Bigg Boss: ಶಾಲೆಗೆ ಹೋಗಿದ್ದ ಸ್ಪಂದನಾ ರಾತ್ರಿ 10 ಗಂಟೆಯಾದ್ರೂ ಪತ್ತೆಯಿಲ್ಲ! ಆ ಕರಾಳ ದಿನ ನೆನೆದ ಅಪ್ಪ

Published : Dec 26, 2025, 07:14 PM IST

ಬಿಗ್‌ಬಾಸ್ ಮನೆಗೆ ಸ್ಪಂದನಾ ಅವರ ಪಾಲಕರು ಆಗಮಿಸಿದ್ದಾರೆ. ಈ ವೇಳೆ, ಸ್ಪಂದನಾ ಅವರ ತಂದೆ ಮಗಳ ಶಾಲಾ ದಿನಗಳ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದು, ರಾತ್ರಿ 10 ಗಂಟೆಯಾದರೂ ಶಾಲೆಯಿಂದ ಮನೆಗೆ ಬಾರದಿದ್ದ ಕ್ಷಣವನ್ನು ವಿವರಿಸಿದ್ದಾರೆ.

PREV
16
ಮನೆಗೆ ಬಂದ ಸ್ಪಂದನಾ ಪಾಲಕರು

ಬಿಗ್​ಬಾಸ್​​ನಲ್ಲಿ (Bigg Boss) ಇದೀಗ ಸ್ಪರ್ಧಿಗಳ ಮನೆಯವರ ಎಂಟ್ರಿ ಆಗುತ್ತಿದೆ. ಇದೀಗ ಸ್ಪಂದನಾ ಅವರ ಅಪ್ಪ- ಅಮ್ಮನ ಎಂಟ್ರಿ ಆಗಿದೆ.

26
ಶಾಕಿಂಗ್​ ವಿಷ್ಯ

ಈ ಸಂದರ್ಭದಲ್ಲಿ ಸ್ಪಂದನಾ (Bigg Boss Spandana) ಶಾಲಾ ದಿನಗಳ ಬಗ್ಗೆ ಅವರ ಅಪ್ಪ ಶಾಕಿಂಗ್​ ವಿಷ್ಯವೊಂದನ್ನು ರಿವೀಲ್​ ಮಾಡಿದ್ದಾರೆ. ಶಾಲೆಯಿಂದ ಸ್ಪಂದನಾ ರಾತ್ರಿ 10 ಗಂಟೆಯಾದರೂ ಮನೆಗೆ ಬಾರದ ವಿಷ್ಯ ಅದಾಗಿದೆ.

36
ಅಮ್ಮ ಡೆಲಿವರಿಗೆ ಹೋದಾಗ ಘಟನೆ

ಅಷ್ಟಕ್ಕೂ ಆಗಿದ್ದೇನೆಂದರೆ, ಸ್ಪಂದನಾ ಅವರ ಅಮ್ಮ ಎರಡನೆಯ ಡೆಲಿವರಿಗಾಗಿ ಅಮ್ಮನ ಮನೆಗೆ ಹೋದಾಗ ಸ್ಪಂದನಾ ಶಾಲೆಗೆ ಹೋಗಿದ್ದರು. ಆದರೆ ಅಪ್ಪನಿಗೆ ಜೋರಾಗಿ ನಿದ್ದೆ ಬಂದುಬಿಟ್ಟಿದ್ದರಿಂದ ಶಾಲೆಗೆ ಹೋಗುವುದೇ ನೆನಪಿರಲಿಲ್ಲವಂತೆ.

46
ಶಾಲೆಯಲ್ಲಿ ಅಳ್ತಾ ಇದ್ದ ಸ್ಪಂದನಾ

ಅದೇ ಇನ್ನೊಂದೆಡೆ ಅಪ್ಪ ಬಾರದೇ ಸ್ಪಂದನಾ ಶಾಲೆಯಲ್ಲಿಯೇ ಜೋರಾಗಿಯೇ ಅಳುತ್ತಾ ಕುಳಿತಿದ್ದರಂತೆ. ಅದು ಕಾನ್ವೆಂಟ್​ ಆಗಿದ್ದರಿಂದ ಸಿಸ್ಟರ್ಸ್​ ಆಕೆಯ ಬಳಿ ಮನೆಯ ಅಡ್ರೆಸ್​ ಕೇಳಿದಾಗ ಸ್ಪಂದನಾ ಜೋರಾಗಿ ಅಳುತ್ತಾ ಇದ್ದರಂತೆ.

56
ರಾತ್ರಿ 10 ಗಂಟೆ

ಅಪ್ಪನಿಗೆ ಎಚ್ಚರವಾದಾಗ ರಾತ್ರಿ 10 ಗಂಟೆಯಾಗಿದೆ. ಒಳಗಡೆಯಿಂದ ಬಾಗಿಲು ಹಾಕಿ ಮಲಗಿದ್ದ ಅವರಿಗೆ ಮಗಳು ಇನ್ನೂ ಮನೆಗೆ ಬಂದಿಲ್ಲ ಎನ್ನುವುದು ಆ ರಾತ್ರಿಯಲ್ಲಿ ತಿಳಿಯಿತಂತೆ!

66
ಮುಂದೇನಾಯ್ತು?

ಮುಂದೇನಾಯಿತು ಎನ್ನುವುದನ್ನು ಬಿಗ್​ಬಾಸ್​​ ಷೋ ನೋಡಿಯೇ ತಿಳಿಯಬೇಕು. ಅವರ ಅಪ್ಪ ಅಷ್ಟು ವಿಷಯವನ್ನು ಹೇಳಿದ್ದು, ಅದರ ಪ್ರೊಮೋ ಅನ್ನು ಚಾನೆಲ್​ ಶೇರ್​ ಮಾಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories