Bigg Bossಗೆ ನನ್ನಮ್ಮ ಎಂಟ್ರಿ ಕೊಟ್ಟಾಗ್ಲೇ ಗೆಲ್ಲುವ ಸ್ಪರ್ಧಿ ಬಗ್ಗೆ ರಿವೀಲ್​ ಮಾಡಿಬಿಟ್ಟಿದ್ರು ಎಂದ ಸೂರಜ್​ ಸಿಂಗ್​!

Published : Dec 30, 2025, 04:55 PM IST

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಸೂರಜ್​ ಸಿಂಗ್​, ತಮ್ಮ ಆಸೆಯಂತೆ ರಾಶಿಕಾ ಅಥವಾ ಅಶ್ವಿನಿ ಗೆಲ್ಲುವುದಿಲ್ಲ ಎಂದಿದ್ದಾರೆ. ಬದಲಾಗಿ, ಕುಟುಂಬದವರು ಮನೆಗೆ ಬಂದಾಗಲೇ ಈ ಸೀಸನ್​ನ ವಿಜೇತ  ಯಾರು ಎಂಬುದು ತಮಗೆ ಖಚಿತವಾಗಿತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

PREV
15
ಬಿಗ್​ಬಾಸ್​ ಕ್ರಷ್​

ಬಿಗ್​ಬಾಸ್​​ 12 (Bigg Boss 12)ರ ಸ್ಪರ್ಧಿ, ಬಿಗ್​ಬಾಸ್​ ಕ್ರಷ್​ ಎಂದೇ ಫೇಮಸ್​ ಆಗಿದ್ದ ಸೂರಜ್​ ಸಿಂಗ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದು, ಇದೀಗ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ.

25
ರಾಶಿಕಾ ಜೊತೆ ಬಾಂಡಿಂಗ್​

ರಾಶಿಕಾ ಶೆಟ್ಟಿ ಜೊತೆ ತಮ್ಮ ಬಾಂಡಿಂಗ್​ ಬಗ್ಗೆಯೂ ಇದಾಗಲೇ ಸೂರಜ್​ ಹೇಳಿದ್ದಾರೆ. ತಮ್ಮಿಬ್ಬರನ್ನು ಕೇವಲ ಸ್ನೇಹ ಮಾತ್ರ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

35
ಇವರು ಗೆಲ್ಲಬೇಕು

ಇದೇ ವೇಳೆ, ರಾಶಿಕಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಅವರು ಈ ಬಾರಿಗೆ ಬಿಗ್​ಬಾಸ್​ ವಿನ್​ ಆಗಬೇಕು ಎನ್ನುವುದು ತಮ್ಮ ಆಸೆ ಎಂದಿರುವ ಸೂರಜ್​ ಸಿಂಗ್​ (Bigg Boss Suraj Singh) ಅವರು ಆದರೆ ವಿನ್​ ಆಗುವವರು ಮಾತ್ರ ಗಿಲ್ಲಿ ನಟ (Bigg Boss winner Gilli Nata) ಎಂದು ಹೇಳಿದ್ದಾರೆ.

45
ಅಮ್ಮ ಬಂದಾಗ

ಕಳೆದ ವಾರ ಕುಟುಂಬದವರೆಲ್ಲಾ ಮನೆಗೆ ಬಂದಾಗಲೇ ನನಗೆ ಬಿಗ್​ಬಾಸ್​​ ವಿನ್ನರ್​ ಯಾರು ಎನ್ನುವುದು ತಿಳಿದು ಹೋಯ್ತು. ನನ್ನ ಅಮ್ಮ ಬಂದಾಗಲೂ ನನ್ನನ್ನು ಸಪೋರ್ಟ್​ ಮಾಡುವುದನ್ನು ಬಿಟ್ಟು ಗಿಲ್ಲಿ ಗಿಲ್ಲಿ ಎನ್ನುತ್ತಿದ್ದರು. ಆಗಲೇ ಹೊರಗಡೆ ಗಿಲ್ಲಿ ನಟನ ಬಗ್ಗೆ ಕ್ರೇಜ್​ ಎಷ್ಟು ಇದೆ ಎನ್ನುವುದು ತಿಳಿಯಿತು ಎಂದಿದ್ದಾರೆ ಸೂರಜ್​.

55
ಎಲ್ಲಾ ಕುಟುಂಬದವರು

ನನ್ನಮ್ಮ ಮಾತ್ರವಲ್ಲದೇ ಬಹುತೇಕ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಾಗಲೂ ಗಿಲ್ಲಿ ನಟನನ್ನೇ ಮಾತನಾಡಿಸುತ್ತಿದ್ದರು. ಇವೆಲ್ಲಾ ನೋಡಿದ ಕಾರಣದಿಂದ ಈ ಬಾರಿ ಗೆಲ್ಲುವುದು ಅವರೇ ಎನ್ನುವುದು ಕನ್​ಫರ್ಮ್​ ಆಗಿದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories