ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ತಮ್ಮ ನೆಚ್ಚಿನ 'ಮಾಲಾಶ್ರೀ' ಎಂಬ ಹಳ್ಳಿಕಾರ್ ಹಸುವಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಹಸುವಿಗೆ ವಿಶೇಷ ಪೂಜೆ ಸಲ್ಲಿಸಿ, ತರಹೇವಾರಿ ತಿನಿಸುಗಳನ್ನು ಉಣಬಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಖ್ಯಾತಿಯ ವರ್ತೂರು ಸಂತೋಷ್ ಅವರ ಹಳ್ಳಿಕಾರ್ ಹಸುಗಳ ಮೇಲಿನ ಪ್ರೀತಿ ಜಗಜ್ಜಾಹೀರು. ಇದೀಗ ತಮ್ಮ ಮನೆಯ ಹೆಣ್ಣು ಮಗಳಿಗೆ ಮಾಡುವಂತೆ, ತಮ್ಮ ನೆಚ್ಚಿನ ‘ಮಾಲಾಶ್ರೀ’ ಹೆಸರಿನ ಹಳ್ಳಿಕಾರ್ ಹಸುವಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡುವ ಮೂಲಕ ತಮ್ಮ ಅಪಾರ ಪ್ರಾಣಿಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
26
ಹಳ್ಳಿಕಾರ್ ತಳಿಯ ಹೆಮ್ಮೆಯ ಸಂರಕ್ಷಕನಾಗಿ ಗುರುತಿಸಿಕೊಂಡಿರುವ ಸಂತೋಷ್, ಗರ್ಭಿಣಿ ಹಸುವಿನ ಕೊಂಬುಗಳಿಗೆ ಸುಂದರವಾದ ಹೂವಿನ ದಂಡೆಗಳನ್ನು ಕಟ್ಟಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಹಳ್ಳಿಯ ಸಾಂಪ್ರದಾಯಿಕ ಶೈಲಿಯಲ್ಲೇ ಈ ಸೀಮಂತ ಕಾರ್ಯಕ್ರಮ ಜರುಗಿತು.
36
ಸೀಮಂತ ಶಾಸ್ತ್ರದ ಪ್ರಮುಖ ಆಕರ್ಷಣೆಯಾಗಿ ಗರ್ಭಿಣಿ ಹಸುವಿಗೆ ತರಹೇವಾರಿ ಹಣ್ಣುಗಳು, ಧಾನ್ಯಗಳು ಹಾಗೂ ನೆಚ್ಚಿನ ತಿನಿಸುಗಳನ್ನು ಉಣಬಡಿಸಲಾಯಿತು. ವರ್ತೂರು ಸಂತೋಷ್ ತಮ್ಮ ಕೈಯಾರೆ ಹಸುವಿಗೆ ತಿನಿಸುಗಳನ್ನು ತಿನ್ನಿಸಿ ಸಂಭ್ರಮಿಸಿದರು.
ನಮ್ಮ ರಾಜ್ಯದ ದಕ್ಷಿಣ ಕರ್ನಾಟಕ ಮೂಲದ ನಾಟಿ ಹಸುವಿನ ತಳಿಯಾದ ‘ಹಳ್ಳಿಕಾರ್’ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ವರ್ತೂರು ಸಂತೋಷ್, ಬಿಗ್ ಬಾಸ್ ರಿಯಾಲಿಟಿ ಶೋಗೆ ರೈತರ ಕೋಟಾದಲ್ಲಿ ಎಂಟ್ರಿ ಕೊಟ್ಟಿದ್ದರು. ತಮ್ಮ ಹಳ್ಳಿ ಶೈಲಿಯ ಮಾತು ಹಾಗೂ ಹಳ್ಳಿಕಾರ್ ಮೇಲಿನ ಪ್ರೀತಿಯಿಂದಲೇ ಇಡೀ ಕರ್ನಾಟಕದ ಜನತೆಗೆ ಚಿರಪರಿಚಿತರಾದರು.
56
ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಲಕ್ಷಾಂತರ ಬೆಲೆಬಾಳುವ ತಮ್ಮ ಹೋರಿಗಳನ್ನು ಕಿಚ್ಚು ಹಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವರ್ತೂರು ಸಂತೋಷ್ ಅವರ ಈ ಹಸುವಿನ ಸೀಮಂತ ಕಾರ್ಯಕ್ರಮದಲ್ಲೂ ಅಷ್ಟೇ ಕಳೆ ಇತ್ತು. ಸ್ಥಳೀಯ ರೈತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
66
ಹಳ್ಳಿಕಾರ್ ಹಸುವಿನ ಸೀಮಂತ ಶಾಸ್ತ್ರದ ಸುಂದರ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮೂಕಪ್ರಾಣಿಯೊಂದನ್ನು ತಮ್ಮದೇ ಕುಟುಂಬದ ಸದಸ್ಯೆಯಂತೆ ಕಂಡು ಸೀಮಂತ ಮಾಡಿರುವ ಸಂತೋಷ್ ಅವರ ಕಾರ್ಯಕ್ಕೆ ನೆಟ್ಟಿಗರು ಹಾಗೂ ಪ್ರಾಣಿಪ್ರೇಮಿಗಳು ಶ್ಲಾಘಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.