ಪ್ರೀತಿ ಇರೋ ಕಡೆ ಕೋಪ ಇರುತ್ತಂತೆ, ಕರ್ಣ ನಿತ್ಯಾಳನ್ನ ಲವ್ ಮಾಡ್ತಾನಂತೆ!

Published : Oct 24, 2025, 12:27 PM ISTUpdated : Oct 24, 2025, 12:29 PM IST

Karna and Nithya: "ನೀವು ದಯವಿಟ್ಟು ಹಿಂದಿಯಲ್ಲಿ ತೋರಿಸಿರುವಂತೆ ಇಲ್ಲಿಯೂ ಜೋಡಿಯನ್ನ ದೂರ ಮಾಡಬೇಡಿ" ಅಂತಿದ್ದಾರೆ. ಅಷ್ಟಕ್ಕೂ ಹಿಂದಿಯಲ್ಲಿ ಯಾರು ಯಾರನ್ನ ಮದ್ವೆಯಾದ್ರು? ಹಾಗೂ ಜೋಡಿಯಾಗಿದ್ದರು ಎಂದು ನೋಡುವುದಾದರೆ... 

PREV
16
ಈಗ್ಯಾಕೆ ಹೀಗಂತಿದ್ದಾರೆ?

ಇದೇನಪ್ಪಾ ಇಷ್ಟು ದಿನ ನಿಧಿ ಜಪ ಮಾಡ್ತಿದ್ದ ಕರ್ಣ, ಇದ್ದಕ್ಕಿದ್ದಂತೆ ನಿತ್ಯಾಳನ್ನ ಲವ್ ಮಾಡ್ತಾನಾ? ಅಂತ ಅನಿಸಬಹುದು. ಹೇಗಿದ್ದರೂ ಈಗ ನಿತ್ಯಾಳನ್ನು ಕರ್ಣ ಮದುವೆಯಾಗಿದ್ದಾಯ್ತು. ಇಬ್ಬರೂ ಜೊತೆಗಿರುವುದರಿಂದ ಪ್ರೀತಿ ಮಾಡುವುದಕ್ಕೂ ಸಮಯ ಹಿಡಿಯುವುದಿಲ್ಲ ಬಿಡಿ ಅಂತೀರಾ?. ಹೂಂ... ಇದನ್ನೆಲ್ಲಾ ಖಂಡಿತವಾಗಿ ನಾವು ಹೇಳ್ತಿರೋದಲ್ಲ. ಎಲ್ಲ ವೀಕ್ಷಕರ ಅಭಿಪ್ರಾಯ. ಇಷ್ಟು ದಿನ ನಿಧಿ-ಕರ್ಣ ಮದುವೆಯಾಗಬೇಕು ಅಂತಿದ್ದೋರು ಈಗ್ಯಾಕೆ ಹೀಗಂತಿದ್ದಾರೆ ಅಂತೀರಾ?, ಅದಕ್ಕೂ ಕಾರಣವಿದೆ ಮುಂದೆ ಓದಿ…

26
ಯಾರು ಯಾರನ್ನ ಮದ್ವೆಯಾದ್ರು?

ಅನೇಕ ಜನರಿಗೆ ಗೊತ್ತಿದೆಯೋ ಇಲ್ಲವೋ. ಕರ್ಣ ಹಿಂದಿ ಭಾಷೆಯಿಂದ ಕನ್ನಡಕ್ಕೆ ರಿಮೇಕ್ ಆಗಿದೆ. ಹಾಗಾಗಿ ಬಹುತೇಕರು ಸೀರಿಯಲ್‌ನಲ್ಲಿ ಮುಂದೇನಾಗಬಹುದು ಎಂಬುದನ್ನ ಮೊದಲೇ ಹೇಳುತ್ತಿದ್ದಾರೆ. ಜೊತೆಗೆ ನಿರ್ದೇಶಕರಿಗೆ ಮನವಿ ಮಾಡುತ್ತಿದ್ದಾರೆ. "ನೀವು ದಯವಿಟ್ಟು ಹಿಂದಿಯಲ್ಲಿ ತೋರಿಸಿರುವಂತೆ ಇಲ್ಲಿಯೂ ಜೋಡಿಯನ್ನ ದೂರ ಮಾಡಬೇಡಿ" ಅಂತಿದ್ದಾರೆ. ಅಷ್ಟಕ್ಕೂ ಹಿಂದಿಯಲ್ಲಿ ಯಾರು ಯಾರನ್ನ ಮದ್ವೆಯಾದ್ರು? ಹಾಗೂ ಜೋಡಿಯಾಗಿದ್ದರು ಎಂದು ನೋಡುವುದಾದರೆ...

36
ಒಪ್ಪಿಕೊಳ್ಳಲು ರೆಡಿಯಿಲ್ಲ

ಕನ್ನಡದಲ್ಲಿ ತೋರಿಸಿರುವಂತೆ ಅಲ್ಲಿಯೂ ಕರ್ಣ ನಿತ್ಯಾಳನ್ನ ಮದ್ವೆಯಾಗ್ತಾನೆ. ನಿಧಿ ಮತ್ತು ಕರ್ಣ ಲವ್‌ ಮಾಡಿರುತ್ತಾರೆ ಅಷ್ಟೇ. ಕ್ರಮೇಣ ನಿತ್ಯಾಗೆ ಕರ್ಣನ ಮೇಲೆ ಲವ್‌ ಅಗುತ್ತದೆ. ಕರ್ಣನಿಗೂ ಪ್ರೇಮಾಂಕುರುವಾಗುತ್ತದೆ. ಆದರೆ ಆ ಜೋಡಿ ಅಲ್ಲಿ ಹಿಟ್ ಆಯ್ತು. ಆದರೆ ಕನ್ನಡದಲ್ಲಿ ಈ ಜೋಡಿಯನ್ನ ಕೆಲವರು ಒಪ್ಪಿಕೊಳ್ಳಲು ರೆಡಿಯಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕರ್ಣ-ನಿತ್ಯಾ ಮದ್ವೆಯಾದ್ರೂ ನಿರ್ದೇಶಕರಿಗೆ ರಿಕ್ವೆಸ್ಟ್ ಮಾಡೋದು ತಪ್ಪಿಲ್ಲ.

46
ನಿತ್ಯಾ ಮೇಲೆ ಲವ್ ಆಗುತ್ತೆ

ಈಗಾಗಲೇ ಕೆಲವರು ಕೋಪ ಇರುವ ಕಡೆ ಪ್ರೀತಿ ಇರುತ್ತದೆ. ನಿತ್ಯಾ ಕೋಪ ಮಾಡಿಕೊಂಡರೂ ಕ್ರಮೇಣ ಕರ್ಣನಿಗೆ ನಿತ್ಯಾ ಮೇಲೆ ಲವ್ ಆಗುತ್ತದೆ ಅಂತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಿಧಿ-ಕರ್ಣ ಜೋಡಿಯಾಗಬೇಕೆನ್ನುವವರು ಕನ್ನಡದಲ್ಲಿ ಹಾಗೆ ಮಾಡಿದರೆ ನಾವು ಧಾರಾವಾಹಿಯನ್ನೇ ನೋಡುವುದಿಲ್ಲ ಎನ್ನುತ್ತಿದ್ದಾರೆ.

56
ನಿತ್ಯಾ ಮುಖ್ಯ ಪಾತ್ರನಾ?

ಸದ್ಯ ನಿಧಿ ಕರ್ಣನ ಮನೆಯಲ್ಲಿರುವುದರಿಂದ ಕರ್ಣ-ನಿಧಿಯನ್ನ ನಿರ್ದೇಶಕರು ದೂರ ಮಾಡುವುದಿಲ್ಲ ಎಂದೂ ಗೆಸ್‌ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕರ್ಣ-ನಿತ್ಯಾ ಮದ್ವೆಯಾದರೂ ಅನೇಕ ಮಂದಿ ನಿಧಿ ಮತ್ತು ಕರ್ಣನನ್ನೇ ಜೋಡಿಯಾಗಲು ನೋಡುತ್ತಿದ್ದಾರೆ. ಮತ್ತೆ ಕೆಲವರು ನೀವು ನಿತ್ಯಾ ಪಾತ್ರವನ್ನ ಹೆಚ್ಚು ತೋರಿಸಿ. ಇಲ್ಲಿ ನಿತ್ಯಾ ಮುಖ್ಯ ಪಾತ್ರ ಎನ್ನುತ್ತಿದ್ದಾರೆ.

66
ನಿಧಿ-ಕರ್ಣನನ್ನು ಒಂದು ಮಾಡ್ತಾರಾ?

ಸದ್ಯ ಧಾರಾವಾಹಿಯಲ್ಲಿ ಕರ್ಣ ನಿಧಿಯ ಬಳಿ ಎಲ್ಲಾ ಸತ್ಯ ಹೇಳಿಕೊಳ್ಳಬೇಕೆಂದು ಆಲೋಚಿಸುತ್ತಿದ್ದಾನೆ. ಜೊತೆಗೆ ನಿಧಿ ಅಥವಾ ನಿತ್ಯಾ ಇಬ್ಬರಲ್ಲಿ ಒಬ್ಬರಿಗೆ ಸತ್ಯ ಗೊತ್ತಾದರೂ ಧಾರಾವಾಹಿ ತಿರುವು ಪಡೆದುಕೊಳ್ಳುವುದರಲ್ಲಿ ಸಂಶಯವೇನಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಿರ್ದೇಶಕರು ನಿಧಿ-ಕರ್ಣನನ್ನು ಒಂದು ಮಾಡ್ತಾರಾ? ಅಥವಾ ನಿತ್ಯಾಳ ಜೊತೆ ಒಂದು ಮಾಡ್ತಾರಾ? ಕಾದು ನೋಡಬೇಕಿದೆ.

Read more Photos on
click me!

Recommended Stories