BBK 12: ರಾಶಿಕಾ ಎಫರ್ಟ್ ಮನೆಯವರಿಗ್ಯಾಕೆ ಕಾಣಿಸ್ತಿಲ್ಲ… ಟಾಸ್ಕ್ ಕ್ವೀನ್’ಗೆ ಜನ ಬೆಂಬಲ, ಸಿಗುತ್ತಾ ಕಿಚ್ಚನ ಚಪ್ಪಾಳೆ!

Published : Jan 03, 2026, 01:03 PM IST

BBK 12: ಬಿಗ್ ಬಾಸ್ 12 ರ ಸ್ಪರ್ಧಿ ರಾಶಿಕಾ ಶೆಟ್ಟಿ ಟಾಸ್ಕ್ ಅಂತ ಬಂದ್ರೆ ಆಕೆಯನ್ನು ಟಾಸ್ಕ್ ಕ್ವೀನ್ ಅಂತಾನೆ ಹೇಳಬಹುದು. ಎಂತಹುದೇ ಟಾಸ್ಕ್ ಇದ್ದರೂ, ಎಲ್ಲರಿಗೂ ಸವಾಲು ಹಾಕಿ ಗೆಲ್ಲುತ್ತಾಳೆ. ಆದರೆ ಉತ್ತಮ ಕೊಡುವ ಸಮಯದಲ್ಲಿ ಮಾತ್ರ ಯಾರಿಗೂ ರಾಶಿಕ ಎಫರ್ಟ್ ಕಾಣಿಸಲ್ಲ ಯಾಕೆ ಅಂತ ಕೇಳ್ತಿದ್ದಾರೆ ಜನ. 

PREV
16
ಬಿಗ್ ಬಾಸ್ ಸೀಸನ್ 12

ಬಿಗ್ ಬಾಸ್ ಸೀಸನ್ 12 ಇದೀಗ ಕೊನೆಯ ಹಂತ ತಲುಪಿದೆ. ಇನ್ನೇನು ಒಂದು ವಾರದಲ್ಲಿ ಬಿಗ್ ಬಾಸ್ ಅಂತ್ಯ ಕಾಣಲಿದೆ. ಈ ಮೂರು ತಿಂಗಳಲ್ಲಿ ಅದ್ಭುತವಾಗಿ ಟಾಸ್ಕ್ ಆಡಿ, ಹಲವಾರು ಟಾಸ್ಕ್ ಗೆದ್ದಿರುವ ರಾಶಿಕಾ ಶೆಟ್ಟಿಯ ಎಫರ್ಟನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.

26
ರಾಶಿಕಾ ಶೆಟ್ಟಿ

ಬಿಗ್ ಬಾಸ್ ಸ್ಪರ್ಧಿಯಾಗಿರುವ ನಟಿ ರಾಶಿಕಾ ಶೆಟ್ಟಿ ಆರಂಭದಲ್ಲಿ ತಮ್ಮ ಮಾತುಗಳಿಂದ ಸ್ವಲ್ಪ ಕಿರಿಕ್ ಮಾಡಿಕೊಂಡಿದ್ದರೂ, ಸೂರಜ್ ಜೊತೆ ಕ್ಲೋಸ್ ಆಗಿ ಕೊಂಚ ಆಟದಿಂದ ದೂರ ಇದ್ದರೂ ಸಹ ಟಾಸ್ಕ್ ಅಂತ ಬಂದ್ರೆ ಆಕೆ ಸೂಪರ್ ಅಂತಾನೆ ಹೇಳಬಹುದು.

36
ಟಾಸ್ಕ್ ಕ್ವೀನ್ ರಾಶಿಕಾ

ಎಂತಹುದೇ ಟಫ್ ಟಾಸ್ಕ್ ಕೊಟ್ಟರೂ ಸಹ ರಾಶಿಕಾ ಶೆಟ್ಟಿ ಎದುರಿನ ಸ್ಪರ್ಧಿಗೆ ಸವಾಲು ಹಾಕಿ , ಅದನ್ನು ಗೆದ್ದು ಬಿಡುತ್ತಿದ್ದರು. ಹಾಗಾಗಿಯೇ ಆರಂಭದಿಂದಲೇ ರಾಶಿಕಾಗೆ ಟಾಸ್ಕ್ ಕ್ವೀನ್ ಎಂದೇ ಕರೆಯುತ್ತಾರೆ ಅಭಿಮಾನಿಗಳು.

46
ರಾಶಿಕಾ ಎಫರ್ಟ್ ಮನೆ ಮಂದಿಗೆ ಕಾಣಿಸ್ತಿಲ್ವಾ?

ರಾಶಿಕಾ ಪ್ರತಿವಾರ ಇಷ್ಟೊಂದು ಎಫರ್ಟ್ ಹಾಕಿ ಆಟ ಆಡಿ ಗೆದ್ದರೂ ಸಹ ಮನೆ ಮಂದಿ ಮಾತ್ರ ಆಕೆಯ ಶ್ರಮವನ್ನು ಗುರುತಿಸದೇ ತಪ್ಪು ಮಾಡಿದ್ರೆ, ಏನೂ ಮಾಡದೇ ಇರುವ ಹಲವರಿಗೆ ಉತ್ತಮ ಸ್ಪರ್ಧಿ ಎಂದು ಕೊಡುವ ಮನೆಮಂದಿ ರಾಶಿಕಾಗೆ ಯಾಕೆ ಕೊಡ್ತಿಲ್ಲ ಎಂದು ಸೋಶಿಯಲ್ ಮಿಡಿಯಾ ಟ್ರೋಲ್ ಪೇಜ್ ಗಳು ಸದ್ದು ಮಾಡುತ್ತಿವೆ.

56
ಜನ ಹೇಳ್ತಿರೋದು ಏನು?
  1. Unlucky girl. Day 1 ಇಂದ ಅಷ್ಟು efforts ಹಾಕಿ ಆಡಿದ್ರು ಒಂದು appreciation ಇಲ್ಲ, ಒಂದು ಉತ್ತಮ ಇಲ್ಲ. ಅದೇ ಬೇರೆ ಯಾರಾದ್ರೂ ಯಾವಾಗ್ಲೋ ಒಮ್ಮೆ 1 task ಆಡಿದ್ರೆ ಸಾಕು ಅವರಿಗೆ ಉತ್ತಮ ಕೊಡ್ತಾರೆ.
  2. Unlucky girl ಮನೆಯವರು ಕೊಡದಿದ್ದರೆ ಏನಾಯ್ತು ಇಡಿ ಕರ್ನಾಟಕ ಜನತೆ ಮೆಚ್ಚುಗೆ ಪಡೆದವರು.
  3. ಧನುಷ್ captain ಆಗಿದ್ದು ರಾಶಿ ಇಂದ ಆದ್ರೆ ಉತ್ತಮ ಸ್ಪಂದನ ಗೆ
66
ಕಿಚ್ಚನ ಚಪ್ಪಾಳೆ ಆದ್ರೂ ಸಿಗುತ್ತಾ?

ಆರಂಭದಿಂದ ನೋಡಿದ್ರೂ ರಾಶಿಕಾ ಉತ್ತಮ ಆಟಗಾರ್ತಿ ಹೌದು, ಆದರೆ ಇನ್ನಿತರರ ಗುಂಪು ಆಟದಲ್ಲಿ ರಾಶಿಕಾಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಇದೀಗ ಈ ವಾರದ ಕೊನೆಯ ಕಿಚ್ಚನ ಚಪ್ಪಾಳೆ ಆದ್ರೂ ರಾಶಿಕಾಗೆ ಸಿಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories