2025 ನನ್ನ ಫೇವರಿಟ್ ವರ್ಷ ಎನ್ನುತ್ತಾ ಮದುವೆ ಫೋಟೊ ಹಂಚಿಕೊಂಡ ಗಾಯಕಿ Aishwarya Rangarajan

Published : Dec 30, 2025, 04:31 PM IST

Aishwarya Rangarajan : ಸರಿಗಮಪ ಮೂಲಕ ಜನಪ್ರಿಯತೆ ಪಡೆದು, ಇದೀಗ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಗಾಯಕಿ ಐಶ್ವರ್ಯ ರಂಗರಾಜನ್ ತಮ್ಮ ಮದುವೆ ಕಳೆದು ತಿಂಗಳ ಬಳಿಕ ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
17
ಐಶ್ವರ್ಯ ರಂಗರಾಜನ್

ಸರಿಗಮಪ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಪರಿಚಿತರಾಗಿ, ಇದೀಗ ತಮ್ಮ ಗಾಯನದ ಮೂಲಕ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ಗಾಯಕಿ ಐಶ್ವರ್ಯ ರಂಗರಾಜನ್ ಮದುವೆಯಾಗಿ ತಿಂಗಳ ಬಳಿಕ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27
ಮದುವೆಯ ಫೋಟೋಗಳು

ಕನ್ನಡದಲ್ಲಿ ಕಿಕ್ ನೀಡುವಂತಹ ಹಾಡುಗಳನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಐಶ್ವರ್ಯ ರಂಗರಾಜನ್ ನವಂಬರ್ ತಿಂಗಳಲ್ಲಿ ಬಹುಕಾಲದ ಗೆಳೆಯ, ಬೆಸ್ಟ್ ಫ್ರೆಂಡ್, ಪ್ರೀತಿಸಿದ ಹುಡುಗ ಸಾಯಿ ಸ್ವರೂಪ್ ಜೊತೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

37
2025 ನನ್ನ ಫೇವರಿಟ್ ವರ್ಷ

ಗಾಯಕಿ ಮದುವೆಯ ಮಧುರ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿ, 2025 ನೀನು ನನ್ನ ಫೇವರಿಟ್ ವರ್ಷ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಪ್ತಪದಿ ತುಳಿಯುವ, ತಾಳಿ ಕಟ್ಟುವ ಫೋಟೊಗಳನ್ನು ಕೂಡ ಐಶ್ವರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

47
ಸದ್ದಿಲ್ಲದ ಮದುವೆ ಮಾಡಿಕೊಂಡಿದ್ದ ಗಾಯಕಿ

ಐಶ್ವರ್ಯ ತಮ್ಮ ನಿಶ್ಚಿತಾರ್ಥದ ಕುರಿತಾಗಲಿ ಅಥವಾ ಮದುವೆ ಕುರಿತಾಗಲಿ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಮದುವೆಯಾದ ಬಳಿಕ ನಟಿಯ ಫೋಟೊಗಳು ವೈರಲ್ ಆಗಿದ್ದವು. ಮದುವೆಯಾಗಿ ಕೆಲ ದಿನಗಳ ಬಳಿಕ ಐಶ್ವರ್ಯ ನಾನು ನನ್ನ ಬೆಸ್ಟ್ ಫ್ರೆಂಡ್ ಜೊತೆ ಮದುವೆಯಾದೆ ಎಂದು ಹೇಳಿದ್ದರು.

57
ಮದುವೆಗೂ ಮುನ್ನ ಆಲ್ಬಂ ಹಾಡು ರಿಲೀಸ್

ಮದುವೆಗೆ ಮುನ್ನ ಐಶ್ವರ್ಯ ತಮ್ಮ ಹೊಸ ಆಲ್ಬಂ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದರು. ನಿನಗೆಂದೇ ಎನ್ನುವ ಟೈಟಲ್ ಹೊಂದಿರುವ ಆಲ್ಬಂ ಹಾಡಿನಲ್ಲಿ ಐಶ್ವರ್ಯ ಹಾಗೂ ಸಾಯಿ ಸ್ವರೂಪ್ ಸ್ಕ್ರೀನ್ ಶೇರ್ ಮಾಡಿದ್ದರು. ಇದು ಪ್ರಿ ವೆಡ್ಡಿಂಗ್ ಶೂಟ್ ಕೂಡ ಇದ್ದಂತಿದೆ.

67
ದೇಶ ವಿದೇಶದಲ್ಲೂ ಫೇಮಸ್

ತಮ್ಮ ವಿಭಿನ್ನ ಕಂಠದಿಂದ ಗಮನ ಸೆಳೆಯುವ ಐಶ್ವರ್ಯ ರಂಗರಾಜನ್ ಹಿನ್ನೆಲೆ ಗಾಯಕಿಯಾಗಿ ಹಲವಾರು ಪ್ರಶಸ್ತಿಗಳನ್ನು,ದೇಶ ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ್ದಾರೆ. ಜೊತೆಗೆ ಐಶ್ವರ್ಯ ತಮ್ಮದೇ ಆದ ಆರಾಟು ಆಫೀಶಿಯಲ್ ಎನ್ನುವ ಮ್ಯೂಸಿಕ್ ಬ್ಯಾಂಡ್ ಕೂಡ ಹೊಂದಿದ್ದಾರೆ.

77
ಐಶ್ವರ್ಯ ಹಾಡಿರುವ ಸೂಪರ್ ಹಿಟ್ ಹಾಡುಗಳು

ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ 'ಶೇಕ್ ಇಟ್ ಪುಸ್ಪವತಿ' ಹಾಡನ್ನು ಹಾಡಿದ್ದರು, ಇದು ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಇದಲ್ಲದೇ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ನಮಾಮಿ ನಮಾಮಿ, ಮಳೆಯೇ ಮಳೆಯೇ, ಟ್ರೋಲ್ ಆಗುತ್ತೆ ಸೇರಿ 25ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories