BBK 12 ಟ್ರೋಫಿ ಹೊಡಿತಾರೆ ಎನ್ನುವಷ್ಟರಲ್ಲಿ ಭಾರೀ ಎಡವಟ್ಟು ಮಾಡ್ಕೊಂಡ Gilli Nata; ಬೆಲೆ ತೆರಬೇಕಾಗತ್ತಾ?

Published : Jan 03, 2026, 02:38 PM IST

ಇನ್ನೇನು ಹದಿನೈದು ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ತೆರೆ ಬೀಳುವುದು. ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲವಿದೆ. ಇನ್ನು ಗಿಲ್ಲಿ ನಟ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಇದೆ. ಇವರು ವಿನ್‌ ಆಗ್ತಾರೆ ಎಂಬ ನಿರೀಕ್ಷೆ ಮಧ್ಯೆ ಕೆಲ ತಪ್ಪುಗಳನ್ನು ಮಾಡಿಕೊಂಡಿದ್ದಾರೆ. 

PREV
17
ಏಕವಚನದ ಮಾತುಗಳು

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಅವರಿಗಿಂತ ದೊಡ್ಡವರಿದ್ದಾರೆ. ಹುಡುಗರಿಗೆ ಎಲ್ಲರಿಗೂ ಅಣ್ಣಾ ಎಂದು ಕರೆಯುವ ಗಿಲ್ಲಿ ನಟ ಅವರು, ಬಹುತೇಕ ಎಲ್ಲರ ಜೊತೆಯೂ ಜಗಳ ಆಡಿದ್ದುಂಟು. ಆದರೆ ಅಶ್ವಿನಿ ಗೌಡ ಅವರಿಗೆ ನೀನು, ಹೋಗು, ಬಾ ಎಂದು ಉದ್ದೇಶಪೂರ್ವಕವಾಗಿ ಮಾತನಾಡುತ್ತಾರೆ. 26 ವರ್ಷದ ಗಿಲ್ಲಿ ನಟ ಅವರು ಅಶ್ವಿನಿ ಗೌಡಗೆ ಹೋಗು, ಬಾ ಎನ್ನೋದು ಸರಿಯೇ?

27
ಗೌರವ ಕೊಡಲ್ಲ

ಕಾವ್ಯ ಶೈವ ಭಾವನೆಗಳಿಗೆ ಬೆಲೆ ಕೊಡುವ ಗಿಲ್ಲಿ ನಟ, ಉಳಿದವರ ಮಾತಿಗೆ ಬೆಲೆ ಕೊಡೋದಿಲ್ಲ, ಗೌರವ ಕೊಡೋದಿಲ್ಲ. ಇದನ್ನು ರಜತ್‌ ಕೂಡ ಒಪ್ಪಿದ್ದು, ಈ ರೀತಿ ಮಾಡುತ್ತಿರುವುದಿಕ್ಕೆ ಕಾರಣ ಏನು ಎಂದು ಗಿಲ್ಲಿ ಹೇಳಬೇಕಿದೆ ಎಂದಿದ್ದರು.

37
ಕಾಮಿಡಿ ಹೆಸರಿನಲ್ಲಿ ತೇಜೋವಧೆ

ಗಿಲ್ಲಿ ನಟ ಅವರಿಗೆ ಕಾಮಿಡಿಯೇ ಶಕ್ತಿ. ಕಾಮಿಡಿ ಶೋಗಳನ್ನು ಮಾಡಿಕೊಂಡೇ ಅವರು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಆದರೆ ಕಾಮಿಡಿ ಹೆಸರಿನಲ್ಲಿ ಬೇರೆಯವರನ್ನು ತುಳಿದು ಹಾಕ್ತಾರೆ, ತೇಜೋವಧೆ ಮಾಡ್ತಾರೆ, ಪರ್ಸನಲ್‌ ಆಗಿ ಮಾತಾಡ್ತಾರೆ ಎನ್ನೋದು ಸಹಸ್ಪರ್ಧಿಗಳ ಆರೋಪ. ಇದೇ ಅವರಿಗೆ ಮುಳುವು ಆಗಬಹುದಾ ಎಂಬ ಪ್ರಶ್ನೆ ಕಾಡಿದೆ.

47
ಬಾಡಿ ಶೇಮಿಂಗ್‌ ವಿಚಾರ

ಅಶ್ವಿನಿ ಗೌಡ ಅವರಿಗೆ ವಿಗ್‌, ಹಲ್ಲು ಸೆಟ್‌, ಮುದುಕಿ, ವಯಸ್ಸಾಗಿದೆ ಎಂದು ಕರೆಯೋದು ಸರಿಯೇ? ಅಲ್ಲದೆ ಜಾಹ್ನವಿಗೆ ಕೂಡ ಹಲ್ಲು ಸೆಟ್‌, ಮುದುಕಿ, ಅಜ್ಜಿ, ಡೈ ಹಾಕಿಕೊಳ್ತೀಯಾ ಎಂದು ಹೀಯಾಳಿಸಿದರು. ಹಾಗೆ ನೋಡಿದರೆ ಇದು ಬಾಡಿ ಶೇಮಿಂಗ್‌ ಆಗುವುದು ಎಂದು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.

57
ಫಿಸಿಕಲ್‌ ಟಾಸ್ಕ್‌ ಕಡಿಮೆ

ಗಿಲ್ಲಿ ನಟ ಅವರು ಫಿಸಿಕಲ್‌ ಟಾಸ್ಕ್‌ ಎಂದರೆ ದೂರ ಹೋಗಿದ್ದೇ ಜಾಸ್ತಿ. ಆದರೂ ಅಶ್ವಿನಿ ಗೌಡ ವಿರುದ್ಧ ಅವರು ಎರಡು ಬಾರಿ ಟಾಸ್ಕ್‌ ಆಡಿ ಗೆದ್ದಿದ್ದಾರೆ. ಧನುಷ್‌ ವಿರುದ್ಧ ಗಿಲ್ಲಿ ನಟ ಟಾಸ್ಕ್‌ ಆಡಿಲ್ಲ, ಆಡಬೇಕು ಎಂದು ರಜತ್‌, ಸ್ಪಂದನಾ ಕೂಡ ಹೇಳಿದ್ದುಂಟು.

67
ಮನೆ ಕೆಲಸ ಮಾಡಲ್ಲ

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಅವರು ಕೆಲಸವನ್ನೇ ಮಾಡಲ್ಲ, ಮೈಗಳ್ಳ, ಸೋಂಭೇರಿ ಎಂದು ಕೂಡ ಹೇಳಲಾಗಿದೆ. ಹೀಗಿದ್ದರೂ ಅವರ ಬಳಿ ಕೆಲಸ ಮಾಡಿಸಿಕೊಳ್ಳೋಕೆ ಉಳಿದವರು ಹರಸಾಹಸ ಪಟ್ಟಿದ್ದುಂಟು. ಕಾವ್ಯ ಶೈವ ಕ್ಯಾಪ್ಟನ್ಸಿ ಕೆಲಸದ ವೇಳೆ ಗಿಲ್ಲಿ ಕೆಲಸ ಮಾಡಿದ್ದಾರೆ ಎಂದು ಗಿಲ್ಲಿ ಹೇಳಿದ್ದರು.

77
ಟ್ರೋಫಿ ಹೊಡಿತಾರಾ?

ಧನುಷ್‌ ಗೌಡ, ರಕ್ಷಿತಾ ಶೆಟ್ಟಿ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ, ಧ್ರುವಂತ್ ಅವರು ಫಿನಾಲೆಗೆ ಹೋಗಲಿದ್ದಾರೆ ಎಂಬ ನಿರೀಕ್ಷೆಯಿದೆ.

ಈ ಮಧ್ಯೆ ಅಶ್ವಿನಿ ಗೌಡ, ಧ್ರುವಂತ್‌, ರಕ್ಷಿತಾ ಶೆಟ್ಟಿ ಕೂಡ ಒಂದಿಷ್ಟು ತಪ್ಪುಗಳನ್ನು ಮಾಡಿ ನೆಗೆಟಿವ್‌ ಪ್ರತಿಕ್ರಿಯೆ ಪಡೆದಿದ್ದಾರೆ. ಹೀಗಾಗಿ ಗಿಲ್ಲಿ ನಟ ಅವರು ಟ್ರೋಫಿ ಪಡೆದರೂ ಆಶ್ಚರ್ಯವಿಲ್ಲ. ಆದರೆ ಪ್ರತಿಭಾವಂತ ಗಿಲ್ಲಿ ಅವರು ತಪ್ಪು ತಿದ್ದಿಕೊಂಡು ಟ್ರೋಫಿ ಪಡೆಯಲಿ ಎನ್ನೋದು ಅನೇಕರ ಆಶಯವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories