Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​

Published : Dec 28, 2025, 08:12 PM IST

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಬಂದಿದ್ದ ಸೂರಜ್​ ಸಿಂಗ್​ ಎಲಿಮಿನೇಟ್​ ಆಗಿದ್ದಾರೆ. 'ಬಿಗ್​ಬಾಸ್​ ಕ್ರಷ್' ಎಂದೇ ಖ್ಯಾತರಾಗಿದ್ದ ಅವರ ಅನಿರೀಕ್ಷಿತ ನಿರ್ಗಮನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಮನೆಯಿಂದ ಹೊರಬಂದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.

PREV
15
ಸೂರಜ್​ ಸಿಂಗ್​ ಔಟ್​

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​​ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ಸೂರಜ್​ ಸಿಂಗ್​ (Bigg Boss Suraj Singh) ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಬಿಗ್​ಬಾಸ್​ ಕ್ರಷ್​ ಎಂದೇ ಖ್ಯಾತಿ ಪಡೆದಿದ್ದ ಅದರಲ್ಲಿಯೂ ರಾಷಿಕಾ ಅವರ ಆತ್ಮೀಯ ಸ್ನೇಹಿತರಾಗಿದ್ದ ಅವರು ಇದೀಗ ಹೊರಬಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.

25
ಎಲಿಮಿನೇಷನ್‌ ರೌಂಡ್‌

ಧನುಷ್‌, ಧ್ರುವಂತ್‌, ಸೂರಜ್‌, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್‌ ರೌಂಡ್‌ನಲ್ಲಿದ್ದರು. ಮೊದಲ ಸುತ್ತಿನಲ್ಲಿ ಧ್ರುವಂತ್‌, ಸೂರಜ್‌, ರಾಷಿಕಾ, ಸ್ಪಂದನಾರನ್ನು ಎಲಿಮಿನೇಷನ್‌ ರೌಂಡ್​ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಸೂರಜ್‌ ಮನೆಯಿಂದ ಹೊರ ಬಂದಿದ್ದಾರೆ.

35
ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​

ಎಲಿಮಿನೇಟ್​ ಆಗಿ ಹೊರಕ್ಕೆ ಬರುತ್ತಿದ್ದಂತೆಯೇ ಅವರು ಮೊದಲು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಹಾಕುವ ಮೂಲಕ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

45
ಸೂರಜ್​ ಸಿಂಗ್​ ಮಾತು

ಒಂದು long journeyಯಲ್ಲಿ ಜೊತೆ ನಿಂತಿದ್ದೀರ..support ಮಾಡಿದ್ದೀರ. ಪ್ರೀತಿ ಕೊಟ್ಟಿದ್ದೀರ.. ನಿಮ್ಮ ಮನೆ ಮನಸ್ಸಲ್ಲಿ ಜಾಗ ಕೊಟ್ಟಿದ್ದೀರ. ದೊಡ್ಡ ಮನೆಯಿಂದ ಶುರುವಾದ ನಂಟು ಮುಂದಿನ ದಾರಿಯಲ್ಲಿ ಇನ್ನಷ್ಟು ಬಿಗಿಯಾಗೆ ಇರುತ್ತೆ ಅನ್ನೋದೇ ನಂಬಿಕೆ. ನಾಮಿನೇಟ್ ಅದಾಗೆಲ್ಲ ಮನ: ಪೂರ್ತಿಯಾಗಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಈ ಕನ್ನಡಿಗನ ಧನ್ಯವಾದಗಳು ಎಂದು ಸೂರಜ್​ ಸಿಂಗ್​ ಬರೆದುಕೊಂಡಿದ್ದಾರೆ.

55
ಸೂರಜ್​ ಕುರಿತು

ಇನ್ನು ಸೂರಜ್​ ಸಿಂಗ್​ ಕುರಿತು ಹೇಳುವುದಾದರೆ, ಇವರು ಮೈಸೂರಿನವರು. ಅವರು ಕೆನಡಾದಲ್ಲಿ ಒಂದಿಷ್ಟು ವರ್ಷ ಉದ್ಯೋಗ ಮಾಡಿದ್ದರು. ಆಮೇಲೆ ಭಾರತಕ್ಕೆ ಬಂದು ತಾಯಿ ಜೊತೆಗೆ ಇದ್ದುಕೊಂಡು, ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಫಿಟ್‌ನೆಸ್‌, ಫ್ಯಾಷನ್‌ ಕಡೆಗೆ ಗಮನ ಕೊಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories