ವರ್ತೂರು ಸಂತೋಷ್​ ಹಸು ಮಾಲಾಶ್ರಿಗೆ ರಕ್ಷಿತಾ ಶೆಟ್ಟಿ ಮೇಲೆ ಏಕಿಷ್ಟು ಕೋಪ? ಏನ್​ ಮಾಡ್ತು ನೋಡಿ

Published : Jun 08, 2026, 08:17 PM IST

ಬಿಗ್‌ಬಾಸ್‌ ಖ್ಯಾತಿಯ ವರ್ತೂರು ಸಂತೋಷ್ ತಮ್ಮ ಹಳ್ಳಿಕಾರ್ ತಳಿಯ 'ಮಾಲಾಶ್ರೀ' ಎಂಬ ಹಸುವಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ, ರಕ್ಷಿತಾ ಶೆಟ್ಟಿ ಹಸುವಿಗೆ ಹಣ್ಣು ತಿನ್ನಿಸಲು ಹೋದಾಗ, ಹಸು ಅವರಿಂದ ಹಣ್ಣನ್ನು ಸ್ವೀಕರಿಸದೆ ಮುಖ ತಿರುಗಿಸಿದ ಘಟನೆ ನಡೆದಿದೆ.

PREV
16
ಬಿಗ್‌ಬಾಸ್‌ ಖ್ಯಾತಿಯ ವರ್ತೂರು ಸಂತೋಷ್‌

ಬಿಗ್‌ಬಾಸ್ (Bigg Boss) ಮೂಲಕ ಫೇಮಸ್‌ ಆದವರು ವರ್ತೂರು ಸಂತೋಷ್‌ ಮತ್ತು ರಕ್ಷಿತಾ ಶೆಟ್ಟಿ. ವರ್ತೂರು ಅವರು 11 ನೇ ಸೀಸನ್‌ ಮತ್ತು ರಕ್ಷಿತಾ ಅವರು 12 ನೇ ಸೀಸನ್‌ ಮೂಲಕ ಫೇಮಸ್‌ ಆದವರು.

26
ಹಳ್ಳಿಕಾರ್‌ ಹಸುವಿನ ಸೀಮಂತ

ವರ್ತೂರು ಸಂತೋಷ್‌ ಅವರು ಹಳ್ಳಿಕಾರ್‌ ಹಸುವಿನ ತಳಿಯನ್ನು ಸಾಕುತ್ತಿದ್ದಾರೆ. ತಮ್ಮ ಮನೆಯ ಹಸುಗಳನ್ನು ಮಕ್ಕಳಂತೆಯೇ ನೋಡುವ ವರ್ತೂರು ಸಂತೋಷ್‌ ಅವರು ಮಾಲಾಶ್ರೀ ಎನ್ನುವ ಹಸುವಿನ ಅದ್ಧೂರಿ ಸೀಮಂತ ಮಾಡಿದ್ದಾರೆ. ಬಿಗ್​ಬಾಸ್​ 12ರ ರನ್ನರ್ಸ್ ಅಪ್​ಗೆ 2 ಲಕ್ಷ ಕೊಡುವುದಾಗಿ ವರ್ತೂರು ಸಂತೋಷ್​ ಘೋಷಿಸಿದ್ದರು. ಅದರಂತೆ ರಕ್ಷಿತಾ ಅವರಿಗೆ ಇದೇ ಸಂದರ್ಭದಲ್ಲಿ ಕರೆದು ಸನ್ಮಾನವನ್ನೂ ಮಾಡಿದ್ದಾರೆ. ಆದರೆ ಇಲ್ಲೊಂದು ರೋಚಕ ಘಟನೆ ನಡೆದಿದೆ.

36
ಭರ್ಜರಿಯಾಗಿ ಸೀಮಂತ

ಹೆಣ್ಣುಮಕ್ಕಳ ಸೀಮಂತದಂತೆಯೇ ಭರ್ಜರಿಯಾಗಿ ಹಸುವಿನ ಸೀಮಂತವೂ ನಡೆದಿದೆ. ಇದಕ್ಕಾಗಿ ಅದ್ಧೂರಿಯಾಗಿ ಅಲಂಕಾರವನ್ನೂ ಮಾಡಲಾಗಿತ್ತು. ಹಲವಾರು ಮಂದಿಯನ್ನು ಇದಕ್ಕೆ ಆಹ್ವಾನಿಸಲಾಗಿತ್ತು.

46
ಮೂತಿ ಸೊಟ್ಟಗೆ ಮಾಡಿದ ಹಸು

ಈ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ ಹಸುವಿಗೆ ಬಾಳೆಹಣ್ಣು ಮತ್ತು ಸೇಬು ಹಣ್ಣನ್ನು ತಿನ್ನಿಸಲು ಮುಂದಾದಾಗ, ಹಸು ಅದನ್ನು ತಿನ್ನಲೇ ಇಲ್ಲ. ಬಾಯಿಯನ್ನೂ ಬಿಡದೆ ಮೂತಿ ಸೊಟ್ಟಗೆ ಮಾಡಿತು.

56
ರಕ್ಷಿತಾ ಕೊಟ್ಟ ಹಣ್ಣು ಒಲ್ಲೆ ಎಂದ ಹಸು

ಸೇಬು ಹಣ್ಣನ್ನು ಕಟ್‌ ಮಾಡಿಕೊಟ್ಟರೂ ರಕ್ಷಿತಾ ಕೈಯಿಂದ ಹಸು ಹಣ್ಣನ್ನು ಸ್ವೀಕರಿಸಲಿಲ್ಲ. ಆ ಬಳಿಕ ಪಕ್ಕದಲ್ಲಿಯೇ ಇದ್ದವರು ತಿನ್ನಿಸಿದಾಗ ಅದು ತಿನ್ನಲು ಬಾಯಿ ತೆರೆಯಿತು.

66
ಏಕಿಷ್ಟು ಕೋಪ?

ರಕ್ಷಿತಾ ಶೆಟ್ಟಿ ಕಂಡ್ರೆ ಹಸುವಿಗೆ ಏಕಿಷ್ಟು ಕೋಪ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories