ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿರುವ ಮನೀಷಾ ಕೆ.ಎಸ್. ಅವರು, ನಟನೆ, ಗಾಯನ, ಡಬ್ಬಿಂಗ್ ಮೂಲಕ ಬ್ಯೂಸಿ ಆಗಿದ್ದವರು. ಆದರೆ, ಈ ಎಲ್ಲವನ್ನೂ ಬಿಟ್ಟು ಶ್ರೀಮಂತ ರಿಯಾಲಿಟಿ ಶೋ ಮಲಯಾಳಂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರಿಗೆ ಖ್ಯಾತಿಯನ್ನು ಗಳಿಸುವುದಕ್ಕೆ ಬಂದರು.
ಮಲಯಾಳಂ ಸೇರಿ ದಕ್ಷಿಣ ಭಾರತದ ವಾಹಿನಿಗಳ ಎಲ್ಲ ವೀಕ್ಷಕರು ನಟಿ ಮನೀಷ ಕೆ.ಎಸ್. ಅವರನ್ನು ಬಿಗ್ ಬಾಸ್ ಮನೆಯಿಂದ ಗುರುತಿಸಿದರು. ಆದರೆ, ಬಿಗ್ ಬಾಸ್ ಹೋಗಿಬಂದ ನಂತರ ನಟಿ ಮನಿಷಾ ಅವಕಾಶಗಳನ್ನು ಬಿಟ್ಟು ಹೋಗಿದ್ದರಿಂದ ಸ್ಥಿರ ಆದಾಯವಿಲ್ಲದೆ ತನಗಾದ ಆರ್ಥಿಕ ಸಂಕಕಷ್ಟ ಅನುಭವಗಳನ್ನು ವೀಕ್ಷಕರ ಮುಂದೆ ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ.