ಶೋಯೆಬ್ ಅವರು ಮಾತನಾಡಿ, "ದೀಪಿಕಾಗೆ ಆರೋಗ್ಯ ಸಮಸ್ಯೆಯಿದೆ. ಹೊಟ್ಟೆಯಲ್ಲಿ ಗಂಭೀರ ಸಮಸ್ಯೆ ಇದೆ. ನಾನು ಚಂಡೀಗಢದಲ್ಲಿದ್ದಾಗ, ದೀಪಿಕಾಗೆ ಹೊಟ್ಟೆ ನೋವು ಶುರುವಾಯಿತು, ಮೊದಲು ಇದು ಅಸಿಡಿಟಿಯಿಂದ ಆಗಿರಬಹುದು ಅಂತ ಅಂದುಕೊಂಡೆವು. ಆದರೆ ನೋವು ಕಡಿಮೆಯಾಗದಿದ್ದಾಗ, ನಾವು ಫ್ಯಾಮಿಲಿ ಡಾಕ್ಟರ್ ಭೇಟಿ ಮಾಡಿದೆವು. ಆ ಡಾಕ್ಟರ್ ನನ್ನ ತಂದೆಗೂ ಚಿಕಿತ್ಸೆ ನೀಡಿದ್ದರು. ಡಾಕ್ಟರ್ ನಮಗೆ ಕೆಲವು ಆಂಟಿಬಯೋಟಿಕ್‌ಗಳನ್ನು ನೀಡಿ, ರಕ್ತ ಪರೀಕ್ಷೆ ಮಾಡಿಸಲು ಹೇಳಿದರು. ಮೇ 5 ರವರೆಗೆ ದೀಪಿಕಾ ಆಂಟಿಬಯೋಟಿಕ್‌ಗಳನ್ನು ತಗೊಂಡಿದ್ದಾಳೆ. ನನ್ನ ತಂದೆಯ ಜನ್ಮದಿನದ ನಂತರ, ಅವರಿಗೆ ಮತ್ತೆ ನೋವು ಶುರುವಾಗಿದೆ. ರಕ್ತ ಪರೀಕ್ಷೆ ಮಾಡಿದಾಗ ದೇಹದಲ್ಲಿ ಸೋಂಕು ಇರುವುದು ಗೊತ್ತಾಗಿದೆ” ಎಂದು ಹೇಳಿದ್ದಾರೆ.