ನಟಿ ಕೂಡ ಹೌದು.

46
ಹೊಸ ಸೀರಿಯಲ್ ಮೂಲಕ ಕಂಬ್ಯಾಕ್

ಇದೀಗ ಸೋಶಿಯಲ್ ಮೀಡೀಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ, ಹೊಸ ಸೀರಿಯಲ್ ಮೂಲಕ ಅಮೂಲ್ಯ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರೆ. ಆದರೆ ಅದು ಯಾವಾಗ? ಹಾಗೂ ಯಾವ ಚಾನೆಲ್ ಎನ್ನುವ ಬಗ್ಗೆ ಮಾಹಿತಿ ಇಲ್ಲ.

56
ತೆಲುಗು ಸೀರಿಯಲ್ ರಿಮೇಕ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯಂತೆ ಅಮೂಲ್ಯ ತೆಲುಗಿನ ಜಗಧಾತ್ರಿ ಸೀರಿಯಲ್ ನ ಕನ್ನಡ ರಿಮೇಕ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನಲ್ಲಿ ಈ ಧಾರಾವಾಹಿಯಲ್ಲಿ ಕನ್ನಡತಿ ದೀಪ್ತಿ ಮನ್ನೆ ನಟಿಸುತ್ತಿದ್ದಾರೆ.

66
ಕಥೆ ಏನು?

ಮನೆಯಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಹಿರಿಯ ಮಗಳಾಗಿ ಹಾಗೂ ಕ್ರೈಂ ಬ್ರಾಂಚ್ ನ ಅಂಡರ್ ಕವರ್ ಏಜೆಂಟ್ ಆಗಿ ಕೆಲಸ ಮಾಡುವ ಜಗಧಾತ್ರಿ ಎನ್ನುವ ಯುವತಿಯ ಕಥೆ ಇದಾಗಿದೆ. ಇದೇ ಧಾರಾವಾಹಿ ಕನ್ನಡ ಅವತರಣಿಕೆಯಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

Read more Photos on
click me!

Recommended Stories