Karna Serialನಿಂದ ದೂರವಾದ ನಿತ್ಯಾ: ನಟಿ ನಮ್ರತಾ ಗೌಡ ಬಗ್ಗೆ Bigg Boss ಸ್ನೇಹಿತ್​ ಏನ್​ ಹೇಳಿದ್ರು

Published : Jun 08, 2026, 10:39 PM IST

ಬಿಗ್ ಬಾಸ್ ಸೀಸನ್ 10ರ ಪ್ರಣಯ ಪಕ್ಷಿಗಳೆಂದು ಖ್ಯಾತರಾಗಿದ್ದ ನಮ್ರತಾ ಗೌಡ ಮತ್ತು ಸ್ನೇಹಿತ್ ಸಂಬಂಧದ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸ್ನೇಹಿತ್ ತಂದೆಯ ಒಂದು ಹೇಳಿಕೆಯಿಂದ ನಮ್ರತಾ ಕೆರಳಿ ಕೆಂಡವಾಗಿದ್ದು, ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.  ಈ ವಿಡಿಯೋ ಈಗ ವೈರಲ್​ ಆಗುತ್ತಿದೆ.

PREV
16
ಪ್ರಣಯ ಪಕ್ಷಿಗಳು

ಪ್ರತಿಬಾರಿ ಬಿಗ್​ಬಾಸ್​ ಮನೆಯಲ್ಲಿ ಒಂದು ಅಥವಾ ಎರಡು ಜೋಡಿಗಳು ಪ್ರಣಯ ಪಕ್ಷಿಗಳಂತೆ ಫೇಮಸ್​ ಆಗಿರುತ್ತಾರೆ. ಇವೆಲ್ಲಾ ಸ್ಕ್ರಿಪ್ಟೆಡ್​ ಎಂದು ಹೇಳುತ್ತಾರೆಯಾದರೂ ಕೆಲವೊಮ್ಮೆ ಈ ಜೋಡಿಗಳ ಲವ್​ ಮ್ಯಾಟರ್​ ಒಂದು ಹಂತವನ್ನು ಮೀರಿ ಹೋಗುವುದು ಇದೆ. ಹಿಂದಿಯ ಬಿಗ್​ಬಾಸ್​ನಲ್ಲಿ ಮಂಚದವರೆಗೂ ವಿಷ್ಯ ಹೋಗಿದ್ದು ಇದೆ. ಆದರೆ ಅದೃಷ್ಟ ಎಂದರೆ, ಕನ್ನಡದಲ್ಲಿ ಸದ್ಯ ಈ ಮಟ್ಟಕ್ಕೆ ಬಿಗ್​ಬಾಸ್​ ಸದ್ಯ ಅಂತೂ ಹೋಗಿಲ್ಲ.

26
ನಮ್ರತಾ ಗೌಡ ಮತ್ತು ಸ್ನೇಹಿತ್​

ಹೀಗೆಯೇ ಬಿಗ್​ಬಾಸ್​ ಮನೆಯ ಪ್ರಣಯ ಪಕ್ಷಿಗಳೆಂದೇ ಹೆಸರಾದವರು ನಮ್ರತಾ ಗೌಡ ಮತ್ತು ಸ್ನೇಹಿತ್​ (Namratha Gowda and Snehit). ಸದ್ಯ ಕರ್ಣ ಸೀರಿಯಲ್​ (Karna Serial)ನಲ್ಲಿ ನಮ್ರತಾ ಗೌಡ ಅವರು ನಿತ್ಯಾ ಪಾತ್ರ ಮಾಡುತ್ತಿದ್ದಾರೆ. ಕೆಟ್ಟವಳೆಂದು ಅಂದುಕೊಂಡಿದ್ದ ನಿತ್ಯಾ ಒಳ್ಳೆಯವಳಾಗಿ ಜನರಿಂದ ಹೊಗಳಿಸಿಕೊಳ್ಳುವಾಗಲೇ ಆ ಪಾತ್ರ ಸದ್ಯ ದೂರವಾಗಿದೆ. ಕರ್ಣ ಮತ್ತು ನಿಧಿಯ ಮದುವೆಯಾಗುತ್ತಲೇ ನಿತ್ಯಾ ಮನೆ ಬಿಟ್ಟು ಹೋಗಿದ್ದಾಳೆ. ಅಲ್ಲಿಗೆ ನಮ್ರತಾ ಗೌಡ ಪಾತ್ರ ಸದ್ಯದ ಮಟ್ಟಿಗೆ ದೂರವಾಗಿದ್ದು, ಮುಂದೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ.

36
ಕ್ಯೂಟ್​ ಬಾಂಡಿಂಗ್​

ತಮ್ಮ ನೆಚ್ಚಿನ ನಟಿ ಸದ್ಯ ಕಾಣಿಸಿಕೊಳ್ಳಲ್ವಲ್ಲಾ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿರುವಾಗಲೇ, ಬಿಗ್​ಬಾಸ್​ ಸೀಸನ್​ 10ರ ಜೋಡಿಹಕ್ಕಿಗಳೆಂದೇ ಫೇಮಸ್​ ಆಗಿದ್ದ ನಮ್ರತಾ ಗೌಡ ಮತ್ತು ಸ್ನೇಹಿತ್​ ಅವರ ಕುರಿತಾದ ವಿಡಿಯೋ ಒಂದು ಪುನಃ ವೈರಲ್​ ಆಗುತ್ತಿದೆ. ಬಿಗ್​ಬಾಸ್​ ಸೀಸನ್​ 10ರಲ್ಲಿ. ಈ ಸೀಸನ್​ನಲ್ಲಿ ಇವರಿಬ್ಬರ ಬಾಂಡಿಂಗ್​ ಚೆನ್ನಾಗಿತ್ತು. ಒಂದು ಹಂತದಲ್ಲಿ, ಸ್ನೇಹಿತ್ ಅವರು ನಮ್ರತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರೂ, ನಮ್ರತಾ ಗೌಡ (Namratha Gowda ) ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಮನೆಯೊಳಗೆ ನಿಜವಾದ ಪ್ರೀತಿ ಹುಟ್ಟುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಸ್ನೇಹಿತ್ ಮತ್ತು ನಮತ್ರಾ ಸ್ನೇಹವನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದರು.

46
ಗುಸುಗುಸು ಏನು?

ಅದರಂತೆ ಹಲವರು ಇವರಿಬ್ಬರಿಗೆ ಏನೋ ಇದೆ ಎಂದೇ ಹೇಳುತ್ತಿದ್ದರು. ಇಂದಿಗೂ ಕೆಲವರು ಆ ವಿಷಯವನ್ನು ಮಾತನಾಡುವುದು ಇದೆ. ಆದರೆ, ಯುಟ್ಯೂಬ್​ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ನೇಹಿತ್​ ಇದರ ಬಗ್ಗೆ ಮಾತನಾಡಿದ್ದು, ಪುನಃ ವೈರಲ್​ ಆಗುತ್ತಿದೆ. ಅವರ ಪಾಡಿಗೆ ಅವರು ಖುಷಿಯಾಗಿದ್ದಾರೆ, ನನ್ನ ಪಾಡಿಗೆ ನಾನು ಖುಷಿಯಾಗಿದ್ದೇನೆ. ಈಗ ಡಿಸ್​ಕಷನ್​ ಮಾಡುವವರೂ ನಿಲ್ಲಿಸಿದ್ದಾರೆ. ನೀವ್ಯಾಕೆ ಅದನ್ನೇ ಹೇಳುತ್ತೀರೋ ಗೊತ್ತಿಲ್ಲ ಎಂದು ಸ್ವಲ್ಪ ಬೇಸರದಿಂದಲೇ ನುಡಿದಿದ್ದರು ಸ್ನೇಹಿತ್​

56
ನಮ್ರತಾ ಗೌಡ ಬಗ್ಗೆ ಸ್ನೇಹಿತ್​

ಇತ್ತೀಚಿಗೆ ನಮ್ರತಾ ಅವರನ್ನು ಭೇಟಿಯಾಗಿಯೂ ಇಲ್ಲ ಎಂದಿದ್ದಾರೆ ಸ್ನೇಹಿತ್​. ಅದೊಮ್ಮೆ, ನಮ್ರತಾ ಅಂದ್ರೆ ಇಷ್ಟ ಎನ್ನುತ್ತಿದ್ದ ಸ್ನೇಹಿತ್‌ನ ನೋಡಿ ನಮ್ರತಾ ನಮ್ಮ ಸೊಸೆ ಎಂದು ಸ್ನೇಹಿತ್​ ತಂದೆ ಹೇಳಿಕೆ ಕೊಟ್ಟಿದ್ದು ನಮ್ರತಾ ಅವರ ಕೋಪಕ್ಕೂ ಗುರಿಯಾಗಿತ್ತು. 'ಸ್ನೇಹಿತ್ ಅವರ ತಂದೆ ನೀಡಿರುವ ಹೇಳಿಕೆಯಿಂದ ನನ್ನ ಅಪ್ಪ-ಅಮ್ಮ ಬೇಸರ ಮಾಡಿಕೊಂಡಿದ್ದಾರೆ. ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಗೊತ್ತಿರಲಿಲ್ಲ, ಹೊರಗೆ ಬಂದ ಮೇಲೆ ಶಾಕ್ ಆಯ್ತು. ಒಂದು ಹೆಣ್ಣು ಹುಡುಗಿ ಜೀವನದ ಬಗ್ಗೆ ಅವಳ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೀರಾ ಅದರಲ್ಲಿ ನಿಮ್ಮ ಮಗನ ಭವಿಷ್ಯವೂ ಇದೆ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದ್ದರು.

66
ಮದುವೆ ಬಗ್ಗೆ ನಮ್ರತಾ ಗರಂ

ನನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಹುಡುಗಿ ಮನೆಯಲ್ಲಿ ಮಾತನಾಡಿ ಕನ್ಫರ್ಮ್ ಮಾಡಿದ್ರೆ ಅಥವಾ ಹುಡುಗಿ ಓಕೆ ಅಂತ ಹೇಳಿದರೆ ಮಾತನಾಡಿ ಪರ್ವಾಗಿಲ್ಲ ಆದರೆ ಯಾರನ್ನು ಸಂಪರ್ಕ ಇಲ್ಲ ಮಾಡದೇ ಹೇಳಿಕೆ ನೀಡುವುದು ತಪ್ಪು. ಕೆಲವರು ನನ್ನ ತಂದೆ ತಾಯಿಗೆ ಕರೆ ಮಾಡಿ ಮದುವೆಗೆ ಒಪ್ಪಿಕೊಂಡಿದ್ದೀರಾ, ಮದುವೆ ಕನ್‌ಫರ್ಮ್ ಆಗಿದ್ಯಾ ಅಂತ ಕೇಳಿದ್ದಾರೆ. ಅವರ ಹೇಳಿಕೆ ಬೇಕಿರಲಿಲ್ಲ. ದೊಡ್ಡವರಾಗಿ ಕುಳಿತು ಮಾತನಾಡಿ ಆನಂತರ ಹೇಳಿಕೆ ಕೊಟ್ಟರೆ ಚೆನ್ನಾಗಿರುತ್ತೆ' ಎಂದು ನಮ್ರತಾ ಗೌಡ ಉತ್ತರ ಕೊಟ್ಟಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories