Bigg Bossನಲ್ಲಿ ನನ್ನ ಸಾಯಿಸೋ ಪ್ರಯತ್ನ ನಡೆದಿತ್ತು: ಆ ದಿನ ನಡೆದ ಶಾಕಿಂಗ್​ ಘಟನೆ ನೆನೆದ ಸಂಗೀತಾ ಶೃಂಗೇರಿ

Published : Jan 03, 2026, 06:52 PM IST

ಬಿಗ್ ಬಾಸ್ 10 ಖ್ಯಾತಿಯ ಸಂಗೀತಾ ಶೃಂಗೇರಿ ತಮ್ಮ ಹೊಸ ಆಲ್ಬಂ ಹಾಡಿನ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ, ಕಾರ್ತಿಕ್ ಮಹೇಶ್ ಜೊತೆಗಿನ ಜಗಳದ ಬಗ್ಗೆ ಮಾತನಾಡಿದ ಅವರು, ಬಿಗ್ ಬಾಸ್ ಮನೆಯಲ್ಲಿ ತನ್ನನ್ನು ಸಾಯಿಸುವ ಯತ್ನ ನಡೆದಿತ್ತು ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

PREV
16
ಆಲ್ಬಂ ಸಾಂಗ್​ ರಿಲೀಸ್​

ಬಿಗ್ ಬಾಸ್ 10 ಅಲ್ಲಿ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ನಟಿ ಸಂಗೀತಾ ಶೃಂಗೇರಿ ಅವರೂ ಒಬ್ಬರು. ಇದೀಗ ಸಂಗೀತಾ ಅವರ ಆಲ್ಬಂ ಸಾಂಗ್​ ರಿಲೀಸ್​ ಕಾರ್ಯಕ್ರಮ ನಡೆದಿದ್ದು, ಇದರಿಂದಾಗಿ ಮತ್ತೆ ಸದ್ದು ಮಾಡುತ್ತಿದ್ದಾರೆ ಅವರು. ಅಷ್ಟಕ್ಕೂ, ಬಿಗ್​ಬಾಸ್​ ಮನೆಯಲ್ಲಿ ಲವ್​ ವಿಷಯ ಬಂದಾಗ ಹೆಚ್ಚು ಸದ್ದು ಮಾಡಿದ್ದ ಜೋಡಿ ಎಂದರೆ ಅದು ಕಾರ್ತಿಕ್ ಮಹೇಶ್​ ಮತ್ತು ಸಂಗೀತಾ ಶೃಂಗೇರಿ.

26
ಉತ್ತಮ ಕೆಮಿಸ್ಟ್ರಿ

ಬಿಗ್​ಬಾಸ್ ಮನೆಯಲ್ಲಿ ಮೊದಲ ದಿನವೇ ಇಬ್ಬರ ನಡುವೆ ಬಹಳಷ್ಟು 'ಕೆಮೆಸ್ಟ್ರಿ' ಕಂಡು ಬಂದಿತ್ತು. 'ಫಸ್ಟ್ ಒಳ್ಳೇ ಇಂಪ್ರಶನ್' ಎಂಬ ಚರ್ಚೆಯಲ್ಲಿ ಕೂಡ ಸಂಗೀತಾ 'ಕಾರ್ತಿಕ್ ಮಹೇಶ್' ಹೆಸರು ಹೇಳಿದ್ದರೆ, ಕಾರ್ತಿಕ್ ಸಂಗೀತಾ ಹೆಸರನ್ನೇ ಹೇಳಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಅದರಲ್ಲಿಯೂ ಶುರುವಿನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧ ಒಂದು ಲೆವೆಲ್​ ಮುಂದೆಯೇ ಹೋಗಿತ್ತು. ಪ್ರೇಕ್ಷಕರು ಇವರನ್ನು ನೋಡುವ ಸ್ಟೈಲೇ ಬೇರೆಯಾಗಿತ್ತು. ಇದಕ್ಕೆ ಕಾರಣ, ಬಿಗ್​ಬಾಸ್​ ಮನೆಯಲ್ಲಿ ಇವರಿಬ್ಬರೂ ಕೇವಲ ಸ್ನೇಹಿತರಾಗಿ ಇರದೇ ಕೆಲವು ಸಲ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಂಡರು.

36
ಗಾಢ ಪ್ರೀತಿ

ಇದೇ ವೇಳೆ ಒಂದು ಹಂತದಲ್ಲಿ ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು ಕೂಡ. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಕೆಲ ವಾರ ಇವರಿಬ್ಬರ ನಡುವಿನ ಗಾಢ ಪ್ರೀತಿಗೆ ಅದೇನಾಯಿತು. ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು.

46
ನಾನು ತುಂಬಾ ಸ್ಟ್ರಾಂಗ್​

ಈ ಬಗ್ಗೆ ಇದೀಗ ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ ಸಂಗೀತಾ (Bigg Boss Sangeetha Sringeri) ನನಗೆ ಫ್ರೆಂಡ್ಸ್​ ಕಡಿಮೆ. ಯಾರು ಏನೇ ನನ್ನ ವಿರುದ್ಧ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವ ತಾಳ್ಮೆ ನನಗೆ ಇಲ್ಲ. ಬೇರೆಯವರು ಏನೇ ಹೇಳಿದ್ರೂ ನಾನು ತುಂಬಾ ಸ್ಟ್ರಾಂಗ್​. ಆದರೆ, ನನ್ನವರೇ ಹೇಳಿದಾಗ ಅದರಿಂದ ಹೊರಕ್ಕೆ ಬರುವುದು ತುಂಬಾ ಕಷ್ಟ. ಆದರೆ ಬಿಗ್​ಬಾಸ್​ನಲ್ಲಿ ಕಾರ್ತಿಕ್​ ಅವರು ನನ್ನ ಬಗ್ಗೆ ಮಾತನಾಡಿದ್ದರಿಂದ ಅದನ್ನು ಸಹಿಸಿಸಕೊಳ್ಳಲು ಆಗದೇ ತುಂಬಾ ದೂರವಾಗಿ ಬಿಟ್ಟಿದ್ದೆ ಎಂದಿದ್ದಾರೆ.

56
ಅವೆಲ್ಲಾ ಸಹಜ ಎಂದು ತಿಳಿಯಿತು

ಹೊರಗಡೆ ಬಂದು ವಿಚಾರ ಮಾಡಿದಾಗ, ಸ್ಪಿರಿಚುವಲಿ ನೋಡಿದಾಗ ನಾನೇ ತಪ್ಪು ಎನ್ನಿಸಿತು. ಏಕೆಂದರೆ, ಬಿಗ್​ಬಾಸ್​ನಲ್ಲಿ ಎಲ್ಲರೂ ಬಂದಿರೋದು ಕಪ್​ ಗೆಲ್ಲಲು. ಆದ್ದರಿಂದ ಇವೆಲ್ಲಾ ಸಹಜ ಎಂದು ತಿಳಿದಾಗ ನಾನು ಹೀಗೆ ಮಾಡಬಾರದಿತ್ತು ಎನ್ನಿಸಿತು ಎಂದಿದ್ದಾರೆ ನಟಿ.

66
ಸಾಯಿಸೋ ಅಟೆಂಪ್ಟ್​

ಇದೇ ವೇಳೆ ಶಾಕಿಂಗ್​ ವಿಷ್ಯವೊಂದನ್ನೂ ಅವರು ರಿವೀಲ್​ ಮಾಡಿದ್ದಾರೆ. ಅದೇನೆಂದರೆ, ಅಲ್ಲಿ ನನ್ನ ಮೇಲೆ ಪೌಡರ್​ ಒಂದನ್ನು ಹಾಕಿ ಸಾಯಿಸೋ ಅಟೆಂಪ್ಟ್​ ಕೂಡ ನಡೆದಿತ್ತು. ಅದು ಓಕೆ ಎಂದು ನಾನು ಅಂದುಕೊಂಡರೆ, ಕಾರ್ತಿಕ್​ ಏನೂ ಅಷ್ಟು ದೊಡ್ಡ ಪಾಪ ಮಾಡಿಲ್ಲ ಎಂದು ನನಗೆ ಅನ್ನಿಸ್ತಿದೆ. ಆಟದಲ್ಲಿ ಇವೆಲ್ಲಾ ಕಾಮನ್​ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories