ಬಿಗ್ ಬಾಸ್ ಕನ್ನಡ 10 ಶೋನಲ್ಲಿ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವಿನಯ್ ಗೌಡ ಮಧ್ಯೆ ಸಾಕಷ್ಟು ಜಗಳಗಳು ಆಗಿದ್ದವು. ದೊಡ್ಮನೆಯಿಂದ ಹೊರಗಡೆ ಬಂದ್ಮೇಲೆ ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಿದ್ದರೂ ಕೂಡ ಸಂಗೀತಾ, ಕಾರ್ತಿಕ್ ಮಾತನಾಡಿರೋದನ್ನು ಯಾರೂ ನೋಡಿರಲಿಲ್ಲ, ಒಂದೇ ಕಡೆ ಕಾಣಿಸಿರಲಿಲ್ಲ.
ವರ್ತೂರು ಸಂತೋಷ್ ಮನೆಯ ಕಾರ್ಯಕ್ರಮಕ್ಕೆ ಸಂಗೀತಾ ಶೃಂಗೇರಿ ಹೋಗಿದ್ದರು. ಸಂಗೀತಾ ಮನೆಗೆ ಡ್ರೋನ್ ಪ್ರತಾಪ್, ನೀತು ವನಜಾಕ್ಷಿ ಆಗಮಿಸಿದ್ದರು. ಅದನ್ನು ಬಿಟ್ಟರೆ ಸಂಗೀತಾ ಮಾತ್ರ ಎಲ್ಲಿಯೂ ಹಾಜರಿ ಹಾಕಿರಲಿಲ್ಲ. ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಜಗಳ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಈಗ ಇವರಿಬ್ಬರು ಒಂದೇ ವೇದಿಕೆಯಲ್ಲಿರೋದು ಎಲ್ಲರಿಗೂ ಅಚ್ಚರಿ ತಂದಿದೆ.
27
ಸಂಗೀತಾ ಹಾಡಿಗೆ ಶುಭಾಶಯ ತಿಳಿಸಿದ್ರು
ಈಗ ಸಂಗೀತಾ ಶೃಂಗೇರಿ ಅವರ ಆಲ್ಬಮ್ ಸಾಂಗ್ ಲಾಂಚ್ ಆಗಿದೆ. ಅಲ್ಲಿ ನಮ್ರತಾ ಗೌಡ, ಕಾರ್ತಿಕ್ ಮಹೇಶ್ ಕೂಡ ಆಗಮಿಸಿದ್ದಾರೆ. ಕಾರ್ತಿಕ್ ಅವರು ಸಂಗೀತಾಗೆ ವಿಶ್ ಮಾಡಿದ್ದಾರೆ, ಹಾಡಿನಲ್ಲಿ ಚೆನ್ನಾಗಿ ಕಾಣಿಸ್ತಿದ್ದಾರೆ ಎಂದು ಕೂಡ ಹೇಳಿದ್ದರು.
37
ಜಾಸ್ತಿ ಫೋನ್ ಬಳಕೆ ಮಾಡಲ್ಲ
ಮಾಧ್ಯಮವೊಂದರ ಜೊತೆ ಕಾರ್ತಿಕ್ ಬಗ್ಗೆ ಮಾತನಾಡಿದ ಸಂಗೀತಾ ಅವರು ನನಗೆ ಚಿಕ್ಕ ವಯಸ್ಸಿಂದನೂ ಜಾಸ್ತಿ ಫೋನ್ ಟಚ್ ಅಲ್ಲಿ ಇರೋದಿಲ್ಲ, ಆದರೆ ನನಗೆ ಎದುರುಗಡೆ ಸಿಕ್ಕಿದ್ರೆ ನಾನು ಇಡೀ ದಿನ ಮಾತಾಡ್ತೀನಿ. ನನಗೆ ಆಗಿನಿಂದ ಹೀಗೆ ಇರೋದು, ನಾನು ಓಲ್ಡ್ ಸ್ಕೂಲ್ ಅಂತ ಹೇಳಬಹುದು. ಈ ಮೆಸೇಜ್ ಮಾಡೋದು, ಕಾಲ್ ಮಾಡೋದು ಕಡಿಮೆ. ಬೇರೆಯವರು ಫೋನ್ ಮಾಡಿದ್ರೆ ಮಾತಾಡುವೆ ಎಂದಿದ್ದಾರೆ.
ನಮ್ರತಾ ಗೌಡ ಆಗಿರಬಹುದು, ನಾವು ಒಂದೊಂದು ಸಲ ಮಾತಾಡಿದೀವಿ. ಕಾರ್ತಿಕ್ ಜೊತೆ ಕೂಡ ತುಂಬ ಸಲ ಮಾತಾಡಿದೀವಿ. ಕಾರ್ತಿಕ್ ನನಗೆ ಫೋನ್ ಮಾಡಿದರೂ ಕೂಡ ನಾನು ಅವರಿಗೆ ಫೋನ್ ಮಾಡಿರಲಿಲ್ಲ ಎಂದು ಸಂಗೀತಾ ಹೇಳಿದ್ದಾರೆ.
57
ಮಿಸ್ಟೇಕ್ ಕಾಲ್ ಮಾಡಿದ್ರಾ?
ಈಗ ನಾನು ಅವರಿಗೆ ಫಸ್ಟ್ ಟೈಮ್ ಕಾಲ್ ಮಾಡಿದೆ. ಅದಕ್ಕೆ ಅವರು ಫೋನ್ ಎತ್ತಿದ್ ತಕ್ಷಣ, ಬೈ ಮಿಸ್ಟೇಕ್ ಕಾಲ್ ಮಾಡ್ಬಿಟ್ಟಿದೀರಾ ಅಂತ ಕೇಳಿದ್ರು. ನಾನು ಆಗ ನನ್ನ ಜೊತೆ ಮಾತಾಡ್ತಿದ್ದೀರಾ ಅಂತ ಕೇಳಿದೆ. ಅದೇ ನಿಮಗೆ ನಾನು ಕಾಲ್ ಮಾಡಿದ್ದು ಎಂದು ಕೇಳಿದೆ. ನಾಳೆ ನನ್ನ ಸಾಂಗ್ ರಿಲೀಸ್ ಆಗ್ತಿದೆ ಅಂತ ಹೇಳಿದೆ, ಆಗ ಅವರು ಹೌದಾ, ನಾನು ಬರ್ತೀನಿ ಅಂತ ಹೇಳಿದ್ರು ಎಂದಿದ್ದಾರೆ.
67
ಕಾರ್ತಿಕ್ ಕರೆದಾಗ ಹೋಗೋಕೆ ಆಗಲಿಲ್ಲ
ಕಾರ್ತಿಕ್ ತಂಗಿ ಮಗನ ನಾಮಕರಣಕ್ಕೆ ಆಹ್ವಾನ ಕೊಟ್ಟಿದ್ದರು. ಆಗ ನಾನು ಮೈಸೂರಿಗೆ ಹೋಗಿದ್ದೆ. ಹೋಗುವ ಮನಸ್ಸಿದ್ದರೂ ಕೂಡ ಹೋಗೋಕೆ ಆಗಿರಲಿಲ್ಲ. ನಾನು ಆಗ ಹೋಗಲಿಲ್ಲ ಅಂದ್ರೂ ಕೂಡ ಈ ಬಾರಿ ಬಂದಿದ್ದಾರೆ. ಇದು ಖುಷಿಯ ವಿಷಯ. ಕಲಾವಿದರು ಈ ರೀತಿ ಬೆಂಬಲ ಕೊಡೋದು ಖುಷಿ ಆಗುತ್ತದೆ. ನಾನು ಕರೆದಾಗ ಅವರು ಬಂದಿಲ್ಲ ನಾನು ಏನಕ್ಕೆ ಹೋಗ್ಬೇಕು ಅನ್ನೋದೆಲ್ಲ ಇರುತ್ತೆ. ಆದರೆ ಕಾರ್ತಿಕ್ ಆ ರೀತಿ ಅಂದುಕೊಳ್ಳದೆ ಬಂದಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ.
77
ಕೆಲವರ ಹತ್ರ ಮಾತಾಡಲ್ಲ
ಬಿಗ್ ಬಾಸ್ ಶೋನಲ್ಲಿ ಏನಾಗಿತ್ತೋ ಅಷ್ಟೇ, ಎಲ್ಲರೂ ಟ್ರೋಫಿ ಗೆಲ್ಲೋಕೆ ಹೋರಾಡುತ್ತಿರುತ್ತಾರೆ. ಹೊರಗಡೆ ಬಂದ್ಮೇಲೆ ಕಾರ್ತಿಕ್ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಆದರೆ ಕೆಲವರು ಸಂದರ್ಶನದಲ್ಲಿ ನನ್ನ ಬಗ್ಗೆ ಮಾತನಾಡಿರೋದು ಬೇಸರ ತಂದಿದೆ. ಅವರು ಕ್ಷಮೆ ಕೇಳೊವರೆಗೂ ನನಗೆ ಮಾತಾಡೋಕೆ ಇಷ್ಟವಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.