ಕಳೆದ ಮಾರ್ಚ್ 27ರಂದು ದೇವಸ್ಥಾನವೊಂದರಲ್ಲಿ ಪೃಥ್ವಿ ಭಟ್ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ನಾನ್ ಫಿಕ್ಷನ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ ಅಭಿಷೇಕ್ ಅವರು ಸರಳವಾಗಿ ಮದುವೆಯಾಗಿದ್ದರು.
211
ಈ ಮದುವೆಗೆ ಪೃಥ್ವಿ ಭಟ್ ತಂದೆ ಅವರ ವಿರೋಧ ಇತ್ತು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ತಂದೆಗೆ ಈ ವಿಷಯವನ್ನು ತಿಳಿಸಿದ್ದರು.
311
ಪೃಥ್ವಿ ಭಟ್ ಕಾಸರಗೋಡಿನವರು. ಅಭಿಷೇಕ್ ಅವರ ಜಾತಿ ಬೇರೆ ಎಂದು ಅವರ ತಂದೆ ವಿರೋಧ ಮಾಡಿದ್ದರು ಎನ್ನಲಾಗಿದೆ. ಮಗಳು ನನ್ನ ಮೇಲೆ ಆಣೆ ಮಾಡಿಯೂ ಕೂಡ ಓಡಿ ಹೋಗಿ ಮದುವೆ ಆಗಿದ್ದಾಳೆ ಎಂದು ಅವರ ತಂದೆ ಆರೋಪ ಮಾಡಿದ್ದರು.
ಪೃಥ್ವಿ ಭಟ್ ಅವರಿಗೆ ವಶೀಕರಣ ಮಾಡಿ ಮದುವೆ ಮಾಡಲಾಗಿದೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್ ಇದಕ್ಕೆಲ್ಲ ಕಾರಣ ಎಂದು ಅವರು ಆರೋಪ ಮಾಡಿದ್ದರು.
511
ಆಮೇಲೆ ನರಹರಿ ದೀಕ್ಷಿತ್ ಅವರು ಇದಕ್ಕೆಲ್ಲ ಪ್ರತಿಕ್ರಿಯಿಸಿ, "ಎರಡೂವರೆ ವರ್ಷದಿಂದ ಅಭಿಷೇಕ್, ಪೃಥ್ವಿಯನ್ನು ಪ್ರೀತಿ ಮಾಡುತ್ತಿದ್ದ. ಇದು ನಮಗೆ ಗೊತ್ತಾದಾಗ ನಾನೇ ಪೃಥ್ವಿ ಮನೆಗೆ ಹೋಗಿ ತಂದೆ ಬಳಿ ಮಾತನಾಡಿದ್ದೇನೆ. ಇನ್ನೊಂದು ಹುಡುಗನನ್ನು ನೋಡಿ ಪೃಥ್ವಿ ನಿಶ್ಚಿತಾರ್ಥ ಮಾಡಲು ರೆಡಿಯಾದಾಗ ಪೃಥ್ವಿ ಈ ರೀತಿ ಮಾಡಿದ್ದಾಳೆ. ಪೃಥ್ವಿ ಮದುವೆ ಆಗುವ ದಿನವೇ ಅವಳು ಫೋನ್ ಮಾಡಿ ಅರ್ಜೆಂಟ್ ಇಲ್ಲಿಗೆ ಬನ್ನಿ ಸರ್ ಅಂತ ಹೇಳಿದಳು. ನಾನು ಹೋದಮೇಲೆ ಮದುವೆ ಆಗಿತ್ತು, ಅಕ್ಷತೆ ಕಾಳು ಹಾಕಿ ಬಂದೆ" ಎಂದು ಹೇಳಿದ್ದರು.
611
ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರ ಆರತಕ್ಷತೆಗೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು ಭಾಗವಹಿಸಿದ್ದರು.
711
ಬಿಗ್ ಬಾಸ್ ಕನ್ನಡ ಸೀಸನ್ 11 ವಿಜೇತ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಹಾಡು ಕೂಡ ಹಾಡಿದ್ದಾರೆ.
811
ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರ ಮದುವೆ ಆರತಕ್ಷತೆಯಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರು ಪತ್ನಿ ಮಹತಿ, ಮಗಳ ಜೊತೆಗೆ ಭಾಗಿಯಾಗಿದ್ದಾರೆ.
911
ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಡ್ಯಾನ್ಸ್, ಸಂಗೀತ ಎಂದು ತುಂಬ ಗ್ರ್ಯಾಂಡ್ ಆಗಿ ಆರತಕ್ಷತೆ ನಡೆದಿದೆ.
1011
ಮದುವೆಯಾದಬಳಿಕ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದ ಪೃಥ್ವಿ ಭಟ್ ಅವರು ಕೆಲ ಕಾರ್ಯಕ್ರಮಗಳಿಗೆ ಹಾಡಿದ್ದರು. ಇನ್ನು ಅನೇಕ ಗಾಯಕರು ಈ ಆರತಕ್ಷತೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದರು.
1111
ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಡ್ರೀಮಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಒಂದು ಖಾಸಗಿ ವಾಹಿನಿಯೇ ಈ ಆರತಕ್ಷತೆಯಲ್ಲಿ ಭಾಗಿಯಾದಂತೆ ಕಾಣಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.