ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟನಿಗೆ ಎಲ್ಲರೂ ಪ್ರತಿಸ್ಪರ್ಧಿಗಳೇ. ಆಟದ ವಿಚಾರಕ್ಕೋ ಇನ್ಯಾವುದೋ ವಿಚಾರಕ್ಕೋ ಗಿಲ್ಲಿ ಕೂಡ ಅನೇಕರ ಜೊತೆ ಜಗಳ ಆಡಿದ್ದುಂಟು, ವಾದ-ವಿವಾದದಲ್ಲಿ ಭಾಗಿ ಆಗಿದ್ದುಂಟು. ಆದರೆ ಆ ಸ್ಪರ್ಧಿಗಳ ಮನೆಯವರು ಗಿಲ್ಲಿ ಪರವಾಗಿರೋದು ವಿಶೇಷವಾಗಿದೆ.
ಬಿಗ್ ಬಾಸ್ ಮನೆಗೆ ಬಂದ ಕೆಲ ಸ್ಪರ್ಧಿಗಳ ಮನೆಯವರು ಕ್ಯಾಪ್ಟನ್ ಆಗೋದಿಕ್ಕೆ ಗಿಲ್ಲಿಗೆ ಮತ ಹಾಕಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರೂ ಗಿಲ್ಲಿಯೇ ಫೇವರಿಟ್ ಎಂದಿದ್ದಾರೆ. ಈ ಬಗ್ಗೆ ಕೂಡ ಚರ್ಚೆ ಆಗಿದೆ. ರಘು, ಸೂರಜ್, ರಕ್ಷಿತಾ ಶೆಟ್ಟಿ ಅವರು ಲೈಟ್ ಆಫ್ ಆದಬಳಿಕ ಬೆಡ್ ರೂಮ್ ಏರಿಯಾದಲ್ಲಿ ಮಾತನಾಡಿಕೊಂಡಿದ್ದಾರೆ.
25
ಗಿಲ್ಲಿ ಮೇಲೆ ಆರೋಪ
“ಇವತ್ತು ಗಿಲ್ಲಿ ಮಲಗಲ್ಲ. ನಾಲ್ಕು ಮತ ಬಂದಿದೆ. ಖುಷಿಯಾಗಿದಾನೆ, ಅವನಿಗೆ ಹೇಗೆ ಕ್ಯಾಪ್ಟನ್ಸಿ ಸಿಗ್ತು ನೋಡು, ಇವನು ಟಾಸ್ಕ್‌ಆಡಿ ಅಂತೂ ಕ್ಯಾಪ್ಟನ್ ಆಗೋದಿಲ್ಲ, ಹೀಗಾದರೂ ಮಾಡೋಣ ಅಂತ” ಎಂದು ರಘು ಹೇಳಿದ್ದಾರೆ. ಆರಂಭದಲ್ಲಿ ಗಿಲ್ಲಿ ಆಟವನ್ನು ರಘು ಮೆಚ್ಚುತ್ತಿದ್ದರು, ಆಮೇಲೆ ಗಿಲ್ಲಿ ಮೇಲೆ ಆರೋಪ ಮಾಡಿದರು. ರಘು ಅಣ್ಣ ನನ್ನ ಗೆಳೆಯ ಎಂದು ಗಿಲ್ಲಿ ಹೇಳುತ್ತಿದ್ದರೂ ಕೂಡ, ರಘು ಮಾತ್ರ ಸುಮ್ಮನೆ ಇದ್ದರು.
35
ಈ ವಿಷಯ ಚರ್ಚೆ ಆಗತ್ತಾ?
ರಘು, ರಕ್ಷಿತಾ ಶೆಟ್ಟಿ ಮಾತು ಕೇಳಿ ಸೂರಜ್ ಅವರು, ಗಿಲ್ಲಿ ಕ್ಯಾಪ್ಟನ್ ಆಗಲ್ಲ ಅಂತ ಗೊತ್ತಿದ್ದೇ, ಬಿಗ್ ಬಾಸ್ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಬಿಗ್ ಬಾಸ್ ಮೇಲೆ ಸೂರಜ್ ಅವರು ಮಾಡಿರುವ ಆರೋಪ ಆಗಿದೆ. ಈ ಬಗ್ಗೆ ಚರ್ಚೆ ಆಗಲಿದೆಯಾ ಎಂದು ಕಾದು ನೋಡಬೇಕಿದೆ.
ಧನುಷ್ ಗೌಡ ತಾಯಿ, ರಕ್ಷಿತಾ ಶೆಟ್ಟಿ ತಾಯಿ, ಧ್ರುವಂತ್ ಸಹೋದರ, ಅಶ್ವಿನಿ ಗೌಡ ತಾಯಿ ಕೂಡ ಗಿಲ್ಲಿ ಅವರೇ ಕ್ಯಾಪ್ಟನ್ ಆಗಬೇಕು ಎಂದು ಹೇಳಿದ್ದಾರೆ. ಎಲ್ಲರೂ ಗಿಲ್ಲಿಯ ಆಟವನ್ನು ಹೊಗಳಿದ್ದಾರೆ. ಅಶ್ವಿನಿ ಗೌಡ, ಧ್ರುವಂತ್ ಜೊತೆ ಗಿಲ್ಲಿ ಸಾಕಷ್ಟು ಬಾರಿ ಜಗಳ ಆಡಿದ್ದರು. ಆದರೂ ಕೂಡ ಆ ಸ್ಪರ್ಧಿಗಳ ಮನೆಯವರೆಲ್ಲರೂ ಕೂಡ ಗಿಲ್ಲಿಗೆ ಬೆಂಬಲ ನೀಡಿದ್ದಾರೆ.
55
ಗಿಲ್ಲಿ ನಟ ಕ್ಯಾಪ್ಟನ್ ಆಗಬೇಕು, ಯಾಕೆ?
ಗಿಲ್ಲಿ ಮನೆ ಕೆಲಸ ಮಾಡೋದಿಲ್ಲ, ನಿಯಮ ಪಾಲಿಸೋದಿಲ್ಲ. ಗಿಲ್ಲಿ ನಟ ಮನೆ ಕೆಲಸ ಮಾಡದಿರೋದು, ಅವರ ವಸ್ತುಗಳನ್ನು ನೀಟ್ ಆಗಿ ಇಟ್ಟುಕೊಳ್ಳೋದಿಲ್ಲ ಎಂಬ ದೂರಿದೆ. ಗಿಲ್ಲಿ ನಟ ಅವರೇ ಕ್ಯಾಪ್ಟನ್ ಆದರೆ ಅವರು ಹೇಗೆಲ್ಲ ಸ್ಪರ್ಧಿಗಳ ಬಳಿ ಕೆಲಸ ಮಾಡಿಸುತ್ತಾರೆ? ಹೇಗೆ ಮನೆ ನಿಭಾಯಿಸ್ತಾರೆ ಎನ್ನುವ ಕುತೂಹಲ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.