ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಸೂರಜ್ ಸಿಂಗ್ ಅವರಿಗೆ ಅವರ ತಾಯಿ ಬೆಂಬಲ ಕೋರಿದ್ದಾರೆ. ಆದರೆ, ಸಹ ಸ್ಪರ್ಧಿ ಜೊತೆಗಿನ ಸೂರಜ್ ಅವರ ಬಾಂಧವ್ಯವನ್ನು ನೋಡಿದ ವೀಕ್ಷಕರು, 'ಅವಳಿಂದ ನಿಮ್ಮ ಮಗನನ್ನು ದೂರವಿರಿಸಿ' ಎಂದು ಸೂರಜ್ ತಾಯಿಗೆ ಸಲಹೆ ನೀಡುತ್ತಿದ್ದಾರೆ.
Bigg Boss ಮನೆಯಿಂದ ಡಾಗ್ ಸತೀಶ್, ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್.ಎಸ್ ಈ ಮೂವರು ಹೋಗುತ್ತಿದ್ದಂತೆಯೇ ಮತ್ತೆ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ಲವರ್ ಬಾಯ್ ಸೂರಜ್ ಸಿಂಗ್ (Bigg Boss Suraj Singh)
27
ಸೂರಜ್ ಸಿಂಗ್ ಮೇಲೆ ಕ್ರಷ್
ಅವರು ಎಂಟ್ರಿ ಕೊಟ್ಟಾಗಲೇ ಅಲ್ಲಿದ್ದ ಹೆಣ್ಮಕ್ಕಳೆಲ್ಲಾ ಕಣ್ಣು ಕಣ್ಣು ಬಿಟ್ಟು ನೋಡುತ್ತಿದ್ದರು. ಅದರಲ್ಲಿಯೂ ಸೂರಜ್ ಸಿಂಗ್ ಷರ್ಟ್ ಬಿಚ್ಚಿ ಪೋಸ್ ಕೊಟ್ಟಿದ್ದರು. ಇದನ್ನು ನೋಡಿ ಅಲ್ಲಿದ್ದ ಯುವತಿಯರು, ಆಂಟಿಗಳು ಎಲ್ಲರೂ ವಾವ್ಹ್ ಎನ್ನುವ ಮೂಲಕ ಸೂರಜ್ ಅವರನ್ನೇ ಬಿಟ್ಟ ಕಣ್ಣುಗಳಿಂದ ನೋಡಿದ್ದರು.
37
ಸೂರಜ್ ಸಿಂಗ್ ಅಮ್ಮನ ಮನವಿ
ಇದೀಗ ಸೂರಜ್ ಸಿಂಗ್ ಅವರ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಬಂದು ಮಗನ ಪರವಾಗಿ ಮಾತನಾಡಿದ್ದಾರೆ. 2024ರಿಂದ ತುಂಬಾ ಎಫರ್ಟ್ ಹಾಕಿದ್ದಾನೆ ಸೂರಜ್. ಫಿಸಿಕಲಿ, ಮೆಂಟಲಿ ತುಂಬಾ ಕಷ್ಟ ಪಟ್ಟಿದ್ದಾನೆ. ತೂಕ ಕಮ್ಮಿ ಮಾಡಿಕೊಂಡಿದ್ದಾನೆ. ಕಾನ್ಫಿಡೆನ್ಸ್ ಲೆವೆಲ್ ಹೆಚ್ಚಿಸಿಕೊಂಡಿದ್ದಾನೆ ಅವನಿಗೆ ಸಪೋರ್ಟ್ ಮಾಡಿ ಎಂದು ಕೋರಿಕೊಂಡಿದ್ದಾರೆ.
ಇದೇ ವೇಳೆ, ಬಿಗ್ಬಾಸ್ ಹೋಗುವ ಮುನ್ನ ಅವನ ಸೋಷಿಯಲ್ ಮೀಡಿಯಾದಲ್ಲಿ 19 ಸಾವಿರ ಇದ್ದರು, ಈಗ 2 ಲಕ್ಷ ದಾಟಿದೆ. ಇದರಿಂದ ತುಂಬಾ ಹೆಮ್ಮೆ ಆಗ್ತಿದೆ ಎಂದಿರುವ ಸೂರಜ್ ತಾಯಿ, ಎಲ್ಲರಿಗೂ ಧನ್ಯವಾದ. ಸಲ್ಲಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಲೇ, ಬಹುತೇಕ ಮಂದಿ ಅವಳಿಂದ ದೂರ ಇಲ್ಲದಿದ್ರೆ ನಿಮ್ ಮಗ ಉದ್ಧಾರ ಆಗಲ್ಲಮ್ಮಾ, ಅವಳಿಂದ ದೂರ ಇರಲು ಹೇಳಿ ಎಂದೆಲ್ಲಾ ಹೇಳುತ್ತಿದ್ದಾರೆ.
57
ಬಿಗ್ಬಾಸ್ ವೀಕ್ಷಕರಿಗೆ ಗೊತ್ತಾಯ್ತು!
ಅಷ್ಟಕ್ಕೂ ಯಾರಿಂದ ದೂರ ಇರಲು ಹೇಳ್ತಿರೋದು ಎಂದರೆ, ಬಿಗ್ಬಾಸ್ ವೀಕ್ಷಕರಿಗೆ ಇದಾಗಲೇ ಗೊತ್ತಾದಂತೆ ಅವರು ರಾಶಿಕಾ ಶೆಟ್ಟಿ. ಅತ್ಯಂತ ಸುಂದರ ಹೆಣ್ಣು ಯಾರು ಎಂದು ಕೇಳಿದಾಗ ಸೂರಜ್ ರಾಶಿಕಾ ಶೆಟ್ಟಿ (Bigg Boss Rashika Shetty) ಹೆಸರು ಹೇಳಿ ಹೂವನ್ನು ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಬರುವ ಹದಿನೈದು ದಿನಗಳ ಹಿಂದೆಯಷ್ಟೇ ರಾಶಿಕಾ ಶೆಟ್ಟಿ ಅವರು ಸೂರಜ್ ಸಿಂಗ್ ಅವರ ವಿಡಿಯೋ ನೋಡಿ, ಹ್ಯಾಂಡ್‌ಸಮ್, ಕ್ಯೂಟ್ ಎಂದುಕೊಂಡಿದ್ದರಂತೆ. ಈಗ ಅವರು ದೊಡ್ಮನೆಯೊಳಗಡೆ ಬಂದಿರೋದು ರಾಶಿಕಾ ಶೆಟ್ಟಿಗೆ ಸರ್ಪ್ರೈಸ್ ಆಗಿತ್ತು.
67
ರಾಶಿಕಾಗೆ ಹೂ ಕೊಟ್ಟಿದ್ದ ಸೂರಜ್
ಸೂರಜ್ ಮನೆಗೆ ಬಂದು ರಾಶಿಕಾಗೆ ರೋಸ್ ಕೊಟ್ಟ ಬಳಿಕದಿಂದ ರಾಶಿಕಾ ಪೂರ್ತಿಯಾಗಿ ಸೂರಜ್ ಹಿಂದೆ ಮುಂದೆ ಸುತ್ತೋದೆ ಕಾಣಿಸ್ತಿದೆ. ಬಿಗ್ ಬಾಸ್ ಟೈಟಲ್ ಗೆಲ್ಲದಿದ್ದರೂ ಪರವಾಗಿಲ್ಲ ಸೂರಜ್ ಹೃದಯ ಗೆಲ್ಲಲೇ ಬೇಕು ಎನ್ನುವಂತಿದೆ ರಾಶಿಕಾ ನಡೆ.
77
ರಾಶಿಕಾ ಲುಕ್ಕೇ ಚೇಂಜ್
ಇಲ್ಲಿವರೆಗೆ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಶಿಕಾ ಇದೀಗ ಟ್ರೆಡಿಷನಲ್ ಆಗಿ ಸೀರೆಯುಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು ಸೂರಜ್ ಇದ್ದಲ್ಲಿಗೆ ಬಂದು ಹೇಗೆ ಕಾಣಿಸ್ತಿದ್ದೀನಿ ಅಭಿ ಎಂದು ಕೇಳುತ್ತಿದ್ದಾರೆ, ಅಷ್ಟೇ ಅಲ್ಲ ಸೂರಜ್ ಪಕ್ಕ ಕುಳಿತುಕೊಳ್ಳುತ್ತಿದ್ದಾರೆ. ಇವುಗಳಿಂದ ಅವರ ಅಭಿಮಾನಿಗಳಿಗೆ ಇರುಸುಮುರುಸಾಗಿದೆ. ರಾಶಿಕಾರಿಂದ ದೂರ ಇರಿಸಿ ಮಗನನ್ನು ಎನ್ನುತ್ತಿದ್ದಾರೆ.